ಟಿ ಹೆಚ್.ಜೆ. ರಾಕೇಶ್

ಮಡಿಕೇರಿ, ಜೂ. ೧೧: ಮುಂಗಾರು ಜಿಲ್ಲೆಯಲ್ಲಿ ಚುರುಕು ಪಡೆದುಕೊಂಡಿದೆ. ವಿಪ ರೀತ ಬಿಸಿಲಿನಿಂದ ಕಂಗೆಟ್ಟಿದ್ದ ಕೊಡಗು ವರ್ಷಾಧಾರೆಯ ಸಿಂಚನಕ್ಕೆ ಮೈಯೊಡ್ಡಿ ನಿಂತಿದೆ. ಮಳೆಗೆ ಇಳೆ ತಂಪಾಗಿ ಪ್ರಕೃತಿ ನಳನಳಿಸುತ್ತಿದೆ. ಜೊತೆಗೆ ಅಲ್ಲಲ್ಲಿ ವರುಣನ ಅರ್ಭಟಕ್ಕೆ ಮರಗಳು ಧರಾಶಾ ಯಿಯಾಗಿ ವಿದ್ಯುತ್ ಕಂಬಗಳು ಬಿದ್ದ ಘಟನೆ ಗಳು ಸಂಭವಿಸಿ ವಿದ್ಯುತ್ ಅಡಚಣೆಯೂ ಸೃಷ್ಟಿ ಯಾಗುತ್ತಿದೆ. ಮುಂಗಾರು ಮಳೆಯ ಸವಾಲುಗಳ ನಡುವೆ ಚೆಸ್ಕಾಂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯ ವ್ಯತಿರಿಕ್ತ ಪರಿಸ್ಥಿತಿಯೊಂದಿಗೆ ಕೆಲಸ ಮಾಡುವ ಸಂದಿಗ್ಧತೆ ಚೆಸ್ಕಾಂ ಪಾಲಿಗೆ ಬಂದಿದೆ. ಆದರೂ ಧೃತಿಗೆಡದೆ ಕೆಲಸದಲ್ಲಿ ತೊಡಗಿಸಿಕೊಂಡು ಬೆಳಕು ನೀಡಲು ಇಲಾಖೆ ಹಗಲಿರುಳು ಶ್ರಮಿಸುತ್ತಿದೆ.

ಹೌದು... ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊAಡಿದೆ. ವಿದ್ಯುತ್ ಕಂಬಗಳು ಬೀಳುವುದು, ‘ಪವರ್ ಕಟ್’ ಆಗುವುದು ಈ ಸಮಯದಲ್ಲಿ ಸರ್ವೇ ಸಾಮಾನ್ಯ. ೨೦೧೮ ರಿಂದ ಈಚೆಗೆ ಮಳೆಗಾಲ ಅಂದರೆ ಆತಂಕ ಹೆಚ್ಚಾಗುತ್ತದೆ. ಪ್ರಾಕೃತಿಕ ವಿಕೋಪ ಎಂಬ ಕರಿಛಾಯೆ ಕೊಡಗನ್ನು ಆವರಿಸಿಕೊಳ್ಳುತ್ತದೆ. ಕಳೆದ ಎರಡು-ಮೂರು ವರ್ಷಗಳಿಂದ ಕೊಡಗಿನ ಮೇಲೆ ಮುನಿಯದ ಪ್ರಕೃತಿ ಸಣ್ಣಪುಟ್ಟ ಅನಾಹುತಗಳನ್ನು ತೋರಿಸಿ ದೊಡ್ಡ ಅಪಾಯಕ್ಕೊಳಗಾದಂತೆ ಕರುಣೆ ತೋರಿದೆ. ಮುಂದೆಯೂ ಏನೂ ಅನಾಹುತವಾಗದಿರಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ.

ಮಳೆಗಾಲ ಬಂತೆAದರೆ ವಿದ್ಯುತ್ ನೀಡುವ ಚೆಸ್ಕಾಂಗೆ ದೊಡ್ಡ ಸವಾಲು ಮುಂದಿರುತ್ತದೆ. ಗ್ರಾಮೀಣ ಭಾಗಗಳೊಂದಿಗೆ ಪಟ್ಟಣ ಪ್ರದೇಶ ದಲ್ಲಿಯೂ ವಿದ್ಯುತ್ ವ್ಯತ್ಯಯ ಗೊಂಡು ಕತ್ತಲು ಮೂಡುತ್ತದೆ. ಇದಕ್ಕೆ ಮರಗಳು ಬಿದ್ದು ವಿದ್ಯುತ್ ತಂತಿ ಧರೆಗುರುಳುವುದು, ಭಾರಿ ಗಾಳಿಗೆ ಕಂಬ ನೆಲಕಚ್ಚುವುದು ಹೀಗೆ ಅನೇಕ ಕಾರಣಗಳಿವೆ. ಈ ಸಂದರ್ಭ ತುರ್ತು ಸ್ಪಂದನ ನೀಡಬೇಕಾ ಗಿರುವ ಚೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ.

