ಸುಂಟಿಕೊಪ್ಪ, ಜೂ. ೧೮: ಸುಂಟಿಕೊಪ್ಪದಲ್ಲಿ ಕಳ್ಳತನ ಅಧಿಕವಾಗುತ್ತಿದ್ದು, ಕಳ್ಳತನ ಮಾಡುವವರ ಕುರುಹು ಕೂಡ ಸಿಗುತ್ತಿಲ್ಲ. ಕಳೆದ ೪ ದಿನಗಳ ಹಿಂದೆ ಪಾರ್ವತಮ್ಮ ಬಡಾವಣೆಯ ಗಣೇಶ ಎಂಬಾತ ಮನೆ ಸಮೀಪ ನಿಲ್ಲಿದ್ದ ಆಟೋರಿಕ್ಷಾದ ಹಿಂಭಾಗದ ಟಾರ್ಪಲನ್ನು ಕಿತ್ತು ಒಳಗಿದ್ದ ಸೌಂಡ್ ಬಾಕ್ಸ್ ಕದ್ದೊಯಿದಿದ್ದು ಪೊಲೀಸ್ ಠಾಣೆಯಲ್ಲಿ ಪುಕಾರು ನೀಡಿದ್ದು ಇದೀಗ ಮತ್ತೆ ಚಾಮುಂಡೇಶ್ವರಿ ಬಡಾವಣೆಯ ಸಚಿನ್ ಎಂಬವರ ಮನೆ ಸಮೀಪದ ದಾರಿಯಲ್ಲಿ ಸೋಮವಾರ ರಾತ್ರಿ ೧೦ ಗಂಟೆಗೆ ಆಟೋರಿಕ್ಷಾವನ್ನು ನಿಲ್ಲಿಸಿ ಮನೆಗೆ ತೆರಳಿದ್ದಾರೆ. ಎಂದಿನAತೆ ಮಂಗಳವಾರ ಬೆಳಿಗ್ಗೆ ಆಟೋವನ್ನು ತೆಗೆಯಲು ತೆರಳಿದ ಸಂದರ್ಭ ಆಟೋದ ಟಾರ್ಪಲ್ ಹರಿದಿದ್ದು ಆಟೋದ ಒಳಗಿದ್ದ ೨ ಸ್ಪೀಕರ್ ಹಾಗೂ ಟೇಪ್ ರೆಕಾರ್ಡ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸಚಿನ್ ಸುಂಟಿಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದು ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರಿಗೆ ಬಲೆ ಬೀಸಿದ್ದಾರೆ.