ವೀರಾಜಪೇಟೆ, ಜೂ. ೧೭: ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಯಾದ ರಭಸಕ್ಕೆ ಇನ್ನುಳಿದ ನಾಲ್ಕು ಕಾರು ಗಳು ಜಖಂಗೊAಡಿರುವ ಘಟನೆ ಸೋಮವಾರ ನಸುಕಿನ ವೇಳೆ ೨.೩೦ರ ಸಮಯದಲ್ಲಿ ವೀರಾಜಪೇಟೆ ಸಮೀಪದ ಮೀನುಪೇಟೆಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇರಳ ರಾಜ್ಯದ ಕಣ್ಣನೂರಿನ ಪಂಜೇರಿ ನಿವಾಸಿ ವಿವೇಕ್ (೩೬) ಎಂಬಾತ ತನ್ನ ಸಂಗಡಿಗರು ನಾಲ್ಕು ಮಂದಿಯ ಜೊತೆಯಲ್ಲಿ ಕೊಡಗಿಗೆ ಆಗಮಿಸಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮರಳಿ ಕಣ್ಣನೂರಿಗೆ ತೆರಳುತ್ತಿದ್ದರು. ಬೆಳಗ್ಗಿನ ಜಾವ ಎರಡು ಮೂವತ್ತರ ಸಮಯದಲ್ಲಿ ವೀರಾಜಪೇಟೆ ಮಲಬಾರ್ ರಸ್ತೆ ಬದಿಯಲ್ಲಿ ನಿಲ್ಲಿಸಿದ ಸಾರ್ವಜನಿಕರ ವಾಹನಗಳಿಗೆ ಕಾರು ಡಿಕ್ಕಿಯಾಗಿದೆ.
ವಾಹನಗಳ ಡಿಕ್ಕಿ ಹೊಡೆದ ಶಬ್ದವು ಕೇಳಿಸಿಕೊಂಡ ಅಕ್ಕ ಪಕ್ಕದ ನಿವಾಸಿಗಳು ತಕ್ಷಣ ಬಂದು ಗಮನಿಸಿ, ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ನಗರ ಪೊಲೀಸರು ಚಾಲಕನ ವಿರುದ್ಧ ಕ್ರಮ ಕೈಗೊಂಡು ಆತ ಚಾಲನೆ ಮಾಡುತ್ತಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಿದ್ದೆ ಮಂಪರಿನಲ್ಲಿ ಅವಘಡ ಸಂಭವಿಸಿರುವುದಾಗಿ ಹೇಳಲಾಗಿದೆ. ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.