ಮಡಿಕೇರಿ, ಜೂ. ೬: ಲೋಕಸಭಾ ಚುನಾವಣೆಯ ಕೌತುಕದ ಫಲಿತಾಂಶ ಮಂಗಳವಾರ ಹೊರಬೀಳುವ ಮೂಲಕ ಜನತಾ ತೀರ್ಪು ಘೋಷಣೆಯಾಗಿದೆ. ಯದುವಂಶದ ಕುಡಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆಲ್ಲುವ ಮೂಲಕ ನೂತನ ಸಂಸದರಾಗಿ ಚುನಾಯಿತಗೊಂಡು ಬಿಜೆಪಿಯ ಹ್ಯಾಟ್ರಿಕ್ ಸಾಧನೆ ಕನಸನ್ನು ನನಸು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಕ್ಷೇತ್ರವಾಗಿದ್ದ ಮೈಸೂರು-ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ ಪರಾಭವಗೊಂಡಿರುವುದು ಕೈ ಪಾಳಯದಲ್ಲಿ ನಿರಾಸೆಗೆ ಕಾರಣವಾಗಿದೆ.

ವಿಧಾನಸಭೆ ಚುನಾವಣೆೆಯಲ್ಲಿ ಕೊಡಗಿನಲ್ಲಿ ಸೋತಿದ್ದ ಬಿಜೆಪಿಗೆ ಲೋಕಕಣದಲ್ಲಿ ಪಡೆದ ರೋಚಕ ಗೆಲುವು ಸಿಹಿ ನೀಡಿದರೆ, ಗೆದ್ದು ಬೀಗಿದ್ದ ಕಾಂಗ್ರೆಸ್ ಕಹಿ ಅನುಭವ ಪಡೆದು ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ವಿಫಲಗೊಂಡಿದೆ. ಈ ಬಗ್ಗೆ ಪರಾಜಿತ ಅಭ್ಯರ್ಥಿ ಲಕ್ಷö್ಮಣ್, ಕೊಡಗಿನ ಹಾಲಿ-ಮಾಜಿ ಶಾಸಕರು, ವಿಧಾನ ಪರಿಷತ್ತು ಸದಸ್ಯರುಗಳು ತಮ್ಮ ಅನಿಸಿಕೆ, ಅಭಿಪ್ರಾಯ ಗಳನ್ನು ‘ಶಕ್ತಿ’ಯೊಂದಿಗೆ ಹಂಚಿಕೊAಡಿದ್ದಾರೆ.

ಕಚೇರಿ ಪ್ರಾರಂಭಿಸಿ ಜನಸೇವೆ - ಎಂ. ಲಕ್ಷö್ಮಣ್

ಪಕ್ಷದ ಎಲ್ಲಾ ನಾಯಕರು, ಶಾಸಕರುಗಳು, ಕಾರ್ಯ ಕರ್ತರುಗಳು ತಮ್ಮ ಗೆಲುವಿಗೆ ಅವಿರತ ಪ್ರಯತ್ನ ಶ್ರಮವಹಿಸಿ ದುಡಿದಿದ್ದಾರೆ. ಆದರೂ ಮತದಾರರು ಕೈಹಿಡಿಯಲಿಲ್ಲ. ಏನೇ ಇದ್ದರೂ ಜನರ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಜಿತರಾಗಿರುವ ಎಂ. ಲಕ್ಷö್ಮಣ್ ಅವರು ಹೇಳಿದ್ದಾರೆ.

ತಮ್ಮ ಮೇಲೆ ನಂಬಿಕೆಯಿಟ್ಟು ೬.೫೦ ಲಕ್ಷಕ್ಕೂ ಅಧಿಕ ಮತದಾರರು ಮತ ನೀಡಿದ್ದಾರೆ. ಸೋತಿದ್ದರೂ ಇವರ ಸೇವೆಗೆ ಸದಾ ಸಿದ್ಧವಿರುವುದಾಗಿ ನುಡಿದ ಅವರು, ಮುಂದೆ ಕೊಡಗು ಹಾಗೂ ಮೈಸೂರಿನಲ್ಲಿ ಕಚೇರಿ ತೆರೆದು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.

