*ಗೋಣಿಕೊಪ್ಪ, ಜೂ. ೧೦: ನಾಲ್ಕು ದಿನಗಳ ಕಾಲ ನಡೆಯಲಿರುವ ಕೊಡವ ಎಜುಕೇಷನ್ ಸೊಸೈಟಿ ಅಧೀನದ ಹಳ್ಳಿಗಟ್ಟು ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಬೆಳ್ಳಿ ಹಬ್ಬಕ್ಕೆ ಸಂಸ್ಥಾಪನಾ ದಿನಾಚರಣೆ ಮೂಲಕ ಚಾಲನೆ ನೀಡಲಾಯಿತು.

ಲೆಫ್ಟಿನೆಂಟ್ ಜನರಲ್ ಪಟ್ಟಚೆರುವಂಡ ಸಿ. ತಿಮ್ಮಯ್ಯ (ನಿವೃತ್ತ) ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ಯುವ ಪೀಳಿಗೆ ದೇಶ ಮುಖ್ಯ ಎಂಬ ಧ್ಯೇಯದೊಂದಿಗೆ ಮುಂದುವರಿಯ ಬೇಕಿದೆ. ಗುರಿ ಸಾಧಿಸುವ ಛಲದಿಂದ ನಮ್ಮ ಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಬೇಕು ಎಂದರು.

ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಮುಕ್ಕಾಟೀರ ಸಿ. ಕಾರ್ಯಪ್ಪ ಮಾತನಾಡಿ, ಸ್ಥಾಪಕರ ಚಿಂತನೆಗಳನ್ನು ಇಂದಿಗೂ ಉಳಿಸಿಕೊಳ್ಳುವ ಕಾರ್ಯ ನಡೆದಿದೆ. ಶಿಕ್ಷಣ ವಂಚಿತರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ತಾಂತ್ರಿಕ ಶಿಕ್ಷಣ ದೊರೆಯಬೇಕು ಎಂದು ನಮ್ಮ ಸಂಸ್ಥಾಪಕರು ಬಯಸಿದ್ದರು. ಇದನ್ನು ನಾವು ಪಾಲಿಸುತ್ತಿದ್ದೇವೆ. ದೇಶ ದಲ್ಲಿಯೇ ಹೆಚ್ಚು ಮೂಲಸೌಕರ್ಯ ಹೊಂದಿರುವ ಕಾಲೇಜು ಎಂಬ ಕೀರ್ತಿ ಸಿಐಟಿ ಕಾಲೇಜಿಗೆ ಇದೆ. ಹಿರಿಯ ಶ್ರಮ, ಪ್ರೋತ್ಸಾಹವನ್ನು ಎಲ್ಲರೂ ಗೌರವಿಸಬೇಕಿದೆ ಎಂದರು. ಮಾಜಿ ಅಧ್ಯಕ್ಷ ಚೆಪ್ಪುಡೀರ ಬೆಳ್ಯಪ್ಪ ಮಾತನಾಡಿ, ಸಂಸ್ಥಾಪಕರ ದಿನಾಚರಣೆ ನಮಗೆ ಖುಷಿ ತಂದಿದೆ. ಅವರ ನೆನಪು ಸದಾ ಉಳಿಯಬೇಕು ಎಂದರು.

ಸಂಸ್ಥೆ ಜಂಟಿ ಕಾರ್ಯದರ್ಶಿ ಚಿರಿಯಪಂಡ ರಾಜಾ ನಂಜಪ್ಪ ಕೊಡಗು ಜಿಲ್ಲೆಯಲ್ಲಿ ತಾಂತ್ರಿಕ ಕಾಲೇಜು ಸ್ಥಾಪನೆಗೆ ಹಿರಿಯರ ಶ್ರಮ ನೆನಪಿಸಿಕೊಳ್ಳಬೇಕಿದೆ. ಆರಂಭದ ಹಂತದಲ್ಲೂ ಎಲ್ಲ ಮಹನೀಯ ರೊಂದಿಗೆ ಬೆರೆತ ಅನುಭವ ನೆನಪಿಸಿಕೊಂಡರು. ಸ್ಥಾಪನೆಗೆ ಆರ್ಥಿಕ ಸಹಕಾರ ನೀಡಿದ ದಾನಿಗಳು ನಮ್ಮ ವಿಶೇಷ ಶಕ್ತಿ. ಕಾಲೇಜು ನಿರ್ಮಾಣಕ್ಕೆ ಜಾಗ ನೀಡುವ ಮೂಲಕ ಪ್ರೋತ್ಸಾಹ ನೀಡಿದವರು ಸಮಾಜಕ್ಕೆ ಮಾದರಿ ಯಾಗಿದ್ದಾರೆ. ಕಷ್ಟ ಕಾಲದಲ್ಲಿ ಪುಟಿ ದೇಳಲು ಶಿಕ್ಷಣ ಪ್ರೇಮಿಗಳ ಬೆಂಬಲ ಮುಖ್ಯವಾಗಿತ್ತು. ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷರಾಗಿದ್ದ ಮುಕ್ಕಾಟೀರ ಎಂ. ಚೆಂಗಪ್ಪ,

(ಮೊದಲ ಪುಟದಿಂದ) ಕರೆಸ್ಪಾಡೆಂಟ್ ಆಗಿದ್ದ ಚಿರಿಯಪಂಡ ಕೆ. ಪೂವಪ್ಪ ಅವರನ್ನು ನೆನಪಿಸಿಕೊಳ್ಳಬೇಕಿದೆ. ಮೊದಲ ಪ್ರಾಂಶುಪಾಲ ಚೆಲುವೇಗೌಡರ ಶ್ರಮ, ಸಚಿವ ಎಂ. ಸಿ. ನಾಣಯ್ಯ ಅವರ ಬೆಂಬಲವನ್ನು ತಿಳಿಸಿಕೊಟ್ಟರು.

