ಮಡಿಕೇರಿ, ಜೂ. ೧೭: ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳರ ಕೈಚಳಕಕ್ಕೆ ಬಿದ್ದು ಹಲವಾರು ಮಂದಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದು ಕೊಂಡಿದ್ದಾರೆ. ಖದೀಮರ ಮಾತಿನ ನೈಪುಣ್ಯತೆಗೆ ಬಲೆ ಬೀಳುವುದಲ್ಲದೆ, ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡುವುದು, ಅಪಾಯಕಾರಿ ಆ್ಯಪ್ಗಳನ್ನು ಡೌನ್ಲೋಡ್ ಮಾಡುವುದು, ಹೀಗೆ ಹತ್ತು-ಹಲವಾರು ಮಾರ್ಗಗಳ ಮೂಲಕ ಅಮಾಯಕರು ತಾವು ಸಂಪಾದಿಸಿದ, ಸಂಗ್ರಹಸಿದ ಹಣವನ್ನು ಕಳೆದು ಕೊಳ್ಳುತ್ತಿದ್ದಾರೆ. ಈ ಬಗ್ಗೆ ಆರ್.ಬಿ.ಐ, ಪೊಲೀಸ್ ಇಲಾಖೆ, ಬ್ಯಾಂಕ್ಗಳು ಕೂಡ ತಮ್ಮ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರ್ವಹಿಸುತ್ತಿದೆ. ಆದಾಗ್ಯೂ ಇಂತಹ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಿವೆ.
ಇತ್ತೀಚಿನ ಹೊಸ ಬೆಳವಣಿಗೆ ಯಲ್ಲಿ ಸೈಬರ್ ಕಳ್ಳರು ಅಮಾಯಕರ ಸಂಖ್ಯೆಗೆ ಬರಬೇಕಾದ ಓ.ಟಿ.ಪಿಯನ್ನು ತಮ್ಮ ಫೋನ್ಗೆ ಫಾರ್ವಡ್ ಮಾಡಿಕೊಂಡು ಲಕ್ಷಾಂತರ ಹಣ ದೋಚುತ್ತಿದ್ದಾರೆ. ಈ ಫಾರ್ವಡಿಂಗ್ ಅನ್ನು ತಡೆಯಲು, ತಮ್ಮ ಫೋನ್ ಸಂಖ್ಯೆ ಫಾರ್ವಡ್ ಆಗಿದೆಯೇ ಎಂದು ತಿಳಿದುಕೊಳ್ಳಲು ಟೆಲಿಕಾಮ್ ಸಂಸ್ಥೆಗಳ ಮೂಲಕ ಸಾಧ್ಯವಾಗಿದ್ದು ವಿವರ ಇಂತಿದೆ:
ಫಾರ್ವಡ್ ಆಗಿದೆಯಾ ಎಂದು ತಿಳಿದುಕೊಳ್ಳಲು *#೬೭# ಗೆ ಕರೆ ಮಾಡಿ
ನಿಮ್ಮ ಫೋನ್ ಸಂಖ್ಯೆಗೆ ಬರುವ ಸಂದೇಶಗಳು ಇತರರ ನಂಬರ್ಗೆ ಫಾರ್ವಡ್ ಆಗಿದೆಯಾ ಎಂಬುದನ್ನು ತಿಳಿದುಕೊಳ್ಳಲು *#೬೭# ಗೆ ಕರೆ ಮಾಡಿ. ಕರೆ ಮಾಡಿದೊಡನೆ ನಿಮ್ಮ ಸಂಖ್ಯೆಗೆ ಟೆಲಿಕಾಮ್ ಸಂಸ್ಥೆಯಿAದ ಚಿತ್ರದಲ್ಲಿರುವಂತಹ ಸಂದೇಶವೊAದು ಬರಲಿದೆ. ಈ ಮೂಲಕ ನಿಮ್ಮ ಸಂಖ್ಯೆಯ ವಾಯ್ಸ್. ಡೇಟಾ ಹಾಗೂ ಫ್ಯಾಕ್ಸ್ ಇತರ ಸಂಖ್ಯೆಗೆ ಫಾರ್ವಡ್ ಆಗಿರುವ ಬಗ್ಗೆ ಮಾಹಿತಿ ದೊರಕಲಿದೆ.
