ಸೋಮವಾರಪೇಟೆ, ಜೂ. ೧೮: ಸಮೀಪದ ನೇರುಗಳಲೆ ಶಾಲೆಯಲ್ಲಿ ನಡೆಯುತ್ತಿರುವ ಎಲ್ಕೆಜಿ ತರಗತಿ ಕಟ್ಟಡದ ನವೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. ೭೫,೦೦೦ ಧನಸಹಾಯ ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಇಂತಹ ವಿನೂತನ ಯೋಜನೆಗಳನ್ನು ರೂಪಿಸಿರುವುದು ಶ್ಲಾಘನೀಯ. ಗ್ರಾಮಸ್ಥರು ಒಗ್ಗೂಡಿ ಪೂರ್ವ ಪ್ರಾಥಮಿಕ ಶಾಲೆಯನ್ನು ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಯೋಜನಾಧಿಕಾರಿ ರೋಹಿತ್, ಸಮಿತಿಯ ಗೌರವಾಧ್ಯಕ್ಷ ಎಸ್.ಎಂ. ಡಿಸಿಲ್ವಾ, ಸಮಿತಿಯ ಅಧ್ಯಕ್ಷ ಭೋಜೇಗೌಡ, ಕಾರ್ಯದರ್ಶಿ ವಿನಯ್ ಸಂಭ್ರಮ್, ಖಜಾಂಚಿ ತಿಮ್ಮಯ್ಯ ಎ.ಹೆಚ್., ಉಪಾಧ್ಯಕ್ಷ ಅಜಿತ್ ಕುಮಾರ್, ಪುಷ್ಪಾ, ಸಮಿತಿ ಸಂಚಾಲಕ ರತ್ನಕುಮಾರ್, ಮುಖ್ಯಶಿಕ್ಷಕಿ ಎಸ್ತೆಲಾ, ನಿರ್ದೇಶಕ ರಮೇಶ್, ಶೈಲಾ, ಶಿಕ್ಷಕರು, ಒಕ್ಕೂಟದ ಪದಾಧಿಕಾರಿಗಳು, ಪೋಷಕರು ಉಪಸ್ಥಿತರಿದ್ದರು.