ಚೆಯ್ಯಂಡಾಣೆ, ಜೂ. ೫: ನಾಪೋಕು ್ಲ- ಭಾಗಮಂಡಲ ಮುಖ್ಯರಸ್ತೆಯ ಬಲ್ಲಮಾವಟಿ ಬಳಿಯಲ್ಲಿ ಸಂಭವಿಸಿದ ಟಿಪ್ಪರ್ ಲಾರಿ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಅಯ್ಯಂಗೇರಿ ಗ್ರಾಮದ ದಿ. ತೊತ್ತಿಯಂಡ ಸೋಮಯ್ಯ, ಪುಷ್ಪಾ ದಂಪತಿಯ ಪುತ್ರ ತೊತ್ತಿಯಂಡ ಮುಖೇಶ್ (೨೪) ಮೃತ ದುರ್ದೈವಿ. ಕಳೆದ ಮೇ ೧೩ರಂದು ನಾಪೋಕ್ಲು ವಿನಲ್ಲಿ ಮದುವೆ ಸಮಾರಂಭ ಮುಗಿಸಿ ಮುಖೆೆÃಶ್ ಹಾಗೂ ತೊತ್ತಿಯಂಡ ರಾಕೇಶ್ ಇಬ್ಬರು ಬೈಕಿನಲ್ಲಿ ಅಯ್ಯಂಗೇರಿ ಕಡೆಗೆ ತೆರಳುವ ಸಂದರ್ಭ ಬಲ್ಲಮಾವಟಿ ಬಳಿಯ ರಸ್ತೆ ತಿರುವಿನಲ್ಲಿ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದರು. ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಮುಖೇಶನಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮುಖೆÉÃಶ್ ಬುಧವಾರ ಮುಂಜಾನೆ ಮೃತಪಟ್ಟಿದ್ದಾನೆ. ತಂದೆ ತಾಯಿಯನ್ನು ಕಳೆದುಕೊಂಡಿದ್ದ ಮುಖೆÉÃಶ್ ಇಬ್ಬರು ಸಹೋದರಿಯರೊಂದಿಗೆ ವಾಸವಾಗಿದ್ದನು. ಆರ್ಥಿಕವಾಗಿ ಹಿಂದುಳಿದಿದ್ದ ಮುಖೆÉÃಶನ ಚಿಕಿತ್ಸೆಗಾಗಿ ನಾಪೋಕ್ಲುವಿನ ಸೇವ್‌ದ ಡ್ರೀಮ್ಸ್ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ಅಯ್ಯಂಗೇರಿಯ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಿ ಹಣವನ್ನು ಸಂಗ್ರಹಿಸಿ ಮಂಗಳೂರಿನ ಕೆಎಂಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಚಿಕಿತ್ಸೆಗೆ ಸ್ಪಂದಿಸದೆ ಮುಖೇಶ್ ಬುಧವಾರ ಮುಂಜಾನೆ ಮೃತಪಟ್ಟಿದ್ದಾನೆÉ.

ಘಟನೆ ಸಂಬAಧ ಟಿಪ್ಪರ್ ಚಾಲಕ ಕಟ್ಟೆಮಾಡು ಗ್ರಾಮದ ನಿವಾಸಿ ಟಿ.ಬಿ.ಚೇತನ್ ಎಂಬಾತನ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.