ಕುಶಾಲನಗರ, ಜೂ. ೧೯: ಕುಶಾಲನಗರ ಕಾವೇರಿ ನದಿ ಮೇಲ್ಭಾಗದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಡ್ರ್ರೋಣ್ ಕ್ಯಾಮರಾಕ್ಕೆ ಪಕ್ಷಿಯೊಂದು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಕ್ಯಾಮರಾ ನದಿ ಪಾಲಾದ ಘಟನೆ ನಡೆದಿದೆ.
ಜಿಲ್ಲೆಗೆ ಭೇಟಿ ನೀಡಿದ್ದ ಸಂಸ್ಥೆಯೊAದು ನದಿ, ಪ್ರಕೃತಿ ದೃಶ್ಯಗಳನ್ನು ಸೆರೆಹಿಡಿಯುವ ಸಂದರ್ಭ ಅವಘಡ ಸಂಭವಿಸಿದ್ದು ಘಟನೆಯಿಂದ ಲಕ್ಷಾಂತರ ಮೌಲ್ಯದ ನಷ್ಟ ಉಂಟಾಗಿದೆ.
ಕ್ಯಾಮರಾ ಪತ್ತೆ ಮಾಡಲು ದುಬಾರೆಯಿಂದ ರ್ಯಾಫ್ಟರ್ ಮತ್ತು ಈಜುಗಾರರನ್ನು ಕರೆಸಿ ಕುಶಾಲನಗರ ಕೊಪ್ಪ ಗಡಿ ಭಾಗದ ಕಾವೇರಿ ನದಿ ಸೇತುವೆ ಬಳಿ ನದಿಯಲ್ಲಿ ಜಾಲಾಡಿದರೂ ಕ್ಯಾಮರಾ ಪತ್ತೆಯಾಗಿಲ್ಲ.
ಕ್ಯಾಮೆರಾ ನದಿಗೆ ಬಿದ್ದ ಜಾಗದಲ್ಲಿ ಮೊಸಳೆಗಳು ಬೀಡು ಬಿಟ್ಟಿರುವ ಭಯದ ನಡುವೆ ಪತ್ತೆ ಕಾರ್ಯ ಮುಂದುವರಿಸಲು ಹಿಂದೇಟು ಹಾಕುವ ಪರಿಸ್ಥಿತಿ ಕೂಡ ಎದುರಾಗಿತ್ತು.
-ಸಿಂಚು