ಸುಂಟಿಕೊಪ್ಪ, ಜೂ. ೧೬: ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಸ್ಥಳದಲೇ ದುರ್ಮರಣಕ್ಕೀಡಾದ ಘಟನೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ನಡೆದಿದೆ.
ಗದ್ದೆಹಳ್ಳದ ಪಟ್ಟೆಮನೆ ನಿವಾಸಿ ಲೋಕೇಶ್ (೬೦) ಮೃತ ದುರ್ದೈವಿ.
ಸುಂಟಿಕೊಪ್ಪದಿAದ ಗದ್ದೆಹಳ್ಳದ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನ (ಕೆಎ೧೨ -ಯು ೩೫೩೨) ಮತ್ತು ಸುಂಟಿಕೊಪ್ಪದಿAದ ವೀರಾಜಪೇಟೆಗೆ ತೆರಳುತ್ತಿದ್ದ ಖಾಸಗಿ ಬಸ್ (ಕೆಎ೧೨ -ಬಿ೭೧೭೩) ನಡುವೆ ಗದ್ದೆಹಳ್ಳದ ಎಸ್ಎಸ್ ಇಂಟರ್ನ್ಯಾಷನಲ್ ಹಾಲ್ ಬಳಿಯಲ್ಲಿ ಘಟನೆ ಸಂಭವಿಸಿದ್ದು, ಬಸ್ ಹಿಂಭಾಗದಿAದ ಬೈಕ್ಗೆ ಡಿಕ್ಕಿಪಡಿಸಿದೆ. ಅಪಘಾತ ದಿಂದ ಬೈಕ್ ಸವಾರ ಲೋಕೇಶ್ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತರಾಗಿ ದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಬಸ್ ಮತ್ತು ಚಾಲಕನನ್ನು ವಶಕ್ಕೆ ಪಡೆದು ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಈ ಭಾಗ ಭಾರೀ ತಿರುವಿನಿಂದ ಕೂಡಿದು,್ದ ಅಪಘಾತ ವಲಯವಾಗಿ ಮಾರ್ಪಡುತ್ತಿದೆ. ಇಲ್ಲಿ ಆಗಿಂದಾಗ್ಗೆ ಅಪಘಾತಗಳು ಸಂಭವಿಸಿ ಹಲವು ಪ್ರಾಣಹಾನಿಗಳು ಸಂಭವಿಸುತ್ತಿವೆ. ಸಂಬAಧಿಸಿದ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಇತ್ತ ಗಮನಹರಿಸಿ ಅಪಘಾತಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.