ಕಾರ್ಯಕರ್ತರ, ನಾಯಕರ, ಶಾಸಕರುಗಳ ಪ್ರಯತ್ನಕ್ಕೆ ಪ್ರತಿಫಲ ಸಿಗಲಿಲ್ಲ ಎಂಬ ನೋವಿದೆ. ಆದರಲ್ಲೂ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು ಇದು ತಮ್ಮದೇ ಚುನಾವಣೆ ಎಂಬAತೆ ಸಾಕಷ್ಟು ಶ್ರಮಿಸಿದ್ದಾರೆ. ಇವರನ್ನು ಸ್ಮರಿಸಿಕೊಳ್ಳುವುದಾಗಿ ಹೇಳಿದ ಲಕ್ಷö್ಮಣ್ ಪರಾಭವಗೊಂಡಿದ್ದರೂ

(ಮೊದಲ ಪುಟದಿಂದ) ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

ತಂದ ಯೋಜನೆ ಕಾರ್ಯಗತಗೊಳಿಸಿದರೆ ಸಾಕು - ಪ್ರತಾಪ್ ಸಿಂಹ

ಕಳೆದ ೧೦ ವರ್ಷಗಳ ಅವಧಿಯಲ್ಲಿ ಕೊಡಗು-ಮೈಸೂರಿನ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ತಾನು ತಂದಿದ್ದು, ಅವುಗಳನ್ನು ಕಾರ್ಯಗತಗೊಳಿಸುವ ಕನಿಷ್ಟ ಕೆಲಸ ನೂತನ ಸಂಸದರಿAದ ಆಗಬೇಕೆಂದು ನಿಕಟಪೂರ್ವ ಸಂಸದ ಪ್ರತಾಪ್ ಸಿಂಹ ಹೇಳಿದರು.

ಈ ಬಾರಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ತಾನು ೧೦ ವರ್ಷ ಮಾಡಿದ ಕೆಲಸದಿಂದ ಆಡಳಿತ ಪರ ಅಲೆ ಸೃಷ್ಟಿ ಮಾಡಿರುವುದು ಗೆಲುವಿಗೆ ಕಾರಣವಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಹೊರತಾಗಿಯೂ ಮೈಸೂರು-ಕುಶಾಲನಗರ ಹೈವೇಗೆ ಕ್ರಿಯಾಯೋಜನೆಗೆ ಅನುಮತಿ ದೊರಕಿಸುವಲ್ಲಿ ಕೆಲಸ ಮಾಡಿದ್ದೇನೆ. ಮೈಸೂರು ಚಾಮುಂಡಿ ಬೆಟ್ಟ, ವಸ್ತು ಪ್ರದರ್ಶನ ಮೈದಾನ ಅಭಿವೃದ್ಧಿ ಮಾಡಲು ರೂ. ೮೦ ಕೋಟಿ ತಂದಿದ್ದೇನೆ. ಮೈಸೂರು ‘ಔಟರ್ ಟೆರೆಟೆಲ್ ರಿಂಗ್ ರೋಡ್’ ನಿರ್ಮಾಣ, ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಸೇರಿದಂತೆ ಹಲವು ಯೋಜನೆ ಅನುಷ್ಠಾನಕ್ಕೆ ಮಾತ್ರ ಬಾಕಿ ಇದ್ದು, ಎಲ್ಲಕ್ಕೂ ಆಡಳಿತಾತ್ಮಕ ಕೆಲಸವನ್ನೆಲ್ಲ ಮಾಡಿ ಮುಗಿಸಿದ್ದೇನೆ. ನೂತನ ಸಂಸದರು ಇದನ್ನು ಅನುಷ್ಠಾನ ಮಾಡುವತ್ತ ಕೆಲಸ ಮಾಡಬೇಕು ಎಂದ ಅವರು, ಕೊಡಗು-ಮೈಸೂರು ಅಭಿವೃದ್ಧಿಗೆ ತಾನು ಬದ್ಧನಾಗಿದ್ದು, ತಂದ ಯೋಜನೆಗಳ ಅನುಷ್ಠಾನ ಮಾಡುವುದರೊಂದಿಗೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಕಟಿಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.

