ಕೂಡಿಗೆ, ಮೇ ೧೫: ಕೂಡಿಗೆ ಮತ್ತು ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦ಕ್ಕೂ ಹೆಚ್ಚು ಗ್ರಾಮಗಳಿಗೆ ಕಳೆದ ೭೫ ವರ್ಷಗಳಿಂದಲೂ ಸರಕಾರಿ ಬಸ್ ಸೌಲಭ್ಯವಿಲ್ಲದ ಜನರು ತಾವು ಸಮಸ್ಯೆ ಎದುರಿಸುವಂತಾಗಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಸನ ಹೆದ್ದಾರಿಗೆ ಹೊಂದಿಕೊAಡAತೆ ಇರುವ ಭುವನಗರಿ ಗ್ರಾಮದಿಂದ ಸೀಗೆಹೊಸೂರು, ಗಂಗೆ ಕಲ್ಯಾಣ, ಹೊಸಳ್ಳಿ, ಯಲಕನೂರು, ಬ್ಯಾಡಗೊಟ್ಟ, ಆಡಿನಾಡೂರು, ಕುಂಬಾರಹಡಲು, ಹಳೆ ಮದಲಾ ಪುರ, ನೇರುಗಳಲೆ, ಕಾಟೀ ಕೊಪ್ಪಲು ಸೇರಿದಂತೆ ಅನೇಕ ಗ್ರಾಮಗಳಿಗೆ ಇದುವರೆಗೂ ಸರಕಾರಿ ಬಸ್ ವ್ಯವಸ್ಥೆಯ ಕೂಡಿಗೆ, ಮೇ ೧೫: ಕೂಡಿಗೆ ಮತ್ತು ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦ಕ್ಕೂ ಹೆಚ್ಚು ಗ್ರಾಮಗಳಿಗೆ ಕಳೆದ ೭೫ ವರ್ಷಗಳಿಂದಲೂ ಸರಕಾರಿ ಬಸ್ ಸೌಲಭ್ಯವಿಲ್ಲದ ಜನರು ತಾವು ಸಮಸ್ಯೆ ಎದುರಿಸುವಂತಾಗಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಸನ ಹೆದ್ದಾರಿಗೆ ಹೊಂದಿಕೊAಡAತೆ ಇರುವ ಭುವನಗರಿ ಗ್ರಾಮದಿಂದ ಸೀಗೆಹೊಸೂರು, ಗಂಗೆ ಕಲ್ಯಾಣ, ಹೊಸಳ್ಳಿ, ಯಲಕನೂರು, ಬ್ಯಾಡಗೊಟ್ಟ, ಆಡಿನಾಡೂರು, ಕುಂಬಾರಹಡಲು, ಹಳೆ ಮದಲಾ ಪುರ, ನೇರುಗಳಲೆ, ಕಾಟೀ ಕೊಪ್ಪಲು ಸೇರಿದಂತೆ ಅನೇಕ ಗ್ರಾಮಗಳಿಗೆ ಇದುವರೆಗೂ ಸರಕಾರಿ ಬಸ್ ವ್ಯವಸ್ಥೆಯ ಸಂಪರ್ಕ ರಸ್ತೆಯು ಲೋಕೋಪ ಯೋಗಿ ಇಲಾಖೆಗೆ ಸೇರಿದ್ದು, ಈಗಾಗಲೇ ಹಂತ ಹಂತವಾಗಿ ರಸ್ತೆಯ ಕಾಮಗಾರಿಯು ನಡೆಯುತ್ತಿದೆ, ಅಲ್ಲದೆ ಅನೇಕ ವರ್ಷಗಳಿಂದಲೂ ಈ ವ್ಯಾಪ್ತಿಯ ನೂರಾರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸೋಮವಾರ ಪೇಟೆ ಅಥವಾ ಕುಶಾಲನಗರದ ಕಡೆಗೆ ತೆರಳಲು ಸರಕಾರಿ ಬಸ್ ವ್ಯವಸ್ಥೆ ಇಲ್ಲದೆ ಅನೇಕ ಗ್ರಾಮಸ್ಥರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ನಗರದ ವಸತಿ ಗೃಹಗಳ ಸೌಲಭ್ಯಗಳನ್ನು ಪಡೆಯುವಂತಾಗಿದೆ. ಅಲ್ಲದೆ ತಮ್ಮ ತಮ್ಮ ವಾಹನದ ಮೂಲಕ ನಗರ ಪ್ರದೇಶಗಳಿಗೆ ತೆರಳುವಂತಹ ಸ್ಥಿತಿ ಕಳೆದ ೭೫ ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ.

