ವಿಶ್ವದಾದ್ಯಂತ ಮುಸ್ಲಿಮರು ಪ್ರವಾದಿ ಇಬ್ರಾಹೀಂ(ಅ)ರವರ ತ್ಯಾಗಮಯ ಜೀವನದ ಸ್ಮರಣೆಯನ್ನು ಮಾಡುತ್ತಾ ಬಕ್ರೀದ್ (ಈದುಲ್ ಅಝ್‌ಹಾ) ಹಬ್ಬವನ್ನು ಆಚರಿಸುತ್ತಿದ್ದಾರೆ. ಜಾಗತಿಕ ಮುಸ್ಲಿಮರು ಪವಿತ್ರ ಮೆಕ್ಕಾದಲ್ಲಿ ಹಜ್ ಕರ್ಮದಲ್ಲಿ ನಿರತರಾಗಿರುವಾಗಲೇ ಜಗತ್ತಿನ ಎಲ್ಲಾ ಕಡೆಯ ವಿಶ್ವಾಸಿಗಳೂ ಅವರೊಂದಿಗಿನ ಐಕ್ಯಧಾರ್ಡ್ಯವೆಂಬAತೆ ಬಕ್ರೀದ್ ಆಚರಣೆಯಲ್ಲಿ ಮುಳುಗುತ್ತಾರೆ. ನಾಲ್ಕು ಸಹಸ್ರ ವರ್ಷಗಳ ಹಿಂದೆ ಬದುಕಿದ ಪ್ರವಾದಿ ಇಬ್ರಾಹೀಂ(ಅ)ರ ತ್ಯಾಗಮಯ ಜೀವನವನ್ನು ಹೊರತುಪಡಿಸಿ, ಮನುಷ್ಯ ಇತಿಹಾಸವು ಮುಂದೆ ಸಾಗುವುದರಲ್ಲಿ ಅರ್ಥವಿಲ್ಲ. ಪ್ರತಿ ವರ್ಷದ ಹಬ್ಬಾಚರಣೆಗಳೂ ಇಬ್ರಾಹೀಮೀ ಸ್ಮರಣೆಗಳ ನವೀಕರಣವಾಗುತ್ತದೆ.

ತನ್ನನ್ನು ಸೃಷ್ಟಿಸಿ ಪರಿಪಾಲಿಸಿ ಸಂರಕ್ಷಿಸುತ್ತಿರುವ ವಿಶ್ವ ಪ್ರಭುವಿನಿಂದ ಎಷ್ಟೊಂದು ದೂರಪಾಲಿಸಲು ಸಾಧ್ಯವೋ ಅಷ್ಟೊಂದು ದೂರ ಪಾಲಿಸುತ್ತಿರುವ ಸ್ಥಿತಿಯಲ್ಲಿ ಆಧುನಿಕ ಮಾನವನು ಬದುಕುತ್ತಿದ್ದಾನೆ. ದೇವರೆಂಬ ಹೆಸರಿನಲ್ಲಿ ಪ್ರಕೃತಿಯ ಮುಂದೆಯೂ ಇತರ ವಸ್ತುಗಳ ಮುಂದೆಯೂ ಅತ್ಯಂತ ವಿಧೇಯ ಭಾವನೆಯಿಂದ ನಾವು ನಿಲ್ಲುತ್ತೇವೆ. ಈ ಮೂಲಕ ಆಧುನಿಕ ಯುಗದ ಮನುಷ್ಯನು ತನಗೆ ಯಾವೆಲ್ಲಾ ಘನತೆಗಳಿವೆಯೋ ಅವುಗಳನ್ನೆಲ್ಲಾ ಸ್ವಯಂ ಹಾಳುಗೆಡವುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಇಬ್ರಾಹೀಮೀ ಸಂದೇಶದ ಪ್ರಸ್ತುತತೆಯ ಮೂಲ ಅರಿವಾಗುತ್ತದೆ. ತನ್ನನ್ನು ಸೃಷ್ಟಿಸಿದ ದೇವನ ಮುಂದೆ ಮಾತ್ರ ತಲೆಬಾಗಿ ಎಂಬ ಕರೆ ಮನುಷ್ಯನನ್ನು ಬಿಗಿದಿರುವ ಎಲ್ಲಾ ದಾಸ್ಯಗಳ ಸಂಕೋಲೆಗಳಿAದ ಮುಕ್ತಗೊಳಿಸುತ್ತದೆ. ಹಿಂತಿರುಗಿ ನೋಡಿದಾಗ ವಿಶ್ವದ ಎಲ್ಲವನ್ನೂ ನಾನೇ ನಿಯಂತ್ರಿಸುತ್ತೇನೆAದು ಕೊಚ್ಚಿಕೊಂಡ ಪ್ರಭುತ್ವ. ತಾನೇ ದೇವರೆಂದು ಮೆರೆದ “ನಂರೂದ್”ನನ್ನು ನಾವು ಕಾಣುತ್ತೇವೆ. ದೇವರ ಬಗೆಗಿನ ಅವಗಣನೆ ಒಬ್ಬ ವ್ಯಕ್ತಿಯನ್ನು ಎಷ್ಟರ ಮಟ್ಟಿಗೆ ಅಹಂಕಾರಿಯನ್ನಾಗಿ ಮಾಡುತ್ತದೆ ಎಂಬುದರ ಉತ್ತಮ ನಿದರ್ಶನ ನಮಗೆ ನಂರೂದ್‌ನ ಜೀವನದಲ್ಲಿ ಲಭ್ಯ.

