ಗೋಣಿಕೊಪ್ಪಲು, ಜೂ.೧೬ : ಕೊಡಗಿನ ಮೂಲ ನಿವಾಸಿಗಳಾದ ಜೇನು ಕುರುಬ, ಯರವ, ಪಂಜರಿ ಯರವ, ಬೆಟ್ಟಕುರುಬ ಸೇರಿದಂತೆ ಆದಿವಾಸಿ ಗಳ ಸಾಂಸ್ಕೃತಿಕ ಸಮ್ಮಿಲನ ತಾ.೨೫ ರಂದು ಗೋಣಿಕೊಪ್ಪಲುವಿನ ಕೊಡಗು ಇಂಟರ್ನ್ಯಾಷನಲ್ ಕಮ್ಯೂನಿಟಿ ಹಾಲ್ ನಲ್ಲಿ ಬೆಳಿಗ್ಗೆ ೮ ಗಂಟೆಯಿAದ ರಾತ್ರಿ ೭ ಗಂಟೆಯವರೆಗೆ ನಡೆಯಲಿದೆ ಎಂದು ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆಯ ಕೊಡಗು ಜಿಲ್ಲಾಧ್ಯಕ್ಷ ಜೇನು ಕುರುಬರ ರಮೇಶ್ ತಿಳಿಸಿದ್ದಾರೆ.
ನಾಗರಹೊಳೆ ಸಮೀಪದ ನಾಲ್ಕೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜನೆಗೊಂಡಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೊಡಗಿನ ಮೂಲ ಆದಿವಾಸಿಗಳ ಕಲೆ, ಸಂಸ್ಕೃತಿ ನಶಿಸಿ ಹೋಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆಯು ಮುಂದೆ ಬಂದಿದೆ. ಕೊಡಗಿನ ಮೂಲ ನಿವಾಸಿಗಳನ್ನು ಒಂದೇ ವೇದಿಕೆಯ ಡಿಯಲ್ಲಿ ತರುವ ಮೂಲಕ ತಮ್ಮ ತಮ್ಮ ಜನಾಂಗದ ಸಂಸ್ಕೃತಿಯನ್ನು ಅನಾವರಣಗೊ ಳಿಸಲು ವೇದಿಕೆ ಒದಗಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಆದಿವಾಸಿಗಳ ಹಾಡು, ಕುಣಿತ, ಕೋಲಾಟ, ನಾಟಕ ಸೇರಿದಂತೆ ೧೨ಕ್ಕೂ ಅಧಿಕ ಕಾರ್ಯಕ್ರಮಗಳನ್ನು ದಿನಪೂರ್ತಿ ಹಮ್ಮಿಕೊಳ್ಳಲಾಗಿದೆ.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಕಾರ್ಯಕ್ರಮವನ್ನು ಉದ್ಘಾ ಟಿಸಲಿದ್ದು, ಸಾವಿರಾರು ಆದಿವಾಸಿ ಗಳು ಕಾರ್ಯಕ್ರಮದಲ್ಲಿ ಭಾಗವಹಿಸ ಲಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ. ಗೋಷ್ಠಿಯಲ್ಲಿ ಗಿರಿಜನ ಸಮಗ್ರ ಅಭಿ ವೃದ್ಧಿ ಕಲಾ ಸಂಸ್ಥೆಯ ಪದಾಧಿಕಾರಿ ಗಳಾದ ರಾಮಕೃಷ್ಣ, ಚಂದ್ರ, ಮಣಿ, ಕುಮಾರ, ಉದಯ, ನಿತೀನ್, ಸಂಜು, ಜೆವಿನ್, ಉಪಸ್ಥಿತರಿದ್ದರು.