ಮಡಿಕೇರಿ, ಜೂ. ೧೬: ಪುತ್ತೂರಿನ ಕುಂಬ್ರ ಸಮೀಪದಲ್ಲಿ ಕಾರು ಹಾಗೂ ಜೀಪಿನ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಅಪಘಾತದಲ್ಲಿ ಜಿಲ್ಲೆಯ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಾಣಿ-ಮೈಸೂರು ಹೆದ್ದಾರಿಯ ಕುಂಬ್ರ ಸಮೀಪದ ಶೇಖಮಲೆಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಕೊಡಗು ಜಿಲ್ಲೆಯ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರ ನಿವಾಸಿ ರವೀಂದ್ರ ಹಾಗೂ ಲೋಕೇಶ್ ಮೃತಪಟ್ಟಿದ್ದಾರೆ. ಲೋಕೇಶ್ ಹಾಗೂ ರವೀಂದ್ರ ಅವರುಗಳು ಆಲ್ಟೋ ಕಾರಿನಲ್ಲಿ ಮಂಗಳೂರಿನಿAದ ಹಿಂತಿರುಗುತ್ತಿದ್ದ ಸಂದರ್ಭ ಪಕ್ಕದಲ್ಲಿ ಬರುತ್ತಿದ್ದ ಬೈಕ್ ಒಂದಕ್ಕೆ ಡಿಕ್ಕಿಯಾಗಿದ್ದು, ಹೆಚ್ಚಿನ ಅನಾಹುತ ತಪ್ಪಿಸಲು ಬಲಬದಿಗೆ ವಾಹನವನ್ನು ತಿರುಗಿಸಿದ್ದಾರೆ. ಈ ಸಂದರ್ಭ ಮೈಸೂರಿನಿಂದ ಪುತ್ತೂರು ಕಡೆಗೆ ಎದುರಿನಿಂದ ಬರುತ್ತಿದ್ದ ಬೊಲೆರೋ ಜೀಪ್ಗೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ತೀವ್ರ ರಕ್ತಸ್ರಾವಗೊಂಡು ಗಂಭೀರ ಸ್ಥಿತಿಯಲ್ಲಿದ್ದ ರವೀಂದ್ರ ಹಾಗೂ ಲೋಕೇಶ್ ಅವರುಗಳನ್ನು ಪಕ್ಕದ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿ ತಾದರೂ ಚಿಕಿತ್ಸೆ ನೀಡುವ ಮುನ್ನ ಕೊನೆಯುಸಿರೆಳೆದಿದ್ದಾರೆ.
ರವೀಂದ್ರ ಅವರು ಮಂಗಳೂರಿ ನಲ್ಲಿ ಚಾಲಕ ವೃತ್ತಿ ಮಾಡುತ್ತ ಮಗನೊಂದಿಗೆ ನೆಲೆಸಿದ್ದರು. ಮಂಗಳೂರಿನಿAದ ಮನೆ ಖಾಲಿ ಮಾಡಿ ತಾ. ೧೫ ರಂದು ವಾಲ್ನೂರು-ತ್ಯಾಗತ್ತೂರಿಗೆ ಮರಳಿದ್ದರು. ತಾ. ೧೬ ರಂದು ಲೋಕೇಶ್ ಅವರೊಂದಿಗೆ ಮಂಗಳೂರಿಗೆ ತೆರಳಿ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ತನ್ನ ಕಾರಿನಲ್ಲಿ ತುಂಬಿಸಿಕೊAಡು ವಾಪಾಸ್ ತ್ಯಾಗತ್ತೂರಿಗೆ ಬರುವಾಗ ದುರ್ಘಟನೆ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ರವೀಂದ್ರ ವೃತ್ತಿಯಲ್ಲಿ ಚಾಲಕನಾಗಿದ್ದು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಆಚಾರಿ ಯಾಗಿರುವ ಲೋಕೇಶ್ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.