ಫಾರ್ವಡ್ ಆಗಿದ್ದೇ ಆದಲ್ಲಿ
#೦೦೨# ಗೆ ಕರೆ ಮಾಡಿ
*#೬೭# ಗೆ ಕರೆ ಮಾಡಿದ ಬಳಿಕ ನಿಮ್ಮ ಮಾಹಿತಿ ಇತರ ಸಂಖ್ಯೆಗೆ ಫಾರ್ವಡ್ ಆಗಿದೆ ಎಂದು ಸಂದೇಶ ಬಂದಲ್ಲಿ #೦೦೨# ಗೆ ಕರೆ ಮಾಡಿ. ಕರೆ ಮಾಡಿದಾಕ್ಷಣ ನಿಮ್ಮ ಫೋನ್ ಸಂಖ್ಯೆಯ ಫಾರ್ವಡಿಂಗ್ ಸೇವೆ ಸ್ಥಗಿತಗೊಳ್ಳಲಿದೆ.
ಅಪರಿಚಿತ ಎ.ಪಿ.ಕೆ
ಡೌನ್ಲೋಡ್ ಮಾಡಬೇಡಿ
ಸೈಬರ್ ಖದೀಮರು ತಾವು ಸೃಜಿಸಿದ ಆ್ಯಪ್ವೊಂದನ್ನು ನಿಮ್ಮ ವಾಟ್ಸಾö್ಯಪ್ ಸಂಖ್ಯೆಗೆ ಎ.ಪಿ.ಕೆ ಫೈಲ್ ಕಳಿಸಿ ಡೌನ್ಲೋಡ್ ಮಾಡಲು ಒತ್ತಾಯಿಸುತ್ತಾರೆ. ಬ್ಯಾಂಕ್ಗಳ ಲೋಗೋವನ್ನು ವಾಟ್ಸಾö್ಯಪ್ ಡಿ.ಪಿ ಅಲ್ಲಿ ಅಳವಡಿಸಿ ತಮ್ಮ ಬ್ಯಾಂಕ್ ಸೇವೆಗಳು ಸ್ಥಗಿತವಾಗಿದ್ದು, ಮರುಚಲಾಯಿಸಲು ಎ.ಪಿ.ಕೆ ಡೌನ್ಲೋಡ್ ಮಾಡಿ ಎಂಬ ಸಂದೇಶವನ್ನು ತಮ್ಮ ವಾಟ್ಸಾö್ಯಪ್ಗೆ ಕಳುಹಿಸುತ್ತಾರೆ. ಬ್ಯಾಂಕ್ ಹೆಸರಿನಲ್ಲಿಯೇ ಎ.ಪಿ.ಕೆ ಇರಲಿದ್ದು, ಬಹುತೇಕ ಮಂದಿ ಬಲೆಗೆ ಬಿದ್ದು, ಎ.ಪಿ.ಕೆ ಡೌನ್ಲೋಡ್ ಮಾಡುತ್ತಾರೆ. ಈ ಸಂದರ್ಭ ಅಮಾಯಕರ ಫೋನ್ಗೆ ಬರುವ ಎಲ್ಲ ಸಂದೇಶಗಳೂ ಖದೀಮರ ಸಂಖ್ಯೆಗೆ ಫಾರ್ವಡ್ ಆಗಲಿದ್ದು ಬ್ಯಾಂಕ್ ಒ.ಟಿ.ಪಿ ಕೂಡ ಖದೀಮರ ಪಾಲಾಗಿ ಹಣ ದೋಚುವಿಕೆಗೆ ಸುಲಭ ಮಾರ್ಗವಾಗಲಿದೆ.
ಈ ಕಾರಣದಿಂದಾಗಿ ಅಪರಿಚಿತ ಎ.ಪಿ.ಕೆ ಫೈಲ್ಗಳನ್ನು ಡೌನ್ಲೋಡ್ ಮಾಡುವುದರಿಂದ ಸಾರ್ವಜನಿಕರು ದೂರವಿರುವುದು ಒಳಿತು. ಅಪ್ಪಿತಪ್ಪಿ ಡೌನ್ಲೋಡ್ ಮಾಡಿದ್ದೇ ಆದಲ್ಲಿ ಮೇಲೆ ವಿವರಿಸಲಾದ ಕ್ರಮಗಳ ಮೂಲಕ ಫಾರ್ವಡ್ ಸೇವೆಯನ್ನು ಸ್ಥಗಿತಗೊಳಿಸಬಹುದಾಗಿದೆ.