ಮಡಿಕೇರಿ, ಜೂ. ೧೦: ಕೊಡಗು ಜಿಲ್ಲೆ ಪ್ರಾಕೃತಿಕ ಸಂಪತ್ತಿನೊAದಿಗೆ ಪರಿಸರದ ವೈಭವವನ್ನು ಹೊಂದಿದೆ. ಜೊತೆಗೆ ವಿಶೇಷ ಪರಾಂಪರಾಗತ ಜಿಲ್ಲೆಯೂ ಆಗಿರುವುದು ಮತ್ತೊಂದು ವೈಶಿಷ್ಟö್ಯ. ಇಂತಹ ಜಿಲ್ಲೆಯನ್ನು ಈ ಎಲ್ಲಾ ಹಿನ್ನೆಲೆಗೆ ಪೂರಕವಾದ ಅಂಶಗಳೊAದಿಗೆ ಅಭಿವೃದ್ಧಿ ಗೊಳಿಸುವ ಚಿಂತನೆ - ಯೋಜನೆ ನನ್ನದಾಗಿದೆ ಎಂದು ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನೂತನ ಸಂಸದರಾಗಿ ಬಿಜೆಪಿಯಿಂದ ಆಯ್ಕೆಗೊಂಡ ಯದುವೀರ್ ಒಡೆಯರ್ ಮನದಾಳದ ಇಂಗಿತವನ್ನು ಅಭಿವ್ಯಕ್ತಗೊಳಿಸಿದರು.

‘ಶಕ್ತಿ’ ನಡೆಸಿದ ಸಂದರ್ಶನದಲ್ಲಿ ಅವರು ತಮ್ಮನ್ನು ಗೆಲ್ಲಿಸಿದ ಮತದಾರರ ಆಕಾಂಕ್ಷೆ, ಬಯಕೆಗಳಿಗೆ ಸ್ಪಂದಿಸುವುದಕ್ಕಾಗಿ ಶ್ರಮವಹಿಸುತ್ತೇನೆ ಎನ್ನುವ ಖಚಿತ ನುಡಿಯಾಡಿದರು.

ಶಕ್ತಿ:- ಇದುವರೆಗೆ ಅರಮನೆಯ ಪರಿಸರದಲ್ಲಿದ್ದ ನಿಮಗೆ ದಿಢೀರಾಗಿ ರಾಜ ಕಾರಣಕ್ಕೆ ಪ್ರವೇಶಿಸಿದ ಬದಲಾದ ಪರಿಸರದಲ್ಲಿ ಹೊಂದಾಣಿಯಾಗು ತ್ತದೆಯೇ?

ಯದುವೀರ್:- ಅಲ್ಲಿಯೂ ಜನತೆಯ ಸಂಪರ್ಕ ಇರಿಸಿ ಕೊಂಡಿದ್ದೆ. ಇದೀಗ ಸಂಸದನಾಗಿ ಆಯ್ಕೆ ಗೊಂಡ ಬಳಿಕ ನನ್ನ ಕ್ಷೇತ್ರದಲ್ಲಿ ವಿಸ್ತೃತವಾಗಿ ಜನತೆಯ ಸೇವೆ ಮಾಡುವಂತಹ ಸದವಕಾಶ ಲಭ್ಯ ವಾಗಿದೆ. ರಾಜಕೀಯ ಕ್ಷೇತ್ರವು ಇದಕ್ಕೆ ಸಂಪರ್ಕ ಸೇತುವಾಗಿದೆ.

ಶಕ್ತಿ:- ಮೈಸೂರು - ಕೊಡಗು ಕ್ಷೇತ್ರದಲ್ಲಿ ಆದ್ಯತೆ ಮೇರೆಗೆ ಯಾವ ರೀತಿ ಅಭಿವೃದ್ಧಿ ಕಾರ್ಯ ಮಾಡುವ ಬಗ್ಗೆ ಚಿಂತಿಸಿದ್ದೀರಿ?

