ಚೆಯ್ಯAಡಾಣೆ, ಜೂ. ೧೮: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆಯ್ಯಂಡಾಣೆ ಪಟ್ಟಣದ ಹೃದಯ ಭಾಗದ ಜಂಕ್ಷನ್‌ನಲ್ಲಿ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ತೆರಳುವ ಮಾರ್ಗ ಎದುರುಗಡೆ ರಸ್ತೆಯ ಬದಿಯಲ್ಲಿ ಖಾಸಗಿ ಸಂಸ್ಥೆಯ ಕೇಬಲ್ ಅಥವಾ ಜೆಜೆಎಂ ಕಾಮಗಾರಿಗೆ ತೋಡಿರುವ ಗುಂಡಿ ಮುಚ್ಚದೆ ಅವಘಡಕ್ಕೆ ಆಹ್ವಾನ ನೀಡುತ್ತಿದೆ.

ಸಂಬAಧಪಟ್ಟ ಗ್ರಾಮ ಪಂಚಾಯಿತಿ ಅಥವಾ ಇದಕ್ಕೆ ಸಂಬAಧಪಟ್ಟ ಇಲಾಖೆ ಕೂಡಲೇ ಗುಂಡಿ ಮುಚ್ಚಿ ಅವಘಡ ಸಂಭವಿಸದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

- ಅಶ್ರಫ್