ಮಡಿಕೇರಿ, ಜೂ. ೧೭: ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದವರು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿAದ ಆಚರಿಸಿದರು.
ಜಿಲ್ಲಾ ಕೇಂದ್ರ ಮಡಿಕೇರಿಯ ಪ್ರಮುಖ ಮಸೀದಿಗಳಾದ ಜಾಮಿಯಾ, ಬದ್ರಿಯಾ, ಭಟ್ಕಳ, ಎಂ.ಎA., ಮಸ್ಜಿದ್ ಉರ್ರ್ರಹ್ಮಾ ಸೇರಿದಂತೆ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲೂ ಬಕ್ರೀದ್ ಪ್ರಯುಕ್ತ ವಿಶೇಷ ನಮಾಜ್ ನೆರವೇರಿತು. ಜಾಮೀಯಾ ಮಸೀದಿಯಲ್ಲಿ ನಡೆದ ನಮಾಜ್ ನೇತೃತ್ವವನ್ನು ಇಮಾಮ್ ನಫೀಜ್ ಅಕ್ತರ್ ರಝಾ ವಹಿಸಿದ್ದರು. ನಮಾಜ್ ಬಳಿಕ ಪರಸ್ಪರ ಆಲಿಂಗನದೊAದಿಗೆ ಮುಸ್ಲಿಂ ಸಮುದಾಯದವರು ಹಬ್ಬದ ಶುಭಾಶಯ ಹಂಚಿಕೊAಡರು.
ವೀರಾಜಪೇಟೆ
ವೀರಾಜಪೇಟೆ: ಬಕ್ರೀದ್ ಪ್ರಯುಕ್ತ ವೀರಾಜಪೇಟೆ ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ಹಾರಿಸ್ ಬಾಖವಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ಅಬ್ದುಲ್ಲಾ ಉಸ್ತಾದ್, ಬಂಗಾಳಿ ಬೀದಿಯ ಮಸ್ಜಿದ್-ಎ-ಅಝಮ್ನಲ್ಲಿ ಹಸೀಬ್ ಶರೀಫ್, ಸುಣ್ಣದಬೀದಿಯ ಮದೀನಾ ಮಸೀದಿಯಲ್ಲಿ ಮುಝಮ್ಮಿಲ್, ಕ್ಲಾಕ್ ಟವರ್ ಸಮೀಪದ ಮುರುಡೇಶ್ವರ್ ನವಾಯತ್ ಮಸೀದಿಯಲ್ಲಿ ಮಖ್ಸೂದ್ ಅಹಮದ್, ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಗುಲ್ಶದ್ ಅಹಮದ್, ನೆಹರು ನಗರ ರಸ್ತೆಯ ಮಸ್ಜಿದ್-ಎ-ರಹೀಲ್ನಲ್ಲಿ ಅಬೂತಾಲಿಬ್, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಹನೀಫ್ ಫೈಝಿ ನಮಾಝ್ ಹಾಗೂ ಪ್ರವಚನಕ್ಕೆ ನೇತೃತ್ವ ವಹಿಸಿದ್ದರು.
ಗೋಣಿಕೊಪ್ಪ ರಸ್ತೆಯ ವಿದ್ಯಾನಗರದ ಬ್ರೆöÊಟ್ ಕ್ಯಾಂಪಸ್ನ ಇಮಾಮ್ ಮುಸ್ಲಿಮ್ ಜುಮಾ ಮಸೀದಿಯಲ್ಲಿ ಅಬ್ದುಲ್ ಗಫೂರ್ ಉಳಿಯಿಲ್, ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿಯಲ್ಲಿ ಮುಹಮ್ಮದ್ ಅಸ್ಲಮ್ ಮೌಲವಿ ಪ್ರವಚನ ನೀಡಿದರು. ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ನಮಾಝ್ ನಂತರ ಪರಸ್ಪರ ಶುಭಾಶಯವನ್ನು ಹಂಚಿ ಮೆರವಣಿಗೆಯಲ್ಲಿ ತರಳಿ ಖಬರಸ್ಥಾನದಲ್ಲಿ ಅಗಲಿದ ಹಿರಿಯರಿಗೆ ಗೌರವ ಸಲ್ಲಿಸಿದರು. ಹನಫಿ ಹಾಗೂ ಶಾಫಿ ವಿಭಾಗದವರು ಒಂದೇ ದಿನ ಹಬ್ಬ ಆಚರಿಸಿದುದು ವಿಶೇಷವಾಗಿತ್ತು. ಅಹಿತಕರ ಘಟನೆಗಳು ಉಂಟಾಗದAತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸೋಮವಾರಪೇಟೆ
ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿರುವ ಮುಸ್ಲಿಂ ಸಮುದಾಯದವರು ಪ್ರಾರ್ಥನಾ ಮಂದಿರಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಖಬರಸ್ಥಾನಕ್ಕೆ ತೆರಳಿ, ಅಗಲಿದ ಆತ್ಮಗಳಿಗೆ ಶಾಂತಿ ಕೋರಿದರು.
