‘‘ಐ ಲವ್ ಯೂ ಪಪ್ಪ’’
ತಂದೆ: ಮಂಗೇರಿರ ದೀಪಕ್ ದೇವಯ್ಯ
ತಾಯಿ : ಮಂಗೇರಿರ ದೀಪಿಕಾ
ಮಗಳು : ಗಹನ ಗಂಗಮ್ಮ
ಪದಕಲ್ಲು-ಚೆಟ್ಟಿಮಾನಿ. ನನ್ನ ಡ್ಯಾಡಿ ನನ್ನ ಹೀರೋ.
ಅವರೇ ನನಗೆ ಸೂಪರ್ ಸ್ಟಾರೋ..
ಅಪ್ಪನ ಹೆಗಲೇ ನನಗೆ ಅಂಬಾರಿ
ಅದರ ಮೇಲೆ ನನ್ನ ಸವಾರಿ
ನಾನೇ ಅವರ ಮುದ್ದು ಬಂಗಾರಿ...
ನನ್ನ ಜೀವ ನನ್ನ ಅಪ್ಪ
ಲವ್ ಯು ಪೊಪ್ಪಾ...
ತಂದೆ : ನವೀನ್ ಸುವರ್ಣ
ಮಗಳು : ಶ್ರೀಶಾ ಎನ್. ಪೂಜಾರಿ
ಮಡಿಕೇರಿ
ತ್ಯಾಗಮಯಿ ಅಪ್ಪ
ಅಪ್ಪ ನಮ್ಮ ಜೀವನದ ಸ್ಪೆಷಲ್ ವ್ಯಕಿ. ನಮಗಾಗಿ, ನಮ್ಮ ಭವಿಷ್ಯಕ್ಕಾಗಿ ಇಡೀ ಜೀವನವನ್ನೇ ಒತ್ತೆ ಇಟ್ಟ ಕರುಣಾಮಯಿ ಅಪ್ಪ. ಅದೆಷ್ಟೋ ನೋವು ಸಂಕಟಗಳನ್ನು ನುಂಗಿ ಮನೆಯವರ ಹಿತಕ್ಕಾಗಿ ದುಡಿಯುತ್ತಾನೆ. ತಂದೆಯು ಕುಟುಂಬದ ಅಡಿಪಾಯದಂತಿದ್ದು, ಕುಟುಂಬವನ್ನು ಸಂರಕ್ಷಿಸು ತ್ತಾರೆ. ತಂದೆಯು ಹಗಲು ಬೆವರಿನ ಕೂಲಿಕಾರ ನಾಗಿ ರಾತ್ರಿ ಮನೆಯ ಚೌಕಿದಾರನಾಗಿ ಎಲ್ಲಾ ಕೊಡಿಸುವ ಸಾಹುಕಾರ ಅಪ್ಪ. ಹೀಗೆ ಅಪ್ಪನ ಬಗ್ಗೆ ಹೊಗಳಲು ಪದಗಳೇ ಸಾಲದು.
-ಕೀತನ್ ಐ. ಎನ್., ೯ನೇ ತರಗತಿ
-ತನುಷ ಐ. ಎನ್.,
ಎಸ್.ಎಂ.ಎಸ್. ಶಾಲೆ, ಅರಮೇರಿ.
ನನ್ನ ಪ್ರೀತಿಯ ಅಪ್ಪ
ನನ್ನ ಅಪ್ಪ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನನ್ನ ಅಪ್ಪ ಶಿಸ್ತಿನ ಸಂಯಮ ಮೂರ್ತಿ. ಅವರು ನನ್ನ ತಪ್ಪುಗಳನ್ನು ತಿದ್ದಿ ಒಳ್ಳೆಯ ನೀತಿ ಪಾಠಗಳನ್ನು ಹೇಳಿಕೊಡುತ್ತಾರೆ. ತುಂಬಾ ಶ್ರಮಜೀವಿ. ಅಪ್ಪನೆಂದರೆ ನನಗೆ ತುಂಬಾ ಸ್ನೇಹಿತ ಕೂಡ. ಅವರು ನನಗೆ ಯಾವಾಗಲೂ ಆದರ್ಶ ಪ್ರಾಯರಾಗಿರುತ್ತಾರೆ.
