ಮುಳ್ಳೂರು, ಜೂ. ೧೬: ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆಗೆ ೨೦೨೩-೨೪ನೇ ಸಾಲಿನ ಗೋಲ್ಡನ್ ಆವಾರ್ಡ್ ಲಭಿಸಿದೆ. ಇತ್ತಿಚೆಗೆ ಮೈಸೂರಿನಲ್ಲಿ ನಡೆದ ೨೦೨೩-೨೪ನೇ ಸಾಲಿನ ರೋಟರಿ ಸಂಸ್ಥೆಗಳ ಜೈತ್ರಯಾತ್ರ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊಡಗು ರೋಟರಿ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಎಚ್.ಕೇಶವ್, ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆಯ ಅಧ್ಯಕ್ಷ ಎಚ್.ಆರ್. ಉದಯ್ಕುಮಾರ್ ಮತ್ತು ಕಾರ್ಯದರ್ಶಿ ಟಿ.ಪಿ. ಸಂಪತ್ ಅವರುಗಳಿಗೆ ಪ್ರದಾನ ಮಾಡಿದರು.