ಜಾಗತಿಕ ಇತಿಹಾಸದಲ್ಲಿ ಪ್ರಥಮ ಬಾರಿ ಬಹುದೇವಾರಾಧನೆ ಮತ್ತು ದುರಹಂಕಾರಿ ಪ್ರಭುತ್ವದ ವಿರುದ್ಧ ಜನಪ್ರಿಯ ಕ್ರಾಂತಿಕಾರಿ ಶಬ್ದಗಳು ಮೊಳಗಿದುದು ಇಬ್ರಾಹೀಮ್(ಅ)ರ ಚರಿತ್ರೆಯಲ್ಲಿಯೇ. ಅವರ ಕ್ರಾಂತಿಯ ಕಹಳೆ ನಿರಂಕುಶ ಪ್ರಭುತ್ವದ ನೆಲಗಟ್ಟನ್ನು ಅಲುಗಾಡಿಸಿತು. ದುರಹಂಕಾರಿ ಆಡಳಿತ ವರ್ಗವು ಇಬ್ರಾಹೀಮರಿಗೆ ಅಗ್ನಿಯ ಶಿಕ್ಷೆಯನ್ನು ವಿಧಿಸಿತು. ದೇವ ಸಹಾಯದಿಂದ ಅಗ್ನಿ ಶಿಕ್ಷೆಯಿಂದ ವಿಮೋಚನೆಯಾಯಿತು.

ಕೊನೆಗೆ ತನ್ನ ಆತ್ಮದ ಭಾಗವೆಂದೇ ಪರಿಗಣಿಸಿದ ಪ್ರೀತಿಯ ಪುತ್ರನನ್ನು ದೇವನಿಗಾಗಿ ಬಲಿ ನೀಡಬೇಕೆಂಬ ದೇವಾಜ್ಞೆ ಉಂಟಾದಾಗ ಅವರು ವಿಚಲಿತರಾಗಲಿಲ್ಲ. ಪ್ರೀತಿಯ ಪುತ್ರ ಇಸ್ಮಾಯಿಲರನ್ನೂ, ಪತ್ನಿ ಹಾಜರಾಳನ್ನೂ ಸುಡುವ ಮರುಭೂಮಿಯಲ್ಲಿ ಉಪೇಕ್ಷಿಸಲು ಆಜ್ಞೆಯುಂಟಾದಾಗಲೂ ಹಿಂಜರಿಯಲಿಲ್ಲ. ಅವರು ಸಂಪೂರ್ಣವಾಗಿ ದೇವನಿಗೆ ವಿಧೇಯನಾಗುವುದರಿಂದ ಅದು ಸಾಧ್ಯವಾಯ್ತು. ಕೆಲವೊಂದು ಘಟನೆಗಳಿಂದ ಪ್ರವಾದಿ ಇಬ್ರಾಹಿಂ (ಅ)ರವರನ್ನು ಅಳೆಯುವುದು ಸಾಧ್ಯವಿಲ್ಲ. ಅವರು ಇತಿಹಾಸವಾಗಿದ್ದರು, ಅವರು ಒಂದು ಜನಾಂಗವಾಗಿದ್ದರು. ಪವಿತ್ರ ಕುರಾನಿನ ಮೂಲಕ “ದೇವ ಮಿತ್ರ”ರೆಂದೂ “ಜನನಾಯಕ”ರೆಂದೂ ಬಣ್ಣಿಸಲ್ಪಟ್ಟರು. ಇಬ್ರಾಹಿಂ (ಅ)ರು ವಿಶ್ವದ ಪ್ರಮುಖ ಧರ್ಮಗಳಾದ ಇಸ್ಲಾಂ-ಕ್ರೆöÊಸ್ತ ಹಾಗೂ ಯಹೂದಿ ಧರ್ಮಗಳ ಮಧ್ಯೆ ಬೆಸುಗೆ ನಿರ್ಮಿಸಿದರು. ಇಬ್ರಾಹಿಂ ಪರಂಪರೆಗೆ ಬ್ರಾಹ್ಮಣ ಪರಂಪರೆಯೊAದಿಗೆ ಸಂಬAಧವಿದೆಯೆAದು ಹಲವು ಸಂಶೋಧಕರು ಹೇಳುತ್ತಾರೆ.