ಪಟ್ಟಣದ ಜಲಾಲಿಯಾ ಮಸೀದಿ, ಕಲ್ಕಂದೂರು, ಬಜೆಗುಂಡಿ ಖಿಳಾರಿಯಾ ಮಸೀದಿ, ತಣ್ಣೀರುಹಳ್ಳ, ಕಾಗಡಿಕಟ್ಟೆ, ಹೊಸತೋಟದ ಬಟಕನಹಳ್ಳಿ ಜಾಮಿಯಾ ಮಸೀದಿಗಳಲ್ಲಿ ದಿನದ ಅಂಗವಾಗಿ ವಿಶೇಷ ಪ್ರಾರ್ಥನೆಗಳು ನಡೆದವು. ಸಮುದಾಯದ ಮಂದಿ ಪರಸ್ಪರ ಆಲಿಂಗನ ಮಾಡಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
(ಮೊದಲ ಪುಟದಿಂದ) ನೆಂಟರಿಷ್ಟರೊAದಿಗೆ ಸಂಭ್ರಮದಿAದ ಬಕ್ರೀದ್ ಆಚರಿಸಿದರು. ಹೊಸತೋಟದ ಬಟಕನಹಳ್ಳಿ ಜಾಮಿಯಾ ಮಸೀದಿಯಲ್ಲಿ ಜಮಾತ್ನ ಖತೀಬರಾದ ಷಜಹಾನ್ ಸಖಾಫಿ ನೇತೃತ್ವದಲ್ಲಿ ಸಾಮೂಹಿಕ ನಮಾಜ್ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ಸಮಾಜದಲ್ಲಿರುವ ಬಡವರು, ಶೋಷಿತ ವರ್ಗದ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ಆ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಇದರೊಂದಿಗೆ ಭಯೋತ್ಪಾದನೆ, ಕೋಮುವಾದವನ್ನು ನಿರ್ಮೂಲನೆ ಮಾಡಲು ಪಣತೊಡಬೇಕೆಂದು ಕರೆ ನೀಡಿದರು.
ಈ ಸಂದರ್ಭ ಜಮಾತ್ ಅಧ್ಯಕ್ಷ ಮಹಮ್ಮದ್ ಕುಟ್ಟಿ, ಕಾರ್ಯದರ್ಶಿ ಸಲೀಂ, ಪ್ರಮುಖರಾದ ಹುಸೈನ್, ಶಿಹಾಬ್, ರಹೀಂ, ಝೈನುದ್ದೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರುಉ.ಕಡಂಗ: ಬದ್ರಿಯ ಸುನ್ನಿ ಮಸೀದಿಯ ಈದ್ ನಮಾಜಿಗೆ ಖತೀಬ್ ಸತ್ತಾರ್ ಅಹಸನಿ ಮತ್ತು ಮೊಯದ್ದೀನ್ ಜುಮಾ ಮಸೀದಿಯ ಈದ್ ನಮಾಜಿಗೆ ರಫೀಕ್ ಲತೀಫಿ ನೇತೃತ್ವ ವಹಿಸಿದ್ದರು. ಬದ್ರಿಯ ಜಮಾಅತ್ ಅಧ್ಯಕ್ಷ ಉಸ್ಮಾನ್, ಮೊಯಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲಾ, ಆಡಳಿತ ಮಂಡಳಿ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.ಗೋಣಿಕೊಪ್ಪಲು
ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಶಾಫಿ ಜುಮಾ ಮಸ್ಜಿದಿ ವತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು. ಧರ್ಮ ಗುರುಗಳಾದ ಮಹಮ್ಮದ್ಅಲಿಫೈಜಿ ಮುಂದಾಳತ್ವದಲ್ಲಿ ಪ್ರವಚನ ಹಾಗೂ ಪ್ರಾರ್ಥನೆ ನಡೆಯಿತು.