ಇರುವುದು ೨೪೯ - ಬೇಕಾಗಿರುವುದು ೩೮೯

ಮಳೆಗಾಲದ ಸಂದರ್ಭ ಸಮರೋಪಾದಿಯಲ್ಲಿ ಚೆಸ್ಕಾಂ ಕೆಲಸ ಮಾಡುತ್ತದೆ. ೨೦೧೮-೧೯ ಹಾಗೂ ೨೦ ರ ಅವಧಿಯಲ್ಲಂತೂ ಹಿಂದೆAದೂ ಕಾಣದ ಮಳೆಗಾಲಕ್ಕೆ ಜಿಲ್ಲೆ ತತ್ತರಿಸಿ ಹೋಗಿತ್ತು. ನಿರೀಕ್ಷಿಸದ ಮಟ್ಟದ ಮಳೆ, ಹಿಂದೆAದೂ ಸಂಭವಿಸದ ವಿಕೋಪದ ನಡುವೆ ವಿದ್ಯುತ್ ಒದಗಿಸಿ ಚೆಸ್ಕಾಂ ಮೆಚ್ಚುಗೆಗೆ ಪಾತ್ರವಾಗಿತ್ತು. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ನೀಡದ ದೂರುಗಳು ಇದ್ದವು.

ವಿದ್ಯುತ್ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಲೈನ್‌ಮೆನ್‌ಗಳ ಸಂಖ್ಯೆ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಿದೆ. ಇರುವ ಸಿಬ್ಬಂದಿಗಿAತ ಹೆಚ್ಚಿನ ಸಿಬ್ಬಂದಿಗಳ ಅವಶ್ಯಕತೆ ಜಿಲ್ಲೆಗಿದೆ. ೬೩೮ ಲೈನ್‌ಮೆನ್‌ಗಳ ಅವಶ್ಯಕತೆ ಇದ್ದು, ಈ ಪೈಕಿ ೨೪೯ ಲೈನ್‌ಮೆನ್‌ಗಳು ಮಾತ್ರ ಇದ್ದಾರೆ. ಇನ್ನೂ ೩೮೯ ಹುದ್ದೆಗಳು ಖಾಲಿಯಿವೆ. ಇದರಿಂದ ಕೆಲಸದ ಮೇಲೆ ಪ್ರತಿಕೂಲ ಪರಿಣಾಮ ಸೃಷ್ಟಿಯಾಗಿದ್ದು, ಕೆಲಸದ ವೇಗಕ್ಕೆ ಕೊಂಚ ‘ಬ್ರೇಕ್’ ಬಿದ್ದಂತಾಗಿದೆ.

ಈ ವರ್ಷದಲ್ಲಿ ೪೦ ಲೈನ್‌ಮೆನ್‌ಗಳು ವರ್ಗಾವಣೆ ಗೊಂಡಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಉನ್ನತಾ ಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಬೇರೆ ಜಿಲ್ಲೆಗಳಿಂದ ಮಳೆಗಾಲದ ಸಂದರ್ಭ ಕಾರ್ಯ ನಿರ್ವಹಣೆಗೆ ನಿಯೋಜಿಸುವಂತೆ ಕೋರಿದ್ದರು. ಈ ಬೇಡಿಕೆ ಅನ್ವಯ ೪೦ ಸಿಬ್ಬಂದಿ ತಾ. ೧೦ ರಂದು ಜಿಲ್ಲೆಗೆ ಆಗಮಿಸಿ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.

೭೫ ಗ್ಯಾಂಗ್‌ಮೆನ್‌ಗಳು

ಇಲಾಖೆ ಸಿಬ್ಬಂದಿಯೊAದಿಗೆ ತಾತ್ಕಾಲಿಕವಾಗಿ ಗ್ಯಾಂಗ್‌ಮೆನ್ ಗಳನ್ನು ಕರ್ತವ್ಯ ನಿರ್ವಹಣೆಗೆ ನೇಮಕಗೊಳಿಸಲಾಗಿದೆ. ೭೫ ಮಂದಿ ಗ್ಯಾಂಗ್‌ಮೆನ್‌ಗಳ ಪೈಕಿ ೭೦ ಮಂದಿ ನಿಯೋಜನೆ ಗೊಂಡಿದ್ದಾರೆ. ಆದರೆ, ಖಾಯಂ ನೌಕರರು ಮತ್ತಷ್ಟು ಸಂಖ್ಯೆಯಲ್ಲಿ ಬೇಕಿದೆ.

(ಮೊದಲ ಪುಟದಿಂದ) ಗ್ಯಾಂಗ್‌ಮೆನ್‌ಗಳು ಕೆಲಸ ಮುಗಿಸಿ ಬೇಗ ತೆರಳುತ್ತಾರೆ. ಸಂಜೆಯ ಮೇಲೆ ಹೆಚ್ಚಿನ ಸಂಖ್ಯೆಯ ದೂರುಗಳು ಬರುವ ಕಾರಣ ಖಾಯಂ ಲೈನ್‌ಮೆನ್‌ಗಳೆ ಸ್ಥಳಕ್ಕೆ ತೆರಳಬೇಕಾದ ಪರಿಸ್ಥಿತಿ ಇದೆ. ಇದರಿಂದ ಒತ್ತಡವೂ ಹೆಚ್ಚಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಹಾನಿಗೀಡಾದ ವಿದ್ಯುತ್ ಸಂಪರ್ಕವನ್ನು ಸುಮಾರು ೩-೪ ಗಂಟೆ ಕಾಲಾವಧಿಯಲ್ಲಿ ಸರಿಪಡಿಸುವ ಕೆಲಸ ಚೆಸ್ಕಾಂನಿAದ ಆಗುತ್ತಿದೆ ಎಂದು ಅಧಿಕಾರಿ ಅನಿತಾ ಬಾಯಿ ತಿಳಿಸಿದರು.

ಏನೆಲ್ಲ ಕ್ರಮಗಳು?

ಮಳೆಗಾಲ ಮುಂಜಾಗ್ರತಾ ಕ್ರಮವಾಗಿ ಜಂಗಲ್ ಕಟ್ಟಿಂಗ್ ಮೂಲಕ ವಿದ್ಯುತ್ ವಾಹಕಗಳ ಮೇಲೆ ಹಾದು ಹೋದ ಮರದ ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಲೈನ್‌ಗಳನ್ನು ಸಶಕ್ತೀಕರಣಗೊಳಿಸಿ ಅಧುನೀಕರಣ ಉಪಕರಣದ ಮೂಲಕ ರಕ್ಷಣಾತ್ಮಕ ಕವಚಗಳನ್ನು ಅಳವಡಿಸಲಾಗಿದೆ.

ಅಗತ್ಯ ಪರಿಕರಗಳನ್ನು ಸಮಸ್ಯೆ ಹೆಚ್ಚು ಸಂಭವಿಸುವ ಜಾಗದಲ್ಲಿ ಮುಂಚೆಯೇ ದಾಸ್ತಾನು ಮಾಡಲಾಗಿದೆ ಅಗತ್ಯವಾದಲ್ಲಿ ಅಲ್ಲಿಂದಲೇ ಪರಿಕರಗಳನ್ನು ರವಾನಿಸಿ ಶೀಘ್ರವಾಗಿ ಸಮಸ್ಯೆ ಸರಿಪಡಿಸಲು ಮುಂದಾಗಲಾಗುವುದು. ಸಿಬ್ಬಂದಿಯವರನ್ನು ಎಲ್ಲಾ ಕಡೆ ನಿಯೋಜಿಸಲಾಗಿದ್ದು, ಸಮನ್ವಯತೆ ಸಾಧಿಸಿಕೊಂಡು ಮುನ್ನಡೆಯಲಾಗುತ್ತದೆೆ. ವಾಹನಗಳ ಕೊರತೆಯಿದ್ದು, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ೧೪ ವಾಹನಗಳನ್ನು ಇಲಾಖೆ ಹೊಂದಿದ್ದು, ಇದರ ಮೂಲಕ ಟ್ರಾನ್ಸ್ಫಾರ್ಮರ್, ಕಂಬಗಳು, ವಿದ್ಯುತ್ ವಾಹಕ ಸೇರಿದಂತೆ ಪರಿಕರಗಳನ್ನು ಸಾಗಾಟ ಮಾಡಲಾಗುತ್ತಿದೆ. ಜೊತೆಗೆ ಸಿಬ್ಬಂದಿ ಓಡಾಟಕ್ಕೂ ಇದರಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ೫ ಲಾರಿಗೆ ಬೇಡಿಕೆ ನೀಡಿದ್ದು, ನೀತಿ ಸಂಹಿತೆ ಹಿನ್ನೆಲೆ ಟೆಂಡರ್ ತಡವಾಗಿದೆ. ಒಂದೆ ಬಾರಿ ೩-೪ ಕಡೆ ಹಾನಿ ಸಂಭವಿಸಿದರೆ ವಾಹನ ಕೊರತೆಯಿಂದ ತೆರಳಲು ಕಷ್ಟ ಸಾಧ್ಯವಾಗಿದ್ದು, ವಾಹನಗಳ ಖರೀದಿಗೆ ಸದ್ಯದಲ್ಲಿಯೇ ಕ್ರಮವಹಿಸಲಾಗುವುದು ಎಂದು ಅನಿತಾ ಬಾಯಿ ಮಾಹಿತಿ ನೀಡಿದ್ದಾರೆ.