ತಂದೆ : ಮಧುಸೂದನ್ ಕೆ. ಜಿ.
ಮಗ : ಕೆ. ಎಂ. ಕುಶಾಂತ್
ಸAತ ಜೋಸೆಫರ ಶಾಲೆ, ಮಡಿಕೇರಿ.ಅಪ್ಪಂದಿರ ದಿನಾಚರಣೆಯ ಶುಭಾಶಯಗಳು
ನಮ್ಮ ಮನೆಯ ಆಧಾರ ಸ್ತಂಭ ನಮ್ಮ ಅಪ್ಪ. ಅಪ್ಪನ ಜೊತೆ ಪ್ರಸ್ತುತ ಸೆಲ್ಫಿ ಇಲ್ಲ, ಕ್ಷಮಿಸಿ ಬಿಡಿ. ಕಾರಣ ನಾನು ವಿದ್ಯಾರ್ಥಿ ನಿಲಯದಲ್ಲಿ ವಾಸಿಸುತಿ ದ್ದೇನೆ. ಸೆಲ್ಫಿ ಇಲ್ಲದಿದ್ದರೇನಂತೆ. ಅವರು ನಮಗೆ ಮಾಡಿದ ತ್ಯಾಗಗಳನ್ನು ಮರೆಯೋಕೆ ಆಗಲ್ಲ, ನಮ್ಮ ಅಪ್ಪ ಸ್ವಲ್ಪ ಕಿರಿ-ಕಿರಿ ಜಾಸ್ತಿ. ಆದರೆ ಯಾವುದಕ್ಕೂ ಇಲ್ಲ ಅನ್ನಲ್ಲ. ಚಿಕ್ಕಂದಿನಿAದಲೂ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ನಮ್ಮ ತಂದೆ ಕೃಷಿಕ. ಕೃಷಿಕ್ಷೇತ್ರದ ಲಾಭ-ನಷ್ಟಗಳು ನಿಮಗೆ ಗೊತ್ತು. ನಮ್ಮದು ಗುಡ್ಡೆಹೊಸೂರು ಪಕ್ಕದ ಬಾಳುಗೋಡು ಎಂಬ ಗ್ರಾಮ. ಹಳ್ಳಿಯ ಜೀವನ ಆದರೂ ನೆಮ್ಮದಿಯ ಜೀವನ. ಪುಟ್ಟ-ಪುಟ್ಟ ಸಂತೋಷಗಳಲ್ಲಿ ನೆಮ್ಮದಿಯನ್ನು ಕಾಣುವೆವು.
-ಮಿತ್ತಲ್ ಜೆ.ಡಿ., ತೃತೀಯ ಬಿ.ಕಾಂ,
ಭಾರತ ಮಾತ ಪ್ರಥಮ ದರ್ಜೆ ಕಾಲೇಜು
ಕೊಪ್ಪ, ಕುಶಾಲನಗರ.