ಯದುವೀರ್ :- ಆರಂಭಿಕವಾಗಿ ಈ ಹಿಂದೆ ಈ ಕ್ಷೇತ್ರದಲ್ಲಿ ನಡೆಸಿರುವ ಯೋಜನೆಗಳು ಬಾಕಿಯಾಗಿದ್ದರೆ ಅವುಗಳನ್ನು ಮುಂದುವರಿಸಿ ಪೂರ್ಣಗೊಳಿಸುವತ್ತ ಆದ್ಯತೆ ನೀಡುತ್ತೇನೆ. ಅದಕ್ಕಾಗಿ ಆ ಯೋಜನೆಗಳ ಬಗ್ಗೆ ಮಾಹಿತಿ ಪಡೆಯುತ್ತಿ ದ್ದೇನೆ. ಕೊಡಗು - ಮೈಸೂರು ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಗಮನ ಹರಿಸುವಾಗ ಮುಖ್ಯ ವಾಗಿ ಈ ನಾಡಿನ ಪರಂಪರೆ, ಸ್ವಚ್ಛತೆ, ಪರಿಸರ, ಪ್ರಕೃತಿಯ ರಕ್ಷಣೆಯೊಂದಿಗೆ ಕೆಲಸ ಮಾಡುವ ಕಾಳಜಿ ಹೊಂದಿದ್ದೇನೆ.

ಶಕ್ತಿ:- ಕೊಡಗು ಜಿಲ್ಲೆಯಲ್ಲಿಯೇ ಪ್ರತ್ಯೇಕ ರೀತಿಯಲ್ಲಿ ಅಭಿವೃದ್ಧಿ ಗೊಳಿಸುವ ಬಗ್ಗೆ ಯೋಚಿಸಿದ್ದೀರಾ?

ಯದುವೀರ್ :- ಕೊಡಗು - ಕೊಡಗಾಗಿಯೇ ಉಳಿಯಬೇಕು. ಮೈಸೂರು - ಮೈಸೂರಾಗಿಯೇ ಉಳಿಯಬೇಕು. ಕೊಡಗಿನ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕೆಲಸ ಮಾಡುವ ದೃಷ್ಟಿಕೋನ ಹೊಂದಿದ್ದೇನೆ. ಜನರ ಆಕಾಂಕ್ಷೆಗಳನ್ನು ಸಂಸತ್‌ನಲ್ಲಿ ಮಂಡಿಸುವ ಮೂಲಕವೂ ಆ ಕೆಲಸಗಳು ಈಡೇರುವಂತೆ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿದ್ದೇನೆ.

ಶಕ್ತಿ:- ಮೈಸೂರು ವಿಭಾಗದಲ್ಲಿ ನಿಮಗೆ ಮತದಾರರಿದ್ದರೂ ಕೊಡಗಿನ ಎರಡು ಕ್ಷೇತ್ರಗಳಲ್ಲಿಯೂ ನಿಮಗೆ ಹೆಚ್ಚಿನ ಮತ ಲಭ್ಯವಾಗಿದೆ. ಹೀಗಿರುವಾಗ ಇಲ್ಲಿನ ಜನತೆಯನ್ನು ಭೇಟಿ ಮಾಡುವ ವ್ಯವಸ್ಥೆಯನ್ನು ಹೇಗೆ ಕೈಗೊಳ್ಳುತ್ತೀರಿ?

ಯದುವೀರ್:- ಸರ್ಕಾರದಿಂದ ನನಗೆ ಕೊಡಗಿನಲ್ಲಿ ಪ್ರತ್ಯೇಕ ಕಚೇರಿ ನೀಡುತ್ತಾರೆ. ತಿಂಗಳಿಗೆ ಕೆಲವೊಂದು ದಿನ ಕೊಡಗಿಗೆ ಮೀಸಲಿಟ್ಟು ಬರುತ್ತೇನೆ. ಆಗ ಜನತೆಯ ಸಮಸ್ಯೆಗಳನ್ನು ಅರಿತುಕೊಂಡು ಸ್ಪಂದಿಸಲು ಸುಲಭ ಸಾಧ್ಯವಾಗುತ್ತದೆ.