ಈ ಮಾರ್ಗದ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದ ಒಂದು ಖಾಸಗಿ ಬಸ್ ಸಹ ಕಳೆದ ೧೦ ವರ್ಷಗಳಿಂದ ಸ್ಥಗಿತಗೊಂಡಿದೆ. ಕಳೆದ ವರ್ಷಗಳಲ್ಲಿ ರಸ್ತೆ ಹೋರಾಟ ಸಮಿತಿಯ ವತಿಯಿಂದ ಹೋರಾಟ ನಡೆಸಿದ ಹಿನ್ನೆಲೆ ಇದೀಗ ರಸ್ತೆಯ ಕಾಮ ಗಾರಿಯು ವಿವಿಧ ಹಂತಗಳಲ್ಲಿ ನಡೆಯುತ್ತಿದೆ. ಈ ವ್ಯಾಪ್ತಿಯ ೨೦ ಕ್ಕೂ ಗ್ರಾಮಗಳ ವಿದ್ಯಾರ್ಥಿಗಳು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸೋಮವಾರ ಪೇಟೆ, ಕುಶಾಲನಗರದ ಶಾಲಾ ಕಾಲೇಜುಗಳಿಗೆ ಬರಲು ಹರ ಸಾಹಸ ಪಡಬೇಕಿದೆ. ಕುಶಾಲ ನಗರ, ಕೂಡಿಗೆ ಬರಲು ಅನೇಕ ಗ್ರಾಮಸ್ಥರು ಸ್ವಂತ ವಾಹನ ಇಲ್ಲದೆ ಇರುವವರೂ ಈ ಮಾರ್ಗದಲ್ಲಿ ಓಡಾಡುವ ಕಲ್ಲು ತುಂಬಿಸಿ ಕೊಂಡು ಸಾಗಾಟ ಮಾಡುವ ಲಾರಿಗಳನ್ನು ಅವಲಂಬಿಸ ಬೇಕಾಗಿದೆ. ಅನೇಕ ಬಾರಿ ಗ್ರಾಮಸ್ಥರು, ಸಾರ್ವಜನಿಕರು, ವಿದ್ಯಾರ್ಥಿಗಳ ಪೋಷಕರು ಸಂಬAಧಿಸಿದ ಇಲಾಖೆಯವರಿಗೆ ಮನವಿಯನ್ನು ಸಲ್ಲಿಸಿದರೂ ಇದುವರೆಗೂ ಯಾವುದೇ ವ್ಯವಸ್ಥೆಗೆ ಮುಂದಾಗಿರುವುದಿಲ್ಲ.

ಸ್ಥಳೀಯ ಗ್ರಾಮಸ್ಥರು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನವರಿಗೆ ಮನವಿಯನ್ನು ಸಲ್ಲಿಸಿರುತ್ತಾರೆ. ಈ ಬಗ್ಗೆ ಸ್ಪಂದಿಸುವ ಭರವಸೆ ಯನ್ನು ನೀಡಿರುತ್ತಾರೆ. ಸಂಬAಧಿಸಿದ ಅಧಿಕಾರಿ ವರ್ಗ ದವರು ೨೦ ಗ್ರಾಮಗಳ ವಿದ್ಯಾ ರ್ಥಿಗಳ ಸಮಸ್ಯೆಗಳು ಅರಿತು ತುರ್ತಾಗಿ ಗಮನ ಹರಿಸಿ ಸರಕಾರಿ ಬಸ್ ವ್ಯವಸ್ಥೆಗೆ ಮುಂದಾಗಬೇಕೆAದು ಈ ವ್ಯಾಪ್ತಿಯ ಸಾವಿರಾರು ಗ್ರಾಮಸ್ಥರ, ಸಾರ್ವಜನಿಕರ ಒತ್ತಾಯವಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