ಸೋಮವಾರಪೇಟೆ, ಮೇ ೧೫: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶ್ರೀ ಶಂಕರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಶ್ರೀ ಶಂಕರ ಭಗವತ್ಪಾದರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸ ಲಾಯಿತು. ಅರ್ಚಕ ರವಿಶಂಕರ್ ಅವರಿಂದ ಪೂಜಾ ವಿಧಿವಿಧಾನಗಳು ನಡೆದವು. ದೇವಾಲಯದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಜಗತ್ತಿನಾದ್ಯಂತ ಸನಾತನ ಧರ್ಮ ಪರಂಪರೆಯ ರಕ್ಷಣೆಗೋಸ್ಕರ ತಮ್ಮ ೩೨ ವರ್ಷಗಳ ಜೀವಿತಾವಧಿಯಲ್ಲಿ ಶ್ರಮಿಸಿದ ಮಹಾನ್ ಸಂತ. ದೇಶಾದ್ಯಂತ ಸಂಚರಿಸಿ ಸಮಾಜವನ್ನು ಒಗ್ಗೂಡಿಸುವುದಕ್ಕಾಗಿ, ಸನಾತನ ಸಂಸ್ಕೃತಿ, ಪೂಜಾ ಪರಂಪರೆಯನ್ನು ಉಳಿಸಿ ಬೆಳೆಸಿದ ಜಗದ್ಗುರುಗಳು ಶ್ರೀ ಶಂಕರಚಾರ್ಯರು ಎಂದು ಬಣ್ಣಿಸಿದರು. ಈ ಸಂದರ್ಭ ದೇವಾಲಯದ ಕಾರ್ಯದರ್ಶಿ ಎಸ್.ಡಿ. ವಿಜೇತ್, ಮಾಜಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಶಾಮ್ ಸುಂದರ್, ವೈ.ಪಿ. ಹರೀಶ್, ರಾಜೇಶ್ ಪದ್ಮನಾಭ, ಜಯಂತ್, ಸತೀಶ್, ಮಂಜುನಾಥ್ ಪ್ರಸಾದ್, ಸುದರ್ಶನ್ ಕೌಶಿಕ್, ಸತೀಶ್, ದಿನೇಶ್ ಹಾಲೇರಿ, ದೇವಿ ಬಳಗದ ಕಾರ್ಯದರ್ಶಿ ವಿದ್ಯಾ ಸೋಮೇಶ್, ಸುಮಾ ಆನಂದ್, ವಿಮಲಾ ರಾಜಗೋಪಾಲ್, ಶ್ರೀಲಕ್ಷಿö್ಮ ಶ್ರೀನಿವಾಸ್, ಸೌಮ್ಯ ಜಯಂತ್, ವಿದ್ಯಾ, ತೇಜಾ ಮಣಿ, ಕಲ್ಪನಾ ಕೌಶಿಕ್, ಅಣ್ಣಯ್ಯ, ಸತೀಶ್ ಸೇರಿದಂತೆ ಇನ್ನಿತರರು ಇದ್ದರು.