ಶಕ್ತಿ :- ಕೊಡಗಿನ ಎರಡು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ನ ಶಾಸಕರಿರುವಾಗ ಬಿಜೆಪಿಯಿಂದ ಆಯ್ಕೆಗೊಂಡಿರುವ ನಿಮಗೆ ಅಭಿವೃದ್ಧಿ ಕೆಲಸಗಳಲ್ಲಿ ಹೊಂದಾಣಿಕೆ ಸಾಧ್ಯವೆ?

ಯದುವೀರ್ :- ನನ್ನನ್ನು ಕೊಡಗಿನ ಜನತೆ ಬಿಜೆಪಿಯಿಂದ ಆರಿಸಿದ್ದಾರೆ. ಇಬ್ಬರು ಶಾಸಕರನ್ನು ರಾಜ್ಯಕ್ಕೆ ಕೊಡಗಿನ ಜನತೆ ಈ ಹಿಂದೆ ಕಾಂಗ್ರೆಸ್‌ನಿAದ ಆರಿಸಿದ್ದಾರೆ. ಹೀಗಿರುವಾಗ ಅಭಿವೃದ್ಧಿ ಕಾರ್ಯ ದಲ್ಲಿ ರಾಜಕಾರಣಕ್ಕೆ ಅವಕಾಶವಿಲ್ಲ. ಪರಸ್ಪರ ಹೊಂದಾಣಿಕೆಯೊAದಿಗೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿ ಕೊಳ್ಳುತ್ತೇನೆ.

ಶಕ್ತಿ :- ಇದೀಗ ಸಾಮಾಜಿಕ ಜಾಲತಾಣಗಳು ಶೀಘ್ರ ಸಂಪರ್ಕಕ್ಕೆ ಎಡೆಮಾಡಿಕೊಡುತ್ತಿವೆ. ಜನರಿಗೆ ಆ ಮೂಲಕ ನಿಮ್ಮನ್ನು ಸಂಪರ್ಕಿಸಲು ಡಿಜಿಟಲೀಕರಣದಲ್ಲಿ ಅವಕಾಶ ವಿದೆಯೇ?

ಯದುವೀರ್ :- ಜನರಿಗೆ ಶೀಘ್ರವಾಗಿ ಸಂಪರ್ಕಿಸಲು ಇ-ಮೇಲ್ ವಾಟ್ಸಾö್ಯಪ್‌ಗಳ ಮೂಲಕ ಅವಕಾಶ ಕಲ್ಪಿಸಲು ಬಯಸಿದ್ದೇನೆ.

ಶಕ್ತಿ:- ಮಾಧ್ಯಮಗಳಲ್ಲಿ ಕ್ಷೇತ್ರದ ಕುರಿತು ಜನತೆ ನೀಡುವ ಅಭಿಪ್ರಾಯಗಳನ್ನು ಗಮನಿಸುತ್ತೀರಾ?

(ಮೊದಲ ಪುಟದಿಂದ)

ಯದುವೀರ್ :- ಖಂಡಿತವಾಗಿ ಗಮನಿಸುತ್ತೇನೆ. ಈಗಾಗಲೇ ಕೆಲವರು ಮಾಧ್ಯಮಗಳ ಮೂಲಕ ಸಲಹೆ ಅಭಿಪ್ರಾಯಗಳನ್ನು ಬರೆದಿದ್ದಾರೆ. ಈ ರೀತಿಯ ಸಲಹೆಗಳನ್ನು ಮುಂದೆಯೂ ನಾನು ಮಾಧ್ಯಮಗಳಲ್ಲಿ ಖಂಡಿತ ಗಮನಿಸುತ್ತೇನೆ. ನನಗೂ ಕೂಡ ಈ ರೀತಿಯ

ಸಲಹೆಗಳಿಂದ ಜನರ ನೈಜ ಆಕಾಂಕ್ಷೆಗಳನ್ನು ಈಡೇರಿಸಲು ಅನುಕೂಲವಾಗುತ್ತದೆ.