ರಾಜಗೌರವದಿಂದ ಗೆಲುವು - ಪೊನ್ನಣ್ಣ

ಮೈಸೂರು ರಾಜವಂಶದಿAದ ಬಂದ ಹಿನ್ನೆಲೆಯಲ್ಲಿ ಯದುವೀರ್ ಅವರಿಗೆ ಗೆಲುವು ದೊರೆತಿದೆ. ಆದರೆ, ದೇಶದಲ್ಲಿ ಮೋದಿ ನಾಯಕತ್ವವನ್ನು ಜನರು ಪುರಸ್ಕರಿಸಿಲ್ಲ ಎಂದು ಫಲಿತಾಂಶದಿAದ ಗೊತ್ತಾಗುತ್ತಿದೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಹೇಳಿದರು.

ರಾಜಗೌರವ ಇರುವ ಕಾರಣ ಜನ ಯದುವೀರ್ ಪರ ಒಲವು ತೋರಿದ್ದಾರೆ. ಜನತಾ ತೀರ್ಪನ್ನು ಕಾಂಗ್ರೆಸ್ ಸ್ವೀಕರಿಸುತ್ತದೆ. ಸಾಂಪ್ರದಾಯಿಕ ಮತಗಳು ನಮಗೆ ಎಂದಿನAತೆ ದೊರೆತಿವೆ. ಹಿಂದಿಗಿAತ ಹೆಚ್ಚಿನ ಮತಗಳನ್ನೂ ಗಳಿಸಿದ್ದೇವೆ. ನೂತನ ಸಂಸದರು ಕ್ಷೇತ್ರದ ಧ್ವನಿಯಾಗಿ ಕೆಲಸ ಮಾಡಬೇಕು. ಅಭಿವೃದ್ಧಿ ಕೆಲಸಕ್ಕೆ ಸಹಕರಿಸುತ್ತೇವೆ. ದೇಶದಲ್ಲಿ ಮೋದಿ ನಾಯಕತ್ವಕ್ಕೆ ವಿರೋಧ ವ್ಯಕ್ತವಾಗಿರುವುದು ಫಲಿತಾಂಶದಿAದ ತಿಳಿಯುತ್ತದೆ. ಸಮ್ಮಿಶ್ರ ಸರಕಾರಕ್ಕೆ ಒಲವು ತೋರಿರುವುದರಿಂದ ಮೋದಿ ಪ್ರಧಾನಿ ಹುದ್ದೆ ಅಲಂಕರಿಸದೆ ಪರ್ಯಾಯ ನಾಯಕನಿಗೆ ಸ್ಥಾನ ಬಿಟ್ಟುಕೊಡಬೇಕು ಎಂದು ಪ್ರತಿಪಾದಿಸಿದರು.

ಸೋಲು ಸ್ವೀಕರಿಸುತ್ತೇವೆÉ - ಮಂತರ್

ಲೋಕಸಭಾ ಚುನಾವಣೆಯಲ್ಲಾದ ಸೋಲನ್ನು ಸ್ವೀಕರಿಸುತ್ತೇವೆ. ಕಾಂಗ್ರೆಸ್ ಇದರ ಆತ್ಮವಿಮರ್ಶೆಯಲ್ಲಿ ತೊಡಗಿಸಿಕೊಂಡಿದೆ. ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುತ್ತೇವೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.