ಪ್ರಾರ್ಥನೆ ಬಳಿಕ ಪರಸ್ಪರ ಆಲಿಂಗನ ಮಾಡಿಕೊಳ್ಳುವ ಮೂಲಕ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಹಂಚಿಕೊಳ್ಳಲಾಯಿತು. ದೇಶದ ಜನತೆ ಶಾಂತಿ ಸೌಹಾರ್ದತೆಯಿಂದ ಜೀವನ ಸಾಗಿಸಲಿ ಎಂದು ಧರ್ಮ ಗುರುಗಳು ಪ್ರಾರ್ಥನೆ ಸಲ್ಲಿಸಿದರು. ಶಾಫಿ ಜುಮಾ ಮಸ್ಜಿದಿಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಅಬ್ದುಲ್ ಸಮ್ಮದ್, ಉಪಾಧ್ಯಕ್ಷ ಎಂ.ಎA.ರಶೀದ್, ಖಜಾಂಜಿ ಪಿ.ಎ.ರಶೀದ್,ಆಡಳಿತ ಮಂಡಳಿಯ ಎಂ.ಎ.ಸೌಕತ್ಅಲಿ, ಕೆ.ಪಿ.ಸಲಾಂ. ಕೆ.ಹೆಚ್. ಇಬ್ರಾಹಿಂ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಚೆಯ್ಯಂಡಾಣೆ: ವೀರಾಜಪೇಟೆ ಸಮೀಪದ ಚಾಮಿಯಾಲ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ನಮಾಜ್ಗೆ ಮಹಲ್ ಖತೀಬ್ ಅಬ್ದುಲ್ ರಹ್ಮನ್ ಸಅದಿ ನೇತೃತ್ವ ವಹಿಸಿದ್ದರು. ನಂತರ ಸಮೀಪದ ಖಬರ್ ಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಮಜೀದ್, ಪದಾಧಿಕಾರಿಗಳು,ಮತಿತ್ತರರು ಉಪಸ್ಥಿತರಿದ್ದರು.
ನಾಪೋಕ್ಲು: ಇಲ್ಲಿಗೆ ಸಮೀಪದ ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್ ಮಸೀದಿಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆ, ನಮಾಜನ್ನು ಮುಸ್ಲಿಂ ಸಮುದಾಯದವರು ನೆರವೇರಿಸಿದರು. ಖತೀಬರಾದ ಜುರೈಜ್ ಸಹದಿ ಕಾಸರಗೋಡು ವಿಶೇಷ ಪ್ರಾರ್ಥನೆ ನೆರವೇರಿಸಿ ದಿನದ ಮಹತ್ವ ಹಾಗೂ ಧರ್ಮ ಸಂದೇಶ ನೀಡಿ ಶುಭ ಹಾರೈಸಿದರು
ಈ ಸಂದರ್ಭ ಜಮಾಅತ್ ಅಧ್ಯಕ್ಷ ಬಿ.ಎ. ನಾಸಿರ್, ಕಾರ್ಯದರ್ಶಿ ರಫೀಕ್ ಎಮ್. ಎಚ್ ಹಫೀಲ್ ಸಹದಿ ಎಮ್. ಎಮ್. ಇಸ್ಮಾಯಿಲ್ ಜಮಾಹತ್ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮುದಾಯದವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನಮಾಜ್ ನಂತರ ಸಿಹಿ ತಿಂಡಿ ಮತ್ತು ಪಾನೀಯ ವಿತರಿಸಲಾಯಿತು. ಬಳಿಕ ತಮ್ಮ ತಮ್ಮ ಕುಟುಂಬದಿAದ ನಿಧನ ಹೊಂದಿದವರ ಸಮಾಧಿಗೆ (ಖಬರ್ ಸ್ಥಾನ) ತೆರಳಿ ಪ್ರಾರ್ಥನೆ ನೆರವೇರಿಸಿದ ಬಳಿಕ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು.