ಶಕ್ತಿ:- ಕೊಡಗು ಮುಖ್ಯವಾಗಿ ಕಾಫಿ ಮತ್ತು ಕೃಷಿಯನ್ನು ಅವಲಂಬಿಸಿದೆ. ಜೊತೆಗೆ ಪ್ರವಾಸೋದ್ಯಮವು ಬೆಳವಣಿಗೆಯಲ್ಲಿದೆ. ಈ ಕ್ಷೇತ್ರಗಳ ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿ ಸಾಧಿಸುವಲ್ಲಿ ನಿಮ್ಮ ನಿಲುವು ಹೇಗಿದೆ?

ಯದುವೀರ್ :- ಕೃಷಿ ಮತ್ತು ಪ್ರವಾಸೋದ್ಯಮ ಎರಡರಲ್ಲಿಯೂ ಮೈಸೂರು ಹಾಗೂ ಕೊಡಗು ಜಿಲ್ಲೆ ಸಮಾನ ಚಟುವಟಿಕೆಯನ್ನು ಹೊಂದಿದೆ. ಎರಡು ಜಿಲ್ಲೆಯಲ್ಲಿಯೂ ಈ ಬಗ್ಗೆ ಹೊಂದಾಣಿಕೆಯಿದೆ. ಈ ಕ್ಷೇತ್ರಗಳ ಅಭಿವೃದ್ಧಿ ಅಗತ್ಯವಾಗಿದೆ. ಆದರೆ ಇದರೊಂದಿಗೆ ಪರಂಪರೆ, ಪ್ರಕೃತಿ ಪರಿಸರವನ್ನು ಉಳಿಸಿಕೊಳ್ಳುವುದರೊಂದಿಗೆ ಪ್ರಗತಿ ಸಾಧಿಸುವ ಆಸಕ್ತಿಯಿದೆ.

ಶಕ್ತಿ :- ಅಭಿವೃದ್ಧಿ ಸಂದರ್ಭ ನಿಮ್ಮ ಮುಖ್ಯ ನಿಲುವೇನು?

ಯದುವೀರ್ :- ಪ್ರಧಾನಿ ನರೇಂದ್ರ ಮೋದಿಯವರು ದೇಶದ ರೈತರ ಆದಾಯ ಹೆಚ್ಚಿಸುವ ಬಗ್ಗೆ ಹಿಂದೆಯೂ ಕೆಲವು ಯೋಜನೆಗಳನ್ನು ಕೈಗೊಂಡಿದ್ದು, ಈಗಲೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಕಾಳಜಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಕೃಷಿಕರಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ ನಾನು ಆಸ್ಥೆ ವಹಿಸುತ್ತೇನೆ. ಅವರ ಜೀವನಮಟ್ಟವನ್ನು ವೃದ್ಧಿಗೊಳಿಸುವತ್ತ ಶ್ರಮವಹಿಸುತ್ತೇನೆ.

ಶಕ್ತಿ :- ನಿಮ್ಮ ಗೆಲುವಿಗೆ ಪಕ್ಷದ ಬೆಂಬಲದೊAದಿಗೆ ರಾಜಮನೆತನದ ಬೆಸುಗೆಯೂ ಕಾರಣವಾಗಿದೆಯೇ?

