ಮಡಿಕೇರಿ, ಜೂ. ೧೯: ಕರ್ನಾಟಕ ರಾಜ್ಯ ಜೂನಿಯರ್ ಹಾಗೂ ಸಬ್ ಜೂನಿಯರ್ ಪುರುಷರ ಹಾಗೂ ಮಹಿಳೆಯರ ತಂಡಗಳಿಗೆ ಹಾಕಿ ಕರ್ನಾಟಕ ವತಿಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ತಾ.೨೪ ರಂದು ಜೂನಿಯರ್ ಪುರುಷರ ತಂಡ, ತಾ.೨೫ ರಂದು ಜೂನಿಯರ್ ಮಹಿಳೆಯರ ತಂಡ, ತಾ.೨೬ ರಂದು ಸಬ್ ಜೂನಿಯರ್ ಪುರುಷರ ತಂಡ ಹಾಗೂ ತಾ.೨೭ ರಂದು ಸಬ್ ಜೂನಿಯರ್ ಮಹಿಳೆಯರ ತಂಡಕ್ಕೆ ಬೆಂಗಳೂರಿನ ಶಾಂತಿನಗರದಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಕಿ ಅರೇನಾದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬೆಳಿಗ್ಗೆ ೯ ಗಂಟೆಯ ನಂತರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

೨೦೦೬ ಜನವರಿ ೧ ರ ನಂತರ ಜನಿಸಿದವರು ಜೂನಿಯರ್ ವಿಭಾಗದಲ್ಲಿ ಹಾಗೂ ೨೦೦೯ ಜನವರಿ ೧ ರ ನಂತರ ಜನಿಸಿದವರು ಸಬ್ ಜೂನಿಯರ್ ವಿಭಾಗದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಹಾಕಿ ಇಂಡಿಯಾ ವತಿಯಿಂದ ನಡೆಸಲಾಗುವ ದಕ್ಷಿಣ ವಲಯ ಚಾಂಪಿಯನ್‌ಶಿಪ್‌ನಲ್ಲಿ ಆಯ್ದ ಕ್ರೀಡಾಪಟುಗಳು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಆಂಧ್ರಪ್ರದೇಶದ ಕಡಪದಲ್ಲಿ ಜುಲೈ ೧೦ ರಿಂದ ೧೭ ರವರೆಗೆ ಪುರುಷರ ಹಾಗೂ ಮಹಿಳೆಯರ ಜೂನಿಯರ್ ಚಾಂಪಿಯನ್ ಶಿಪ್ ಹಾಗೂ ಜುಲೈ ೧೯ ರಿಂದ ೨೬ ರವರೆಗೆ ಕೇರಳದ ಕೊಲ್ಲಂನಲ್ಲಿ ಸಬ್ ಜೂನಿಯರ್ ಚಾಂಪಿಯನ್ ಶಿಪ್ ಜರುಗಲಿದೆ ಎಂದು ಹಾಕಿ ಕರ್ನಾಟಕದ ಕಾರ್ಯದರ್ಶಿ ಎ.ಬಿ ಸುಬ್ಬಯ್ಯ ಅವರು ತಿಳಿಸಿದ್ದಾರೆ.