ಮಡಿಕೇರಿ, ಜೂ. ೫: ಮಡಿಕೇರಿ ಬಳಿಯ ತಾಳತ್ತಮನೆಯ ಅಂಗಡಿಯೊAದರಲ್ಲಿ ಕಳ್ಳತನ ನಡೆದಿದ್ದು, ಕ್ಯಾಶ್‌ಬಾಕ್ಸ್ನಲ್ಲಿಟ್ಟಿದ್ದ ನಗದು, ಚಿನ್ನಾಭರÀಣ ಸೇರಿದಂತೆ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನವನ್ನು ಕಳ್ಳರು ದೋಚಿದ್ದಾರೆ.

ಭರತ್ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಮಂಗಳವಾರ ರಾತ್ರಿ ಕಳ್ಳತನವಾಗಿದೆ. ದಿನಸಿ ಹಾಗೂ ಕೋಳಿ ಅಂಗಡಿ ನಡೆಸುತ್ತಿರುವ ಭರತ್ ಮಂಗಳವಾರ ಬೀಗ ಹಾಕಿ ಮನೆಗೆ ಹೋಗಿದ್ದರು. ಬೆಳಿಗ್ಗೆ ಬಂದು ನೋಡಿದಾಗ ಅಂಗಡಿಯ ಬೀಗ ಒಡೆದಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಕ್ಯಾಶ್‌ಬಾಕ್ಸ್ ಬೀಗ ಒಡೆದು ಅದರಲ್ಲಿದ್ದ ರೂ. ೧೦ ಸಾವಿರ ನಗದು, ಅಂದಾಜು ೪೦ ಗ್ರಾಂ ಚಿನ್ನಾಭರಣ ಹಾಗೂ ಅಂಗಡಿ ಹೊರಭಾಗದಲ್ಲಿ ನಿಲುಗಡೆ ಮಾಡಿದ್ದ ಸ್ಕೂಟರ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ವಿಚಾರವನ್ನು ಭರತ್ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಬೆರಳಚ್ಚು ತಜ್ಞರು, ಶ್ವಾನದಳ ಕರೆಸಿ ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.