ವಿಶ್ವದ ಬಲಿಷ್ಠ ಕ್ರಾಂತಿಕಾರಿಗಳು ಅಪೂರ್ವ ಸಂದರ್ಭಗಳಲ್ಲಿ ಇತರ ಸಿದ್ದಾಂತಗಳೊAದಿಗೆ ಒಂದಿಷ್ಟು ರಾಜಿಗೆ ಒಪ್ಪಿಕೊಳ್ಳುವ ಸಂದರ್ಭವಿದೆ. ಇಬ್ರಾಹೀಮರಿಗೆ ಅವರ ಹಾದಿ ಧ್ಯೇಯ ಹಾಗೂ ಧೋರಣೆ ಎಲ್ಲವೂ ದೇವ ನಿರ್ದೇಶನದಂತೆ ಆಗಿತ್ತು. ಇಬ್ರಾಹೀಮರು ಎಲ್ಲವನ್ನೂ ತನ್ನ ದೇವನಿಗೆ ಸಮರ್ಪಿಸಿ ಭರವಸೆಗಳನ್ನು ದೇವನಲ್ಲಿ ಅರ್ಪಿಸಿ ತಾನು ಪ್ರಭುವಿನ ಕಡೆಗೆ ಶರಣಾಗುತ್ತಿದ್ದೇನೆ ಮತ್ತು ಅವನು ನನಗೆ ದಾರಿ ತೋರಿಸುತ್ತಾನೆ ಎಂಬ ನಿರೀಕ್ಷೆಯ ಘೋಷಣೆಗಳನ್ನು ಸಾರುತ್ತಾರೆ. ಅರ್ಥಾತ್ ಅವರು ತಮ್ಮ ದೇಶ ಪ್ರೇಮದಲ್ಲಿ ದೇವರನ್ನು ಕಂಡರು.

ಇಬ್ರಾಹೀಮರು ಇಡೀ ಒಂದು ಸಮೂಹವನ್ನು ದೇವನೊಂದಿಗೆ ಬೆಸಯುವಂತೆ ಮಾಡಿದರು. ಭೂಮಿಯ ಮೇಲೆ ಏಕದೇವನ ಆರಾಧನೆಗಾಗಿ ನಿರ್ಮಿಸಲಾದ ಪ್ರಪ್ರಥಮ ದೇವಾಲಯವಾದ ಸೌದಿ ಅರೇಬಿಯಾದ ಮೆಕ್ಕಾ ಪಟ್ಟಣದಲ್ಲಿರುವ “ಕಅಬಾ” ನಿರ್ಮಾಣದ ವೇಳೆ ಇಬ್ರಾಹೀಮರು ಪುತ್ರ ಇಸ್ಮಾಯಿಲರೊಡಗೂಡಿ ಈ ರೀತಿ ಪ್ರ‍್ರಾರ್ಥಿಸಿದರು.-“ಹೇ! ದೇವಾ!! ನಿನ್ನ ಸ್ಮರಣೆಗಾಗಿ ಈ ಭೂಮಿಯಲ್ಲಿ ಭವ್ಯವಾದ ಒಂದು ಮಂದಿರವನ್ನು ನೀಡು.ತನ್ಮೂಲಕ ಒಂದು ಸಂಸ್ಕೃತಿಯನ್ನು ಒಂದು ನಾಗರಿಕತೆಯನ್ನು ನೀನು ಜಗತ್ತಿಗೆ ನೀಡು” ಎಂದು ಅದರ ಫಲವಾಗಿಯೇ ಇಂದು ಲಕ್ಷಾಂತರ ವಿಶ್ವಾಸಿಗಳು ವರ್ಷಂಪ್ರತಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಾರೆ.

ಇಬ್ರಾಹೀಮರ ಜೀವನದ ಪ್ರತಿಯೊಂದು ನಿಮಿಷಗಳೂ ಸಮರ್ಪಣಾ ಸಾಂದ್ರವಾಗಿತ್ತು. ತನ್ನ ಪ್ರಭು ನೀನು ನನಗೆ ಸಂಪೂರ್ಣ ಸಮರ್ಪಿತನಾಗು ಎಂದು ಹೇಳಿದ್ದೇ ತಡ. ನಾನು ಸರ್ವಲೋಕ ಸಂರಕ್ಷಕನಾದ ದೇವನಿಗೆ ಶರಣಾದೆ ಎಂದು ತಮ್ಮ ಜೀವನದ ಮೂಲಕ ಸಾಕ್ಷö್ಯ ವಹಿಸುತ್ತಾರೆ. ಪುತ್ರ ಬಲಿಗೆ ಸಿದ್ದರಾಗುವುದರೊಂದಿಗೆ ಅದನ್ನು ಕಾರ್ಯರೂಪಗೊಳಿಸುತ್ತಾರೆ.

