ಪೊನ್ನಂಪೇಟೆ, ಜೂ.೧೬ : ರೇಬಿಸ್ ಲಸಿಕಾ ಅಭಿಯಾನದಡಿ ಪೊನ್ನಂಪೇಟೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಅಭಿಯಾನ ಕಾರ್ಯಕ್ರಮ ನಡೆಯಲಿದೆ ಎಂದು ಪೊನ್ನಂಪೇಟೆ ತಾಲೂಕು ಪಶುವೈದ್ಯಕೀಯ ಆಸ್ಪತ್ರೆ ಪಶುವೈದ್ಯಾಧಿಕಾರಿ ಡಾ. ಭವಿಷ್ಯ ಕುಮಾರ್. ಜಿ.ಜಿ ಮಾಹಿತಿ ನೀಡಿದಾರೆ.
ತಾ.೧೮ ರಿಂದ ೩೦ ರವರಗೆ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಸಾಕುಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳಿಗೆ ಉಚಿತ ಲಸಿಕೆ ಹಾಕಲಾಗುವುದು. ತಾ.೧೮ರಂದು ಕುಟ್ಟ ಪಶುಚಿಕಿತ್ಸಾಲಯ ಆವರಣದಲ್ಲಿ ತಾ. ೧೯ ರಂದು ಶ್ರೀಮಂಗಲ ಪಶುವೈದ್ಯ ಆಸ್ಪತ್ರೆ ಆವರಣ ಮತ್ತು ಪೊನ್ನಂಪೇಟೆ ಪಶುವೈದ್ಯ ಆಸ್ಪತ್ರೆ ಆವರಣದಲ್ಲಿ, ತಾ. ೨೦ ರಂದು ಕಾನೂರು ಪಶುಚಿಕಿತ್ಸಾಲಯ ಆವರಣ, ತಾ. ೨೧ರಂದು ಹುದಿಕೇರಿ ಪಶುವೈದ್ಯ ಆಸ್ಪತ್ರೆ ಆವರಣ, ತಾ. ೨೪ ರಂದು ಬಾಳೆಲೆ, ಬೆಸಗೂರು ಪಶುವೈದ್ಯ ಆಸ್ಪತ್ರೆ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಆವರಣದಲ್ಲಿ, ತಾ. ೨೫ ರಂದು ಹಳ್ಳಿಗಟ್ಟು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಆವರಣ, ತಾ. ೨೬ ರಂದು ತಿತಿಮತಿ ಪಶು ಆಸ್ಪತ್ರೆ ಆವರಣ, ತಾ. ೨೭ ರಂದು ಕೋಟೂರು ಪ್ರಾಥಮಿಕ ಪಶುಚಿಕಿತ್ಸಾಲಯ ಆವರಣ, ತಾ. ೨೮ ರಂದು ಮಾಯಮುಡಿ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಆವರಣದಲ್ಲಿ ಲಸಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.