ಸುಂಟಿಕೊಪ್ಪ: ನಾಡಿನಾದ್ಯಂತ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಪಟ್ಟಣದ ವಿವಿಧ ಮಸೀದಿಗಳಲ್ಲಿ ಬೆಳಿಗ್ಗಿನಿಂದಲೇ ಶುಭ್ರಬಟ್ಟೆಗಳನ್ನು ತೊಟ್ಟು ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ನೆರೆದಿದ್ದರು.
ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್ನಲ್ಲಿ ಮುಸ್ಲಿಯಾರ್ ಆರೀಫ್ ಸಖಾಫಿ, ಸುನ್ನಿ ಹನಫಿ ಮುಸ್ಲಿಂ ಜಾಮೀಯಾ ಮಸೀದಿ ಮೌಲನಾ ಜುಬ್ಬೇರ್ ಅಜಾರತ್, ಸುನ್ನಿ ಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಮೌಲವಿ ಮೊಹಮದ್ ಹುಸೈನ್, ಕೂಬ್ಬ ಮಸ್ಜಿದ್ ಮೌಲನಾ ಇನಾಂ ಹಾಗೂ ಗದ್ದೆಹಳ್ಳದ ನೂರು ಜುಮ್ಮಾ ಮಸ್ಜಿದ್ನ ಆಸೀಫ್ ಶಖಾಫಿ ಅವರುಗಳು ಧಾರ್ಮಿಕ ಪ್ರಾರ್ಥನೆ ನೆರವೇರಿಸಿದರು. ನಂತರ ಈದ್ಗಾಗಳಿಗೆ ತೆರಳಿ ಹಿರಿಯರಿಗೆ ನಮಿಸಿ ಮನೆಗಳಲ್ಲಿ ಹಬ್ಬಕ್ಕೆ ಮುನ್ನುಡಿ ಇಟ್ಟರು.
ಸಲಾಫಿ ಮಸೀದಿಯಲ್ಲಿ ನಿಶಾದ್ ಸ್ವಲಾಹಿ ಧಾರ್ಮಿಕ ಪ್ರವಚನಗಳನ್ನು ನೆರವೇರಿಸಿದರು. ಬಕ್ರಿದ್ ಪ್ರಾರ್ಥನೆಯಲ್ಲಿ ಗಂಡಸರು, ಮಹಿಳೆಯರು ಹಾಗೂ ಮಕ್ಕಳು ಒಗ್ಗೂಡಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.
ನಾಪೋಕ್ಲು: ನಾಪೋಕ್ಲು ಸೇರಿದಂತೆ ಸುತ್ತಮುತ್ತಲಿನ ಮಸೀದಿಗಳಲ್ಲಿ ತ್ಯಾಗ ಬಲಿದಾನದ ಸಂದೇಶ ಸಾರುವ ಬಕ್ರಿದ್ ಹಬ್ಬವನ್ನು ಶ್ರದ್ಧಾ ಭಕ್ತಿ, ಸಡಗರ ಸಂಭ್ರಮದಿAದ ಆಚರಿಸಿದರು.
ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಹಬ್ಬವು ಒಂದಾಗಿದೆ. ಬೆಳಿಗ್ಗೆ ಸ್ಥಳೀಯ ಪಟ್ಟಣದ ಮುಯ್ಯದ್ದಿನ್ ಜುಮ್ಮಾ ಮಸೀದಿಯಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆ, ನಮಾಜ್ ನೆರವೇರಿಸಿದರು. ಈ ಸಂದರ್ಭ ಧರ್ಮಗುರುಗಳಾದ ಅಶ್ರಫ್ ಅನ್ಸಾರಿ ವಿಶೇಷ ಪ್ರಾರ್ಥನೆ ನೆರವೇರಿಸಿ ಬಳಿಕ ದಿನದ ಮಹತ್ವ ಹಾಗೂ ಧರ್ಮ ಸಂದೇಶ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಮಾತ್ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಚ್. ಅಬ್ದುಲ್ರೆಹಮಾನ್, ಉಪಾಧ್ಯಕ್ಷ ಬದುರುದ್ದೀನ್, ಕಾರ್ಯದರ್ಶಿ ಯೂನಸ್, ಮಾಜಿ. ಅಧ್ಯಕ್ಷ ಸಲೀಂ ಹ್ಯಾರಿಸ್, ಮಾಜಿ ಉಪಾಧ್ಯಕ್ಷ ರಶೀದ್, ಮಾಜಿ ಕಾರ್ಯದರ್ಶಿ ಅಹಮದ್ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಜನಾಂಗ ಬಾಂಧವರು ಪಾಲ್ಗೊಂಡಿದ್ದರು.
ಇದೇ ರೀತಿ ಎಮ್ಮೆಮಾಡು, ಪಡಿಯಾಣಿ, ಕುಂಜಿಲ, ಕೊಟ್ಟಮುಡಿ, ಎಡಪಾಲ, ಕಿಕ್ಕರೆ, ಹಳೆ ತಾಲೂಕು, ಕೊಟ್ಟಮುಡಿ ಸೇರಿದಂತೆ ವಿವಿಧ ಮಸೀದಿಗಳಲ್ಲಿ ನಮಾಜ್, ಪ್ರಾರ್ಥನೆಯೊಂದಿಗೆ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರದ್ಧಾಭಕ್ತಿಯಿಂದ ಬಕ್ರಿದ್ ಹಬ್ಬವನ್ನು ಆಚರಿಸಿದರು. ಈ ಸಂದರ್ಭ ವಿಶೇಷ ಆಕರ್ಷಕ ದಿರುಸುಗಳನ್ನು ಧರಿಸಿದ ಮುಸ್ಲಿಂ ಸಮುದಾಯದವರು ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿ ಹಬ್ಬವನ್ನು ಆಚರಿಸಿಕೊಂಡರು. ಕಡಂಗ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದಲ್ಲಿ ಪರಸ್ಪರ ಸಹೋದರತೆ ಮತ್ತು ಬಾಂಧವ್ಯವನ್ನು ಭದ್ರಗೊಳಿಸಲು ಮಹಮ್ಮದ್ ಸಖಾಫಿ ಅಲ್ ಹಿಕಮಿ ಸುನ್ನಿ ಮುಸ್ಲಿಂ ಜುಮಾ ಮಸೀದಿಯಲ್ಲಿ ಸಂಭ್ರಮದ ಸಡಗರದ ಬಕ್ರೀದ್ ಆಚರಿಸಲಾಯಿತು. ಈದ್ ನಮಾಝ್, ಖುತುಬಾ, ಸಾಮೂಹಿಕ ಪ್ರಾರ್ಥನೆ ಜರುಗಿತು. ಜಮಾಅತಿನ ಸರ್ವ ಸದಸ್ಯರು, ಊರಿನವರು ಭಾಗವಹಿಸಿದ್ದರು. ನಂತರ ಖಬರ್ ಝಿಯಾರತ್ ನಡೆಸಲಾಯಿತು. ಮರಣ ಹೊಂದಿದ ಸದಸ್ಯರನ್ನು ಸ್ಮರಿಸಲಾಯಿತು. ಬೆಳಗ್ಗಿನಿಂದಲೇ ಹೊಸ ಉಡುಪುಗಳೊಂದಿಗೆ ಸರ್ವರು ಪರಸ್ಪರ ಆಲಿಂಗನದೊAದಿಗೆ ಶುಭಾಶಯ ಹಂಚಿಕೊAಡರು.