ಸಂಸ್ಥೆ ಸ್ಥಾಪಕರಾದ ದಿವಂಗತ ಡಾ. ಮುಕ್ಕಾಟೀರ ಎಂ. ಚೆಂಗಪ್ಪ, ಚಿರಿಯಪಂಡ ಕೆ. ಪೂವಪ್ಪ ಭಾವಚಿತ್ರಕ್ಕೆ ದೀಪವಿಟ್ಟು, ಪುಷ್ಪಾರ್ಚನೆಯೊಂದಿಗೆ ಗೌರವಾರ್ಪಣೆ ಮಾಡಲಾಯಿತು. ಸಂಸ್ಥೆ ಸ್ಥಾಪನೆ ಸಂದರ್ಭ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಹುದ್ದೆ ಸೇರಿದಂತೆ ಸಂಸ್ಥಾಪನೆಗೆ ಸಹಕರಿಸಿದವರಿಗೆ ಗೌರವ ನೀಡಲಾಯಿತು. ಸೇವೆ ನೀಡಿ ನಿಧನರಾಗಿರುವ ಪ್ರಮುಖರ ಕುಟುಂಬಸ್ಥರು ಗೌರವ ಸ್ವೀಕರಿಸಿದರು.

ಡಾ. ಮುಕ್ಕಾಟೀರ ಎಂ.ಚೆAಗಪ್ಪ, ಚಿರಿಯಪಂಡ ಕೆ. ಪೂವಪ್ಪ, ಕೆ.ಎಸ್. ತಿಮ್ಮಯ್ಯ ಪರವಾಗಿ ಕುಟುಂಬಸ್ಥರು ಗೌರವ ಸ್ವೀಕರಿಸಿದರು. ಸಿ. ಪಿ. ಬೆಳ್ಯಪ್ಪ, ಎಂ.ಎA. ತಿಮ್ಮಯ್ಯ, ಚೋಡುಮಾಡ ಅಪ್ಪಯ್ಯ, ಕೆ.ಎನ್. ಉತ್ತಪ್ಪ, ಮೋಹನ್ ಮಾದಪ್ಪ, ಚೆಲುವರಾಯ ಸ್ವಾಮಿ, ಬಿ.ಎಂ. ಅಪ್ಪಚ್ಚು, ಚಿರಿಯಪಂಡ ರಾಜಾ ನಂಜಪ್ಪ, ಕೆ.ಪಿ. ಸುಬ್ರಮಣಿ, ಕುಪ್ಪಂಡ ಎ.ಚಿಣ್ಣಪ್ಪ, ಎಂ.ಸಿ. ನಾಣಯ್ಯ, ಕೆ.ಬಿ. ಗಣಪತಿ, ಎ.ಎಸ್. ಸನ್ನಿ, ಕೆ.ಪಿ. ಉತ್ತಪ್ಪ, ಬಲ್ಲಡಿಚಂಡ ಬಿ. ನಾಣಯ್ಯ, ಬಿ.ಎ. ನಾಣಯ್ಯ, ಎಂ.ಸಿ. ಮೊಣ್ಣಪ್ಪ, ಕ್ಯಾ. ಬಿ.ಎಂ. ಮುದ್ದಯ್ಯ, ಎ. ನಾಚಪ್ಪ, ಎ.ಬಿ. ಭೀಮಯ್ಯ, ಐ.ಜಿ. ನಾಣಯ್ಯ, ಕೆ.ಎಂ. ಮುತ್ತಣ್ಣ, ಎಂ. ಎನ್. ಕಾರ್ಯಪ್ಪ, ಪಿ.ಕೆ. ಭೀಮಯ್ಯ, ಕೆ.ಕೆ. ವೀರಪ್ಪ, ರಘು ಮಾದಪ್ಪ, ನಿವೃತ್ತ ಪ್ರಾಂಶುಪಾಲರಾದ ಡಾ. ಮಧುವೀರಪ್ಪ, ಡಾ. ಕೆ. ಎಸ್. ಶ್ರೀನಿವಾಸ್, ಡಾ. ಚನ್ನಮಲ್ಲದೇವರು, ಡಾ. ಪಿ. ಮಹಾಬಲೇಶ್ವರಪ್ಪ, ಡಾ. ಪಿ.ಸಿ. ಕವಿತ, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಡಾ. ಸಣ್ಣುವಂಡ ರೋಹಿಣಿ ತಿಮ್ಮಯ್ಯ ಸನ್ಮಾನ ಸ್ವೀಕರಿಸಿದರು. ಪ್ರೊ. ಪಿ.ಜೆ. ಅನುರಾಧ, ಎ.ಎಂ. ಅಜಿತ್, ಬಿ.ಜೆ. ಸರಸ್ವತಿ, ಬಿ.ಬಿ. ನಿತಿನ್, ಎಂ. ಕುಮಾರ್, ಎಚ್.ಜೆ. ಮೀರಾ, ಜಯಕುಮಾರ್, ಎಚ್. ಟಿ. ರವಿ, ಎಚ್. ಆರ್. ಮಂಜುಳ, ವೈ. ಕಾಂತರಾಜು ಗೌರವ ಸ್ವೀಕರಿಸಿದರು.