ಮಡಿಕೇರಿ, ಮೇ ೧೫: ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡಲಾಗುವ ಕೆಸಿಸಿ ಸಾಲ ಪಡೆಯಲು ಸರಕಾರದ ಫ್ರೂಟ್ ತಂತ್ರಾAಶದಿAದಾಗಿ ತೊಂದರೆಯಾಗುತ್ತಿದ್ದು, ತಂತ್ರಾAಶದ ನಿಯಮಾವಳಿಗಳನ್ನು ಸಡಿಲಗೊಳಿಸಿ ಈ ಹಿಂದಿನAತೆ ಸಾಲ ವಿತರಣೆಗೆ ಸರಕಾರ ಮುಂದಾಗಬೇಕೆAದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಸಹಕಾರ ಸಂಘದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಸಾಲ ವಿತರಣೆ ಮಾಡಲಾಗುತ್ತಿದೆ. ಆದರೆ, ಸರಕಾರ ಜಾರಿಗೊಳಿಸಿರುವ ಫ್ರೂಟ್ ತಂತ್ರಾAಶದಿAದಾಗಿ ಸಾಲ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಂಟಿ ಪಹಣಿ ಪತ್ರಗಳಿದ್ದು, ಇದರಿಂದಾಗಿ ರೈತರಿಗೆ ದೊರಕಬೇಕಾದ ಸೌಲಭ್ಯ ಸಿಗುತ್ತಿಲ್ಲ. ಪಹಣಿ ಪತ್ರದಲ್ಲಿರುವವರು ಅನೇಕರು ಮೃತಪಟ್ಟಿರುತ್ತಾರೆ. ಅಲ್ಲದೆ, ಏಕ ವ್ಯಕ್ತಿ ಪಹಣಿ ಮಾಡಿಸಿಕೊಳ್ಳಲು ಸುಮಾರು ೪೦ ರಿಂದ ೫೦ ಸಾವಿರದಷ್ಟು ಹಣವನ್ನು ಮಧ್ಯವರ್ತಿಗಳಿಗಾಗಿ ವೆಚ್ಚ ಮಾಡಬೇಕಾಗುತ್ತದೆ. ಇದರಿಂದಾಗಿ ರೈತರು ಸಾಲ ಪಡೆದುಕೊಳ್ಳಲು ಕೂಡ ಹಿಂದೇಟು

(ಮೊದಲ ಪುಟದಿಂದ) ಹಾಕುವಂತಾಗಿದ್ದು, ಇದು ನೇರವಾಗಿ ಸಹಕಾರ ಸಂಘ ಹಾಗೂ ಕೇಂದ್ರ ಸಹಕಾರ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‌ಗಳಿಗೂ ಆದಾಯ ಗಳಿಕೆಯಲ್ಲಿ ಹಿನ್ನಡೆಯುಂಟಾಗುತ್ತದೆ. ಕಳೆದ ಅವಧಿಯಲ್ಲಿ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರು ಸಹಕಾರ ಸಚಿವರುಗಳೊಂದಿಗೆ ವ್ಯವಹರಿಸಿ ವಿನಾಯಿತಿ ನೀಡುವಲ್ಲಿ ಸಫಲರಾಗಿದ್ದರು.

ಈ ಬಾರಿಯೂ ಅಧ್ಯಕ್ಷರು, ಜನಪ್ರತಿನಿಧಿಗಳು ರೈತರ ಸಮಸ್ಯೆ ಬಗ್ಗೆ ಗಮನಹರಿಸಿ ವಿನಾಯಿತಿ ನೀಡಲು ಮುಂದಾಗುವAತೆ ಮನವಿ ಮಾಡಿದರು.

ಚೆಟ್ಟಳ್ಳಿ ಸಹಕಾರ ಸಂಘÀದ ಮೂಲಕ ಕಳೆದ ೪೬ ವರ್ಷಗಳಿಂದ ರೈತರಿಗೆ ಸಾಲ ನೀಡುತ್ತಾ ಬರುತ್ತಿದ್ದು, ಕಳೆದ ಅವಧಿಯಲ್ಲಿ ಕೇಂದ್ರ ಬ್ಯಾಂಕ್‌ನಿAದ ಪಡೆದ ರೂ.೭ ಕೋಟಿ ಹಾಗೂ ಸಂಘದ ಸ್ವಂತ ಹಣ ೪ ಕೋಟಿ ಸೇರಿದಂತೆ ಒಟ್ಟು ೧೧ ಕೋಟಿ ಸಾಲ ವಿತರಣೆ ಮಾಡಲಾಗಿತ್ತು. ಆದರೆ, ಈ ಬಾರಿ ಶೇ.೪೦ರಷ್ಟು ಮಂದಿಗೂ ಕೂಡ ಸಾಲ ಪಡೆದುಕೊಳ್ಳಲು ಸಾಧ್ಯವಾಗುವದಿಲ್ಲ. ಸಂಘದಲ್ಲಿ ೧೧೦೦ ಮಂದಿ ಸದಸ್ಯರುಗಳಿದ್ದು, ಈ ಪೈಕಿ ೫೦೦ ಮಂದಿ ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ಇದೇ ರೀತಿ ಮುಂದುವರಿದರೆ ಜಿಲ್ಲೆಯಲ್ಲಿರುವ ಎಲ್ಲ ಸಹಕಾರ ಸಂಘಗಳು ನಷ್ಟದಿಂದಾಗಿ ಮುಚ್ಚಲ್ಪಡುವ ಸಾಧ್ಯತೆಗಳಿವೆ. ಹಾಗಾಗಿ ಫ್ರೂಟ್ ತಂತ್ರಾAಶದಿAದ ವಿನಾಯಿತಿ ನೀಡಬೇಕು. ಈ ಬಗ್ಗೆ ಈಗಾಗಲೇ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರು, ಅಧಿಕಾರಿಗಳು, ಸಹಕಾರ ಸಚಿವರುಗಳಿಗೆ ಮನವಿ ಸಲ್ಲಿಸಲಾಗಿದೆ. ಸ್ಪಂದನ ದೊರಕದಿದ್ದಲ್ಲಿ ರೈತರ ಪರವಾಗಿ ಹೋರಾಟ ಮಾಡುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪೇರಿಯನ ಪೂಣಚ್ಚ, ನಿರ್ದೇಶಕರುಗಳಾದ ಬಟ್ಟೀರ ಶರಿನ್, ಕರ್ಣಯ್ಯನ ಪ್ರಜ್ವಲ್, ಕಾಶಿ, ಪುತ್ತರೀರ ಶಿವು ನಂಜಪ್ಪ ಇದ್ದರು.