ಇಬ್ರಾಹೀಮರು ಕಲಿಸಿದ ಬದುಕಿನ ಕಲೆ ಸಮರ್ಪಣೆಯೆಂಬುದು ಆಗಿತ್ತು. ಸಮರ್ಪಣೆಯ ಮತ್ತೊಂದು ಹೆಸರೇ “ಇಸ್ಲಾಂ” ಎಂಬುದು. ಇಬ್ರಾಹೀಮರ ಜೀವನದ ಅಂತಃಧಾರೆ ತ್ಯಾಗವಾಗಿತ್ತು. ಮಹತ್ತರವಾದ ಧ್ಯೇಯವನ್ನು ಪೂರ್ಣಗೊಳಿಸಲು ತನಗೆ ಅತ್ಯಂತ ಪ್ರಿಯವಾದುದೆಲ್ಲವನ್ನೂ ತ್ಯಜಿಸುವುದೇ ತ್ಯಾಗ. ಸಂಸಾರವನ್ನು, ಮನೆಯನ್ನು, ದೇಶವನ್ನು ತ್ಯಜಿಸಿದ ಇಬ್ರಾಹೀಮರು ಕೊನೆಗೆ ದೇವಾಜ್ಞೆಯೆಂಬAತೆ ತನ್ನ ಪ್ರೀತಿಯ ಪುತ್ರನನ್ನು ಬಲಿ ನೀಡಲು ಸನ್ನದ್ಧರಾದರು. ಮಾನವ ಇತಿಹಾಸದಲ್ಲಿ ಹಿಂದೆAದೂ ಕಂಡೂ ಕೇಳಿಯೂ ಅರಿಯದ ಮಹಾತ್ಯಾಗ.

ಸಂಸ್ಕೃತಿ ಮತ್ತು ನಾಗರಿಕತೆಯಿಲ್ಲದ ಸಮಾಜಕ್ಕೆ ಇತಿಹಾಸವಿಲ್ಲ. ಪ್ರವಾದಿ ಹಝ್ರತ್ ಇಬ್ರಾಹಿಂ (ಅ) ಸಮಾಜಕ್ಕೆ ಸಂಸ್ಕೃತಿಯನ್ನೂ ನಾಗರಿಕತೆಯನ್ನೂ ನೀಡಿದರು. ಆದುದರಿಂದ ಅಂದಿನ ಸಮಾಜವು ಇಂದೂ ಗುರುತಿಸಲ್ಪಡುತ್ತದೆ. ಇಬ್ರಾಹೀಮರ ಜೀವನ ಪ್ರಸ್ತುತವಾಗುವುದು ಈ ಹಿನ್ನೆಲೆಯಲ್ಲಿ. ಪ್ರಾರ್ಥನೆಯ, ಸಮರ್ಪಣದ ವಿಧೇಯತೆಯ, ತ್ಯಾಗದ ಪವಿತ್ರವಾದ ಒಂದು ಸಾಂಸ್ಕೃತಿಕ ನಾಗರಿಕ ಕ್ರಮವನ್ನು ಅವರು ನಿರ್ಮಿಸಿದರು.

ಅದರ ಮೂಲಕ ಅವರು ಒಂದು ಬಹು ದೊಡ್ಡ ಸಮಾಜವು ನಿರ್ಮಿಸಬೇಕಾದ ಕರ್ತವ್ಯವನ್ನು ನೆರವೇರಿಸಿದರು. ಆದುದರಿಂದಲೇ ಮಾನವ ಸಮೂಹಕ್ಕೆ ಅವಗಣಿಸಲು ಸಾಧ್ಯವಿಲ್ಲದಷ್ಟು ಬೃಹತ್ತಾಗಿ ಇತಿಹಾಸದ ಕೇಂದ್ರವಾದರು. ಜಗತ್ತಿನಾದ್ಯಂತ ವಿಶ್ವಾಸಿಗಳು ಇಬ್ರಾಹೀಮರ ಕರೆಗೆ ಓಗೊಟ್ಟು ಮೆಕ್ಕಾ ಪಟ್ಟಣದಲ್ಲಿ ಒಟ್ಟು ಸೇರಿ ಪವಿತ್ರ ಹಜ್ಜ್ ಎಂಬ ಆರಾಧನೆಯನ್ನು ಕೈಗೊಳ್ಳುತ್ತಾರೆ.

ಲಬ್ಬೆöÊಕಲ್ಲಾಹುಮ್ಮ ಲಬ್ಬೆöÊಕ್!!

- ಪಿ.ಕೆ. ಅಬ್ದುಲ್ ರೆಹೆಮಾನ್, ವೀರಾಜಪೇಟೆ.