ಮಡಿಕೇರಿ, ಜೂ. ೫: ಮಾರಣಾಂತಿಕ ಡೆಂಗ್ಯೂ ಕಾಯಿಲೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಹಮ್ಮಿಯಾಲ ಗ್ರಾಮದ ಪೊನ್ನಚೆಟ್ಟಿರ ಸಾಬು ಅವರ ಪುತ್ರ ಶೇಖರ ಎಂಬವರೆ ಸಾವನ್ನಪ್ಪಿರುವ ದುರ್ದೈವಿ. ಮೃತರ ಅಂತ್ಯಕ್ರಿಯೆ ತಾ. ೬ರಂದು (ಇಂದು) ಸ್ವಗ್ರಾಮ ಹಮ್ಮಿಯಾಲದಲ್ಲಿ ನಡೆಯಲಿದೆ. ಮೃತರು ಪತ್ನಿ ಹಾಗೂ ೭ ತಿಂಗಳ ಮಗುವನ್ನು ಅಗಲಿದ್ದಾರೆ.