ಕಣಿವೆ, ಜೂ. ೧೦: ಬಾಕಿ ಉಳಿಸಿಕೊಂಡಿದ್ದ ವಿದ್ಯುತ್ ಬಿಲ್ ಪಾವತಿಸದ ಕಾರಣ ಕಛೇರಿಗೆ ಅಳವಡಿಸಿದ್ದ ವಿದ್ಯುತ್ ಸಂಪರ್ಕವನ್ನು ಚೆಸ್ಕಾಂ ಅಧಿಕಾರಿಗಳು ಕಡಿತಗೊಳಿಸಿದ್ದಾರೆ.

ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ಕುಶಾಲನಗರ ಚೆಸ್ಕಾಂಗೆ ರೂ. ೭.೩೮ ಲಕ್ಷ ವಿದ್ಯುತ್ ಬಿಲ್ ಪಾವತಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಚೆಸ್ಕಾಂ ಹಲವಾರು ಬಾರಿ ನೋಟೀಸ್ ನೀಡಿ ಬಿಲ್ ಕಟ್ಟುವಂತೆ ಕೋರಿದರೂ ಕೂಡ ಪಂಚಾಯಿತಿ ಅಧಿಕಾರಿಗಳು ಬಿಲ್ ಪಾವತಿಸದ ಕಾರಣ ಕಳೆದ ೨೦ ದಿನಗಳ ಹಿಂದೆ ಕಛೇರಿಯ ವಿದ್ಯುತ್ ಮೀಟರ್ ಬಳಿ ವಿದ್ಯುತ್ ವಯರ್‌ಗಳನ್ನು ತೆಗೆದು ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು.

ಆದರೆ ಪಂಚಾಯಿತಿ ಸಿಬ್ಬಂದಿಗಳು ಅದೇ ವಯರ್‌ಗಳನ್ನು ಹಾಗೆಯೇ ಅಳವಡಿಸಿಕೊಂಡು ಬೇನಾಮಿಯಾಗಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದ ಮಾಹಿತಿ ಮನಗಂಡ ಚೆಸ್ಕಾಂ ಸಿಬ್ಬಂದಿಗಳು ವಯರ್ ತುಂಡರಿಸಿದ್ದಾರೆ.

ಇದರಿAದ ಪಂಚಾಯಿತಿ ಕತ್ತಲೆಯಲ್ಲಿ ಸಿಲುಕಿದೆ. ಪಂಚಾಯಿತಿಯಲ್ಲಿ ಕಂಪ್ಯೂಟರ್, ಸಿಸಿ ಕ್ಯಾಮೆರಾ, ದೀಪಗಳು ಸೇರಿದಂತೆ ಎಲ್ಲಾ ಸಂಪರ್ಕ ಸ್ಥಗಿತಗೊಂಡಿವೆ.

ಇದರಿAದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಧಕ್ಕೆಯಾಗಿದೆ ಎಂದು ಪಂಚಾಯಿತಿ ಸದಸ್ಯರನೇಕರು ದೂರಿದ್ದಾರೆ.

ಪಂಚಾಯಿತಿಯಲ್ಲಿ ಪಿಡಿಓ ಇಲ್ಲ

ಕುಶಾಲನಗರ ತಾಲೂಕಿನ ವ್ಯಾಪ್ತಿಯಲ್ಲಿ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಈ ಪಂಚಾಯಿತಿ ಗ್ರೇಡ್ ಒನ್ ಪಂಚಾಯಿತಿಯಾಗಿದ್ದು, ಕಳೆದ ಅನೇಕ ತಿಂಗಳಿನಿAದ ಖಾಯಂ ಪಿಡಿಓ ನೇಮಿಸದ ಕಾರಣ ಪಂಚಾಯಿತಿಯಲ್ಲಿ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ. ಜೊತೆಗೆ ಸರ್ಕಾರದಿಂದ ಪಂಚಾಯಿತಿಗೆ ಯಾವುದೇ ಅನುದಾನಗಳು ಕೂಡ ಬರುತ್ತಿಲ್ಲ.

ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಸ್ತಾವಿತ ಹೋಬಳಿ ಕೇಂದ್ರವೂ ಆಗಿರುವ ಈ ಹೆಬ್ಬಾಲೆ ಗ್ರಾಮದಲ್ಲಿ ಸ್ವಚ್ಛತಾ ಕೆಲಸಗಳು ಕೂಡ ಮರೀಚಿಕೆಯಾಗಿದೆ. ಆಡಳಿತ ಮಂಡಳಿ ಇದ್ದೂ ಕೂಡ ಇಲ್ಲದಂತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕೂಡಲೇ ಪಂಚಾಯಿತಿಗೆ ಖಾಯಂ ಪಿಡಿಓ ನೇಮಿಸಬೇಕು. ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸಲು ಸರ್ಕಾರದಿಂದ ಸೂಕ್ತ ಅನುದಾನ ಒದಗಿಸಬೇಕೆಂದು ಗ್ರಾಮದ ಹಿರಿಯರಾದ ಬಸವರಾಜಪ್ಪ, ನಟರಾಜು, ಸಿದ್ದಪ್ಪ, ರಮೇಶ್, ಮಂಜುನಾಥ್ ಮೊದಲಾದವರು ಒತ್ತಾಯಿಸಿದ್ದಾರೆ.