ಯದುವೀರ್ :- ನನ್ನ ಗೆಲುವಿಗೆ ಮುಖ್ಯವಾಗಿ ಮೂರು ಅಂಶಗಳಿವೆ. ಪ್ರಥಮವಾಗಿ ಹೇಳುವುದಿದ್ದರೆ ಪ್ರಧಾನಿ ಮೋದಿಯವರ ಹತ್ತು ವರ್ಷಗಳ ಉತ್ತಮ ಆಡಳಿತ ಜನಪರವಾದ ಕೆಲಸವನ್ನು ಗಮನಿಸಿ ಜನತೆ ಸ್ಪಂದಿಸಿದ್ದಾರೆ. ಜನ ಜೀವನಮಟ್ಟ ಸುಧಾರಣೆಗೊಳ್ಳುತ್ತಿರುವುದು ಇದಕ್ಕೆ ಕಾರಣವಾಗಿದೆ. ಎರಡನೆಯದಾಗಿ ನಾಡಿಗೆ ಈ ಹಿಂದೆ ಮೈಸೂರು ಅರಸರ ಕೊಡುಗೆಯೂ ಅಪಾರವಾಗಿದೆ. ಹಿಂದಿನ ಕಾಲದಲ್ಲಿ ಅರಸರ ಉತ್ತಮ ಆಡಳಿತ ನಾಯಕತ್ವ, ತತ್ವಗಳು ನಾಡಿಗೆ ಒಳಿತು ಮಾಡಿರುವ ಅಂಶಗಳನ್ನು ಕೂಡ ಜನತೆ ಗಮನಿಸಿದ್ದಾರೆ; ಪೂರಕವಾಗಿ ಸ್ಪಂದಿಸಿದ್ದಾರೆ. ಮೂರನೆಯದಾಗಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಯೂ ಗೆಲುವಿಗೆ ಒತ್ತು ನೀಡಿದೆ. ನಮ್ಮ ಕಾರ್ಯಕರ್ತರಲ್ಲದೆ ಜೆಡಿಎಸ್‌ನ ಕಾರ್ಯಕರ್ತರೂ ಕೂಡ ವಿಶೇಷ ಆಸಕ್ತಿಯಿಂದ ಕಾರ್ಯನಿರ್ವಹಿಸಿದ್ದಾರೆ.

ಶಕ್ತಿ :- ಮುಖ್ಯವಾಗಿ ಕೊಡಗಿನ ಜನತೆಗೆ ನಿಮ್ಮ ಸಂದೇಶವೇನು?

ಯದುವೀರ್ :- ಭಾರತ ದೇಶಕ್ಕೆ ಕೊಡಗು ಜಿಲ್ಲೆ ನೀಡಿದ ಕೊಡುಗೆ ಅತ್ಯಮೂಲ್ಯವಾದದು. ದೇಶದ ರಕ್ಷಣೆಗೆ ಸೇನಾ ವಿಭಾಗಕ್ಕೆ ಜಿಲ್ಲೆಯ ಯೋಧರ ತ್ಯಾಗ ಅವಿಸ್ಮರಣೀಯ. ಪ್ರತೀ ಭಾರತೀಯನು ಇದಕ್ಕೆ ಹೆಮ್ಮೆಪಡಬೇಕಾಗಿದೆ. ಇಂತಹ ಜನರ ಪ್ರತಿನಿಧಿಯಾಗಿ ಅವರೊಂದಿಗೆ ಸಂಪರ್ಕ ಹೊಂದುವAತಹ ಅವಕಾಶ ಲಭಿಸಿದುದಕ್ಕಾಗಿ ನಾನು ಹೆಮ್ಮೆ ಪಡುತ್ತೇನೆ. ಈ ಜನತೆಯ ಆಕಾಂಕ್ಷೆಗಳನ್ನು ದೇಶದ ಮುಖ್ಯ ಆಡಳಿತ ಕೇಂದ್ರವಾದ ಸಂಸತ್‌ನಲ್ಲಿ ಮಂಡಿಸುವAತಹ ಅವಕಾಶ ಲಭ್ಯವಾಗಿರುವುದು ನನ್ನ ಜೀವನದಲ್ಲಿ ನನಗೆ ದೊರೆತ ಗೌರವ ಹಾಗೂ ಮಾನ್ಯತೆ ಎಂದು ಭಾವಿಸಿದ್ದೇನೆ. ಇದಕ್ಕಾಗಿ ಜನತೆಗೆ ನಾನು ಚಿರಋಣಿಯಾಗಿದ್ದೇನೆ. ಅಭಿವೃದ್ಧಿ ಮಾಡುವ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.

- ಸಂದರ್ಶನ : ‘ಚಕ್ರವರ್ತಿ’