ಮತದಾರರು ಪ್ರಜ್ಞಾವಂತರಾಗಿದ್ದು, ಸಂದರ್ಭೋಚಿತವಾಗಿ ಮತದಾನ ಮಾಡಿದ್ದಾರೆ. ಕೆಲವೊಂದು ಕಾರಣಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದಾರೆ. ಸೋಲಿಗೆ ಕಾರಣವಾದ ಅಂಶಗಳನ್ನು ಸರಿಪಡಿಸಿಕೊಳ್ಳುತ್ತೇವೆ. ದೇಶದಲ್ಲಿ ಕಾಂಗ್ರೆಸ್ ಕಮಾಲ್ ಮಾಡಿದೆ. ಇದರಿಂದ ಬಿಜೆಪಿ ಜನವಿರೋಧಿ ನೀತಿ ಅನುಸರಿಸಿದೆ ಎಂದು ಬಯಲಾಗಿದೆ. ನೂತನ ಸಂಸದರೊAದಿಗೆ ಅಭಿವೃದ್ಧಿಗೆ ಸ್ಥಳೀಯ ಶಾಸಕರಾಗಿ ಮುಕ್ತವಾಗಿ ಕೈಜೋಡಿಸುತ್ತೇನೆÉ. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡುವುದಿಲ್ಲ. ಹಿಂದಿನ ಸಂಸದ ಪ್ರತಾಪ್ ಸಿಂಹ ಕೊಡಗಿಗೆ ಕೆಲಸ ಮಾಡಿಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದು, ನೂತನ ಸಂಸದರು ಸಂಸತ್‌ನಲ್ಲಿ ಕೊಡಗಿನ ಜನರ ಧ್ವನಿಯಾಗಿ. ಮತ್ತಷ್ಟು ಅಭಿವೃದ್ಧಿ ಕೆಲಸ ಅವರಿಂದ ನಿರೀಕ್ಷಿಸುತ್ತಿದ್ದೇವೆ ಎಂದು ವಿವರಿಸಿದರು.

ಬಿಟ್ಟಿ ಭಾಗ್ಯ ಬಿಟ್ಟು, ಜನಪರ ಆಡಳಿತಕ್ಕೆ ಜೈ - ಸುಜಾ

ಬಿಟ್ಟಿ ಭಾಗ್ಯಗಳ ಆಸೆಗಳನ್ನು ಬಿಟ್ಟು ಜನಪರ ಆಡಳಿತಕ್ಕೆ ಮತದಾರ ಪ್ರಭುಗಳು ಜೈ ಎಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ತಿಳಿಸಿದರು.

ಕೊಡಗು-ಮೈಸೂರು ಕ್ಷೇತ್ರದ ಅಭೂತಪೂರ್ವ ಗೆಲುವಿಗೆ ಕಳೆದ ೧೦ ವರ್ಷಗಳ ಕಾಲ ಕೇಂದ್ರದಲ್ಲಿ ನರೇಂದ್ರ ಮೋದಿ ನಡೆಸಿದ ಆಡಳಿತ ಕಾರಣವಾಗಿದೆ. ಎಲ್ಲಾ ವರ್ಗದವರನ್ನು ಮೇಲೆತ್ತುವ ಕೆಲಸ ಮೋದಿ ಅವರಿಂದಾಗಿದೆ. ದೇಶದ ಭದ್ರತೆ, ಹಿತರಕ್ಷಣೆ ಸಾಧಿಸಲು ಯಶಸ್ವಿಯಾದ ಕಾರಣ ಜನತೆಯ ಬೆಂಬಲ ಬಿಜೆಪಿಗೆ ದೊರೆತಿದೆ. ಯದುವೀರ್ ಅವರ ಹಿನ್ನೆಲೆಯೂ ಮತಗಳಿಕೆಗೆ ಕಾರಣವಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನಪರ ಕೆಲಸಗಳು, ಅವರ ದೂರದೃಷ್ಟಿಯ ಯೋಜನೆಗಳು ಜನರಿಗೆ ಇಂದಿಗೂ ಸಹಕಾರಿಯಾಗಿದ್ದು, ಇವೆಲ್ಲವನ್ನು ಗಮನಿಸಿ ಯದುವೀರ್ ಅವರನ್ನು ಜನ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ನಾಯಕರುಗಳು ಕೊಡಗು-ಮೈಸೂರು ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಸಾಕಷ್ಟು ಹಣ ಖರ್ಚು ಮಾಡಿದ್ದರು. ಅವೆಲ್ಲವನ್ನು ಲೆಕ್ಕಿಸದೆ ಜನತೆ ಅಭಿವೃದ್ಧಿಪರತೆಯ ಭಾರತ ಕಟ್ಟಲು ಕೈಜೋಡಿಸಿದ್ದಾರೆ ಎಂದು ಹೇಳಿದರು.