‘‘ಅಪ್ಪಾ.. ಅಪ್ಪಾ... ನನಗೆ ನೀನು ಬೇಕಪ್ಪ...’’ ಈ ಹಾಡು ಹೇಳುವಂತೆ ಅಪ್ಪಾ ಎಂಬ ಎರಡು ಅಕ್ಷರಗಳಿಗೆ ಬೆಲೆ ಕಟ್ಟಲಾಗದ ಒಂದು ಉತ್ತಮ ಮೌಲ್ಯವನ್ನು ತಿಳಿಸುತ್ತದೆ. ಅಪ್ಪ ಎಂದರೆ ನನ್ನ ಹೀರೋ... ಅಪ್ಪ ಎಂಬ ಪದಕ್ಕೆ ಎಷ್ಟು ಗೌರವ ಮನ್ನಣೆ ನೀಡಿದರು ಸಾಕಾಗುವುದಿಲ್ಲ... ನನ್ನ ಅಪ್ಪ ಎಂದರೆ ನನಗೆ ತುಂಬಾ ಇಷ್ಟ... ನನ್ನ ಅಪ್ಪನ ಪ್ರೀತಿಗೆ ನೂರು ಕೋಟಿ ಕೃತಜ್ಞತೆಗಳು. ಅಪ್ಪ ಡ್ಯೂಟಿಗೆ ಹೋಗುವಾಗ ನಾನು ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅಪ್ಪ ಯಾವಾಗ ಬರುತ್ತಾರೋ ಎಂದು ಅಪ್ಪನಿಗಾಗಿ ಕಾಯುವ ಜೀವ ನನ್ನದು. ಅಪ್ಪನನ್ನು ನಾನು ಪ್ರೀತಿಯಿಂದ ನನ್ನ ಬೇಬಿ, ನನ್ನ ಸಿಂಗಾರಿ ಪಪ್ಪಾ... ನನ್ನ ಕೌಶಿ... ನನ್ನ ಮುದ್ದು ಎಂದು ಕರೆಯುತ್ತೇನೆ. ನನ್ನ ಅಪ್ಪ ನನಗೆ ಬೇಕಾಗಿರುವ ಎಲ್ಲಾ ಆಟದ ವಸ್ತುಗಳನ್ನು ಕೊಡುವರು. ನನ್ನ ಎಲ್ಲಾ ಚೇಷ್ಟೆಗಳನ್ನು ಸಹಿಸಿ ಕೊಳ್ಳುವರು. ಅಪ್ಪನ ಜೊತೆ ಗಾಡಿಯಲ್ಲಿ ಹೋಗುವುದೆಂದರೆ ನನಗೆ ಇಡೀ ವಿಶ್ವವೇ ಕೈಯಲ್ಲೇ ಇದ್ದಷ್ಟು ಖುಷಿ ...ದೇವರು ನನಗೆ ಕೊಟ್ಟ ಅಮೂಲ್ಯ ವಾದ ಗಿಫ್ಟ್.. ಅದಕ್ಕಾಗಿ ಆ ದೇವರಿಗೆ, ವಿಶ್ವಕ್ಕೆ ಕೃತಜ್ಞತೆಗಳು. ಅಪ್ಪ ಹೆಮ್ಮೆಪಡುವ ಮಗನಾಗಿ ನಾನು ಬೆಳೆಯುವೆ. ‘‘ಐ ಲವ್ ಯು ಅಪ್ಪ. ಹ್ಯಾಪಿ ಫಾದರ್ಸ್ ಡೇ’’
ತಂದೆ: ಕೌಶಿ ಎಂ. ಪಿ.
ತಾಯಿ: ಲತಾಂಜಲಿ ಪಿ. ಎಸ್.
ಮಗ: ನಮನ್ ಎಂ. ಕೆ., ಮಡಿಕೇರಿ. ಅಪ್ಪನೇ ನನ್ನ ಗುರು
ನೀವು ನನಗಾಗಿ ಹರಿಸಿದ ಒಂದೊAದು ಬೆವರಿನ ಹನಿಯ ಋಣ ಹೇಗೆ ತೀರಿಸಲಿ ಪಪ್ಪ. ತಾಯಿಯೇ ಮೊದಲ ಗುರು. ಆದರೆ ನನಗೆ ಪಪ್ಪನೇ ನನ್ನ ಮೊದಲ ಗುರು. ಯಾರು ಬೇಕಾದರೂ ಅಪ್ಪನಾಗಬಹುದು ಆದರೆ ಒಳ್ಳೆಯ ಅಪ್ಪನಾಗುವುದು ಕೆಲವರಷ್ಟೇ ಅದರಲ್ಲೊಬ್ಬರು ನೀವು ಪಪ್ಪಾ. ಬದುಕಿನ ದಿನಗಳು ಬೆವರಲ್ಲಿ ಮಿಂದು ನೋವಿನ ಕ್ಷಣದಲ್ಲಿ ಬೆಂದು ನನ್ನ ಜೀವಕ್ಕೆ ನೆರಳಾದ ಕಲ್ಪವೃಕ್ಷ. ನನ್ನ ಪಪ್ಪಾ ವರ್ಷಗಟ್ಟಲೆ ದುಡಿದು ನನ್ನ ಮದುವೆ ಮಾಡಿದರು. ನಗುಮುಖ ಮಾಸದ ನನ್ನ ಪಪ್ಪಾ. ನನಗೆ ತಾಯಿ ಬದುಕು ನೀಡಿದರೆ, ಪಪ್ಪಾ ಬದುಕುವ ಭರವಸೆ ತುಂಬಿದ್ದಾರೆ. ನನ್ನನ್ನು ಉತ್ತಮ ರೀತಿಯಲ್ಲಿ ಬದುಕಲು ಕಲಿಸಿಕೊಟ್ಟ ನನ್ನ ಪಪ್ಪನಿಗೆ ಧನ್ಯವಾದಗಳು ‘‘ಐ ಲವ್ ಯು ಮೈ ಡಿಯರ್ ಪಪ್ಪಾ’’ ನನ್ನ ಪ್ರೀತಿಯ ಪಪ್ಪನಿಗೆ ತಂದೆಯ ದಿನಾಚಾರಣೆಯ ಶುಭಾಶಯಗಳು.
-ಸ್ಮಿತಾ ಸತೀಶ್,
ನಂಜುAಡೇಶ್ವರ ಮೆಡಿಕಲ್ಸ್
ನಂಜರಾಯಪಟ್ಟಣ
ಅಪ್ಪ ನನ್ನ ಪಾಲಿನ ದೇವರು, ಸರ್ವಸ್ವ ಮತ್ತು ನನ್ನ ಪಾಲಿನ ನಿಜವಾದ ಹೀರೋ. ಅಪ್ಪ ಒರಟ ಆದರೂ ಅವರ ಮನಸ್ಸು ಮೃದು. ಇಡೀ ಮನೆಯ ರಕ್ಷಣೆಗಾರ ನನ್ನ ಅಪ್ಪ. ನನ್ನ ಜೀವನಕ್ಕೆ ಒಂದು ದಿಕ್ಕು ತೋರಿಸಿ, ಉತ್ಕೃಷ್ಟವಾದ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿದರು. ಪದವಿ ಮುಗಿಸಿ ವೃತ್ತಿಪರ ಶಿಕ್ಷಣದವರೆಗೂ ಕಲಿಯುವಂತೆ ಮಾಡಿದರು. ಅಪ್ಪನ ಬುದ್ಧಿಮಾತು ಸಾಧನೆಗೆ ಪ್ರೇರಣೆ. ನಾನು ಡಿಗ್ರಿ ಮುಗಿಸುವಷ್ಟರಲ್ಲಿ ಅವರಿಗೆ ಕ್ಯಾನ್ಸರ್ ಬಂದು ತೀರಿ ಹೋದರು. ಇದು ನನ್ನ ಜೀವನದಲ್ಲಿ ನಡೆದ ಅತ್ಯಂತ ದುಃಖಕರ ವಿಷಯ. ಆದರೆ ನನ್ನ ಜೊತೆಯಲ್ಲೇ ಇದ್ದು ನನ್ನನ್ನು ರಕ್ಷಿಸುತ್ತಿದ್ದಾರೆ ಎಂದು ನಾನು ನಂಬಿದ್ದೇನೆ. ನನ್ನ ಅಪ್ಪನ ಮಾತು ಇಂದಿಗೂ ಪ್ರೇರಣೆಯಾಗಿದೆ.
- ಕೃಪಾ ಪ್ರಮೋದ್.
ಕುಶಾಲನಗರ.
ನಾ ಕಂಡAತೆ ನನ್ನ ಅಪ್ಪ, ನನ್ನ ಹೆಮ್ಮೆ.
ಪ್ರೀತಿಯಲ್ಲಿ ಮೂಕನಾಗುವ, ಎಲೆಮರೆಕಾಯಿ ಯಂತಿರುವ, ಬಿಗಿದಿಟ್ಟ ಉಸಿರು ಬಿಟ್ಟು ಒಳಗೊಳಗೆ ಅಳುತ್ತಿರುವ ದೇವರಿಗೆ ದೇವರಾಗಿರುವ ನನ್ನ ಅಪ್ಪ.
-ತಂದೆ : ಗಿರೀಶ್ ಎಂ. ಟಿ.
ಮಗ: ಜಶ್ವಿನ್ ಎಂ. ಜಿ.
ಸಂತ ಜೋಸೆಫರ ಶಾಲೆ, ಮಡಿಕೇರಿ.ಅಪ್ಪನೆಂದರೆ ಮನೆಗೆ ಬಹು ಉಪಯೋಗಿ. ಮನೆಯ, ಮಕ್ಕಳ ಭವಿಷ್ಯಕ್ಕಾಗಿ ತನ್ನ ಜೀವನವನ್ನು ಮೀಸಲಿಡುವ ಅಪ್ಪನ ಪರಿಶ್ರಮ, ಅಮ್ಮನ ಪ್ರೀತಿ ಎದುರು ಸ್ವಲ್ಪ ಮಂಕಾದರೂ ಅಪ್ಪ ಅಪ್ಪನೆ. ಹೀಗಿದೆ ನಮ್ಮ ಜೋಡಿ, ಅಪ್ಪ ೮೭, ಮಗ ೫೭. ದಿನಕ್ಕೆ ಒಂದಷ್ಟು ಜಗಳ, ಒಂದಷ್ಟು ಪ್ರೀತಿ, ಅಪರೂಪ ಕ್ಕೊಮ್ಮೆ ಒಂದಷ್ಟ್ಟು ಗುಂಡು, ಒಂದಷ್ಟು ತುಂಡು ಹೀಗೆ ಇರಲಿ ನಮ್ಮ ಪ್ರೀತಿ ಒಂದಷ್ಟ್ಟು ವರ್ಷ. ಅದಕ್ಕೆ ಇರಲಿ ಒಂದಷ್ಟು ನಿಮ್ಮ ಆಶೀರ್ವಾದ.
-ಬಾಳೆಯಡ ಕಿಶನ್ ಪೂವಯ್ಯ,
ವಕೀಲರು ಮತ್ತು ನೋಟರಿ,
ಮಡಿಕೇರಿ.
ಅಪ್ಪ ಎಂದರೆ ನನ್ನ ಹೀರೋ. ಅವರು ಕೊಡಿಸುವ ವಸ್ತುಗಳು ನನಗೆ ಪ್ರಾಣ. ಅಪ್ಪ ಮನೇಲಿ ಇದ್ದರೆ ಇಡೀ ಮನೆಯೇ ಖುಷಿ ನನ್ನನು ತುಂಬಾ ಪ್ರೀತಿಸುತ್ತಾರೆ. ನಾನು ಅವರನ್ನು ಅಷ್ಟೇ ಪ್ರೀತಿಸುತ್ತೇನೆ. ರಾತ್ರಿ ಹೊತ್ತು ಮನೆಗೆ ಬರುವಾಗ ನಾನೇ ಗೇಟ್ ಮತ್ತು ಬಾಗಿಲು ತೆಗೆಯುತ್ತೇನೆ. ನಾನು ಕಡಿಮೆ ಅಂಕ ತೆಗೆದರೆ ಮಾತ್ರ ಚೆನ್ನಾಗಿ ಹೊಡೆಯುತ್ತಾರೆ.
-ಅಮ್ಮಂಡ ಪ್ರಾಣ್ ಗಣಪತಿ
೫ನೇ ತರಗತಿ
ಲಯನ್ಸ್ ಶಾಲೆ ಗೋಣಿಕೊಪ್ಪ.