ಮಡಿಕೇರಿ, ಜೂ. ೧೬: ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಿಮ್ಮ ಪ್ರತಿಭೆ ನಮ್ಮ ಪ್ರೋತ್ಸಾಹ ಕಾರ್ಯಕ್ರಮ ಆಯೋಜಿಲಾಗಿದ್ದು, ಮಕ್ಕಳಿಗೆ ವೈಯಕ್ತಿಕ ನೃತ್ಯ ಹಾಗೂ ಕಥೆ ಹೇಳುವ ಆನ್‌ಲೈನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷಿö್ಮ ತಿಳಿಸಿದ್ದಾರೆ.

ಸ್ಪರ್ಧೆಯ ವಿವರ

ಕಥೆ ಹೇಳುವ ಸ್ಪರ್ಧೆ: ವೈಯಕ್ತಿಕ ವಿಭಾಗದಲ್ಲಿ ನಡೆಯಲಿದ್ದು, ೩ ವರ್ಷದಿಂದ ೬ ವರ್ಷದ ಒಳಗಿನ ಮಕ್ಕಳು ಭಾಗವಹಿಸಬೇಕು. ಮೂರು ನಿಮಿಷ. ಅವಧಿಯಲ್ಲಿ ಕಥೆಯ ನೀತಿಯನ್ನು ಹೇಳಬೇಕು. ಕಥೆ ಕನ್ನಡದಲ್ಲಿಯೇ ಇರಬೇಕು.

ನೃತ್ಯ ಸ್ಪರ್ಧೆಗೆ ೭ ವರ್ಷದಿಂದ ೧೨ ವರ್ಷದ ಒಳಗಿನ ಮಕ್ಕಳು ಭಾಗವಹಿಸಬಹುದು. ಕನ್ನಡ ಭಕ್ತಿಗೀತೆಗಳಿಗೆ ೩ ನಿಮಿಷದ ಅವಧಿಯೊಳಗೆ ನೃತ್ಯ ಮಾಡಬೇಕು.

ಭರತನಾಟ್ಯ ಸ್ಪರ್ಧೆಯಲ್ಲಿ ಚಲನಚಿತ್ರದ ಗೀತೆಗೆ ನೃತ್ಯ ಮಾಡುವಂತಿಲ್ಲ, ಭರತನಾಟ್ಯದ ಉಡುಗೆ - ತೊಡುಗೆ ಕಡ್ಡಾಯ. ೩ ನಿಮಿಷದ ಅವಧಿಯಲ್ಲಿ ಸ್ಪರ್ಧಿಸಬೇಕಾಗಿದ್ದು, ೧೨ ವರ್ಷದಿಂದ ೧೮ ವರ್ಷದ ಮಕ್ಕಳು ಭಾಗವಹಿಸಬಹುದಾಗಿದೆ.

ಎಲ್ಲ ಸ್ಪರ್ಧಿಗಳು ಸ್ಪರ್ಧೆಗಳಿಗೆ ವೀಡಿಯೋಗಳನ್ನು ಕಳುಹಿಸಲು ತಾ. ೩೦ ಕೊನೆಯ ದಿನವಾಗಿದ್ದು, ಕಥೆ ಹೇಳುವ ಸ್ಪರ್ಧೆಗೆ ೯೩೫೩೭೪೮೯೬೨, ನೃತ್ಯ ಸ್ಪರ್ಧೆಗೆ ೯೬೩೨೮೭೦೧೦೨, ಭರತನಾಟ್ಯ ವಿಭಾಗಕ್ಕೆ ೯೪೮೦೭೮೩೧೫೬ ಸಂಖ್ಯೆಗೆ ವಾಟ್ಸಾö್ಯಪ್ ಮೂಲಕ ವೀಡಿಯೋ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ೯೬೬೩೧೧೯೬೭೦ ಸಂಪರ್ಕಿಸುವAತೆ ಕೋರಿದ್ದಾರೆ.

ವಿಜೇತರಿಗೆ ನವೆಂಬರ್ ತಿಂಗಳಲ್ಲಿ ನಡೆಯುವ ಕನ್ನಡ ಹಬ್ಬದ ವೇದಿಕೆಯಲ್ಲಿ ಬಹುಮಾನಗಳನ್ನು ನೀಡಲಾಗುವುದು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಮಕ್ಕಳಿಗೆ ವೇದಿಕೆಯಲ್ಲಿ ಪ್ರತಿಭಾ ಅನಾವರಣಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.