ನಿರೀಕ್ಷಿತ ಗೆಲುವು ಲಭಿಸಿದೆ - ಕೆ.ಜಿ.ಬಿ.

ಕೊಡಗು-ಮೈಸೂರು ಕ್ಷೇತ್ರದಲ್ಲಿ ನಿರೀಕ್ಷಿಸಿದಂತೆ ಬಿಜೆಪಿಗೆ ಜಯ ದೊರೆತಿದೆ. ಕಳೆದ ಬಾರಿಗಿಂತ ಹೆಚ್ಚಿನ ಮುನ್ನಡೆ ಪಡೆದು ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿದೆ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹರ್ಷ ವ್ಯಕ್ತಪಡಿಸಿದರು.

ಜನಾಶೀರ್ವಾದ ಹಾಗೂ ಕಾರ್ಯಕರ್ತರ ಶ್ರಮದ ಫಲವಾಗಿ ಉತ್ತಮ ಫಲಿತಾಂಶ ಬಂದಿದೆ. ನೂತನ ಸಂಸದರು ಜನರ ನಿರೀಕ್ಷೆಗೆ ತಕ್ಕ ಕೆಲಸ ಮಾಡುವ ವಿಶ್ವಾಸ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಮತಗಳಿಂದ ನಾವು ಸೋತಿದ್ದೆವು. ಆಕಸ್ಮಿಕವಾಗಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. ಆ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡು ಈ ಬಾರಿ ಕೆಲಸ ಮಾಡಿದ್ದೆವು. ಇದು ಮಾಡು ಇಲ್ಲವೇ ಮಡಿ ಚುನಾವಣೆಯಾಗಿತ್ತು. ಸಾಂಘಿಕ ಪ್ರಯತ್ನದಿಂದ ಬಿಜೆಪಿಗೆ ಪೂರಕ ಫಲಿತಾಂಶ ಲಭಿಸಿದೆ. ಅತಿಯಾದ ವಿಶ್ವಾಸದಿಂದ ದೇಶದಲ್ಲಿ ನಿರೀಕ್ಷಿತ ಸೀಟ್ ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ. ಇಂಡಿ ಒಕ್ಕೂಟದ ವ್ಯವಸ್ಥಿತ ಅಪಪ್ರಚಾರ ಅವರಿಗೆ ಫಲ ನೀಡಿದೆ ಎಂದು ವಿಶ್ಲೇಷಿಸಿದರು.

ಚತುಷ್ಪಥ ರಸ್ತೆ-ಕೇಂದ್ರ ಯೋಜನೆಗಳನ್ನು ತರಬೇಕು : ರಂಜನ್

ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನಿರೀಕ್ಷಿಸಿದಂತೆ ಭಾರಿ ಪ್ರಮಾಣದ ಅಂತರದಲ್ಲಿ ಗೆಲುವು ಸಾಧಿಸಿರುವುದು ಖುಷಿ ನೀಡಿದೆ. ಕೊಡಗಿನಿಂದ ಉತ್ತಮ ಮತ ದೊರೆತಿರುವುದು ಜಿಲ್ಲೆಯಲ್ಲಿ ಬಿಜೆಪಿ ಭದ್ರವಾಗಿರುವುದನ್ನು ಸಾಬೀತುಪಡಿಸಿದೆ ಎಂದು ಮಾಜಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ತಿಳಿಸಿದರು. ಕೊಡಗಿನ ಮತದಾರರು ಅಭಿವೃದ್ಧಿ ಚಿಂತನೆ ಹೊಂದಿದ್ದು, ಗ್ಯಾರಂಟಿಗಳಿಗೆ ಮರುಳಾಗದೆ ಅಭಿವೃದ್ಧಿಗೆ ವೇಗ ನೀಡುವ ಚಿಂತನಶೀಲ ವ್ಯಕ್ತಿಗೆ ಮತ ನೀಡಿದ್ದಾರೆ. ಕೊಡಗಿನಲ್ಲಿ ಕಾಂಗ್ರೆಸ್ ಸರಕಾರ ಹಾಗೂ ಶಾಸಕರಿಂದ ನಿರೀಕ್ಷಿತ ಅಭಿವೃದ್ಧಿ ಕೆಲಸಗಳಾಗಿಲ್ಲ. ಈ ಹಿನ್ನೆಲೆ ಬಿಜೆಪಿಯನ್ನು ಜನ ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಗುಡ್ಡೆಹೊಸೂರು-ಮೈಸೂರು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಸದರು ಆಸಕ್ತಿ ತೋರಬೇಕು. ಈ ಕುರಿತು ತಾನು ಅವರೊಂದಿಗೆ ಮಾತನಾಡುವೆ. ಕೇಂದ್ರದ ಯೋಜನೆ ಜಲಜೀವನ್ ಮಿಷನ್ ಸೇರಿದಂತೆ ಇನ್ನಿತರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅವರು ಅನುಷ್ಠಾನಗೊಳಿಸಬೇಕು. ಕಾರ್ಯಕರ್ತರ ನೋವು-ನಲಿವಿಗೂ ಸ್ಪಂದನ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಫಲಿತಾಂಶದಿAದ ಬೇಸರ - ವೀಣಾ

ಕೊಡಗಿನಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ನೂತನ ಶಾಸಕರು ಬಂದ ನಂತರ ಆಗುತ್ತಿವೆÉ. ಆದರೆ, ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಮತ ಸಿಗದೆ ಸೋಲು ಅನುಭವಿಸಿರುವುದು ನಿರಾಸೆ ಮೂಡಿಸಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಎರಡೂ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ೨ ಕ್ಷೇತ್ರಗಳಿಂದ ಉತ್ತಮ ಮತಗಳು ಕಾಂಗ್ರೆಸ್‌ಗೆ ದೊರೆಯಬೇಕಾಗಿತ್ತು. ಒಳ್ಳೆ ಮತಗಳಿಸುವ ಅಚಲ ವಿಶ್ವಾಸ ಪಕ್ಷದಲ್ಲಿತ್ತು. ಇದೀಗ ವಿಶ್ವಾಸ ಹುಸಿಯಾಗಿದೆ. ಜನರು ನೀಡುವ ತೀರ್ಪನ್ನು ನಾವು ಸ್ವೀಕರಿಸುತ್ತೇವೆ. ಉಚಿತ ಸೌಲಭ್ಯಗಳನ್ನು ರಾಜ್ಯ ಸರಕಾರ ನೀಡಿದರೂ ಮತ ಕಡಿಮೆಯಾದ ಬಗ್ಗೆ ಬೇಸರ ಇದೆ. ಗೆದ್ದ ಅಭ್ಯರ್ಥಿ ಕೊಡಗಿನ ಪರ ಧ್ವನಿಯಾಗಿ ಕೆಲಸ ಮಾಡಲಿ ಎಂದು ಆಶಿಸಿದರು.

ಸುಭದ್ರ ಭಾರತಕ್ಕೆ ಮೋದಿ ಆಡಳಿತ ಬೇಕು - ಸುನಿಲ್

ಸುಭದ್ರ ಭಾರತ ನಿರ್ಮಾಣವಾಗಬೇಕಾದರೆ ಮೋದಿ ಆಡಳಿತ ಬೇಕು. ಇದಕ್ಕೆ ಪೂರಕವಾಗಿ ಕೊಡಗು-ಮೈಸೂರು ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿರುವುದು ಖುಷಿ ಕೊಟ್ಟಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಂಡೇಪAಡ ಸುನಿಲ್ ಸುಬ್ರಮಣಿ ಸಂತಸ ವ್ಯಕ್ತಪಡಿಸಿದರು.

ಪ್ರಚಾರದ ಸಮಯದಲ್ಲಿಯೇ ಗೆಲ್ಲುವ ಪೂರ್ಣ ವಿಶ್ವಾಸ ಬಿಜೆಪಿಗೆ ಬಂದಿತ್ತು. ಕೊಡಗಿನ ಜನ ದೇಶಭಕ್ತರು ಈ ಹಿನ್ನೆಲೆ ಸಮೃದ್ಧ ಭಾರತಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಮೋದಿ ಅಲೆ ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು.