ಮಳೆಗಾಲ ಆರಂಭವಾಗುತ್ತಿದ್ದು, ಪರಿಸರ ಸ್ವಚ್ಛತೆ ಮತ್ತು ಶುದ್ಧ ನೀರು ಸಮರ್ಪಕವಾಗಿರದಿದ್ದರೆ ಆರೋಗ್ಯ ಸಮಸ್ಯೆಗಳಲ್ಲಿ ಅನೇಕ ಖಾಯಿಲೆಗಳು ಬೆಂಬಿಡದೇ ಮನುಷ್ಯನನ್ನು ಕಾಡುತ್ತಲೆ ಇರುತ್ತದೆ. ಕೆಲವೊಂದು ರೋಗಗಳು ಬರಲು ನಮ್ಮ ನಿರಾಸಕ್ತಿ, ಬೇಜವಾಬ್ದಾರಿ, ನಿರ್ಲಕ್ಷತನವೇ ಕಾರಣವಾಗಿದ್ದು, ಇಂತಹ ರೋಗಭಾದೆಗೆ ಸಿಲುಕಿ ನರಳಿದವರಿಗೆ ಮಾತ್ರ ಖಾಯಿಲೆಯ ತೀವ್ರತೆ ತಿಳಿದಿರುತ್ತದೆ.

ಕೋವಿಡ್‌ನಂತೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಡೆಂಗ್ಯೂ ಮತ್ತು ಚಿಕೂನ್ ಗುನ್ಯ ರೋಗಗಳು ಇನ್ನು ಮಳೆಗಾಲ ಮುಗಿಯುವವರೆಗೆ ಹೆಚ್ಚಾಗಲಿದೆ. ನಿಂತ ನೀರಿನಲ್ಲಿ ಸೊಳ್ಳೆಗಳು ಅಥವಾ ವಾಹಕಗಳು ಸಂತಾನೋತ್ಪತ್ತಿ ಮಾಡಿ ರೋಗಭಾದೆ ತರುವ ಮೊದಲು ಲಾರ್ವಾ ನಿರ್ಮೂಲನೆಯೇ ಮುÄನ್ನೆಚ್ಚರಿಕೆಯೇ ಮದ್ದಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾರತದಲ್ಲಿ ಮೇ ೧೬ ರಂದು ರಾಷ್ಟಿçÃಯ ಡೆಂಗ್ಯೂ ದಿನವನ್ನಾಗಿ ಆಚರಿಸುತ್ತಾ ಬಂದಿದ್ದು, ರಾಷ್ಟಿçÃಯ ಡೆಂಗ್ಯೂ ದಿನವನ್ನು ಡೆಂಗ್ಯೂ ತಡೆಗಟ್ಟುವ ದಿನ ಎಂದು ಕರೆಯಲಾಗಿದ್ದು, ಈ ವರ್ಷದ ಘೋಷವಾಕ್ಯ ಡೆಂಗ್ಯೂ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳಿ ಎಂಬುದಾಗಿದೆ.

ಡÉAಗ್ಯೂ ಮತ್ತು ಚಿಕೂನ್ ಗುನ್ಯ ರೋಗಗಳು ಒಂದೇ ನಾಣ್ಯದ ಮುಖಗಳಾಗಿದ್ದು ವೈರಾಣುವಿನಿಂದ ಬರುವ ಖಾಯಿಲೆಗಳು. ಇವು ಸೋಂಕಿತ ಈಡೀಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಮನೆಗಳಲ್ಲಿ ಶೇಖರಿಸುವ ಶುದ್ಧ ನೀರಿನ ತಾಣಗಳಲ್ಲಿ ಮೊಟ್ಟೆಯಿಟ್ಟು ಲಾರ್ವಾಗಳಾಗಿ ರೂಪ ಆಗಿ ಪ್ರೌಢ ಸೊಳ್ಳೆಗಳಾಗಿ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಡೆಂಗ್ಯೂ ಜ್ವರವು ಒಂದು ಮಾರಣಾಂತಿಕವಾದ ಖಾಯಿಲೆ. ಆದರೆ ಚಿಕೂನ್ ಗುನ್ಯಾ ಮಾರಣಾಂತಿಕವಲ್ಲ.

ರೋಗ ಲಕ್ಷಣಗಳು

ಡೆಂಗ್ಯೂ ಜ್ವರ: ತೀವ್ರ ಜ್ವರ, ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖAಡ ಮತ್ತು ಕೀಲುಗಳಲ್ಲಿ ನೋವು ಹಾಗೂ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ರಕ್ತ ಸ್ರಾವದ ಗಂದೆಗಳು.

ಚಿಕಿತ್ಸೆ

ಡೆAಗ್ಯೂ ಮತ್ತು ಚಿಕೂನ್ ಗುನ್ಯಾ ರೋಗಗಳಿಗೆ ನಿರ್ದಿಷ್ಟವಾದ ಯಾವುದೇ ಚಿಕಿತ್ಸೆ ಇರುವುದಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆಯನ್ನು ವೈದ್ಯರ ಸಲಹೆಯಂತೆ ಸಕಾಲದಲ್ಲಿ ಪಡೆದರೆ ಮುಂದಾಗಬಹುದಾದ ತೊಂದರೆ ಮತ್ತು ಸಾವನ್ನು ತಪ್ಪಿಸಬಹುದು.

ಮುನ್ನೆಚ್ಚರಿಕೆಯೇ ಮದ್ದು: ಈ ಎರಡು ಖಾಯಿಲೆಗಳು ಸೊಳ್ಳೆಗಳ ಕಚ್ಚುವಿಕೆಯಿಂದ ಬರುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಮಾಡಬೇಕು. ಈ ಸೊಳ್ಳೆಗಳು ಸಾಮಾನ್ಯವಾಗಿ ಮನೆಯಲ್ಲಿರುವ ನೀರು ಶೇಖರಣೆಯ ಸಿಮೆಂಟ್ ತೊಟ್ಟಿಗಳು, ಬ್ಯಾರಲ್‌ಗಳು, ಡ್ರಂಗಳು, ಹೂವಿನ ಕುಂಡಗಳು, ಏರ್ ಕೂಲರ್ ಮತ್ತು ಮನೆ ಸುತ್ತಮುತ್ತ ಬಿಸಾಡಿದ ಪಿಂಗಾಣಿ ವಸ್ತುಗಳು, ಪ್ಲಾಸ್ಟಿಕ್ ಪಾದಾರ್ಥಗಳು, ಟೈರುಗಳು, ಒಡೆದ ಬಾಟಲಿಗಳು, ಎಳೆನೀರಿನ ಚಿಪ್ಪು ಮತ್ತು ಒಳಕಲ್ಲು ಸೇರಿದಂತೆ ಬಿಸಾಡಿದ ವಸ್ತುಗಳಲ್ಲಿ ಮಳೆ ನೀರು ಮತ್ತು ಇತರ ನೀರು ಸಂಗ್ರಹವಾದಾಗ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಉತ್ಪತ್ತಿಗೆ ಅವಕಾಶ ನೀಡದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಗಳಾಗಿರುತ್ತದೆ.

ರೋಗ ನಿಯಂತ್ರಣ ಕ್ರಮಗಳೇನು

೧. ನೀರಿನ ತೊಟ್ಟಿ ಮತ್ತು ಪ್ಲಾಸ್ಟಿಕ್ ಡ್ರಂಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಚೆನ್ನಾಗಿ ಉಜ್ಜಿ ತೊಳೆದು ನೀರು ತುಂಬಿಸುವುದು ಮತ್ತು ಭರ್ತಿ ಮಾಡಿದ ನಂತರ ಸರಿಯಾದ ಮುಚ್ಚಳದಿಂದ ಮುಚ್ಚುವುದು.

೨. ಬಯಲಿನಲ್ಲಿ ಟೈರುಗಳನ್ನು, ಒಡೆದ ಬಾಟಲಿಗಳು, ಎಳೆನೀರಿನ ಚಿಪ್ಪು ಮತ್ತು ಒಳಕಲ್ಲು ಬಿಸಾಡದೆ ಅವುಗಳಲ್ಲಿ ನೀರು ಸಂಗ್ರಹವಾಗದAತೆ ಎಚ್ಚರ ವಹಿಸುವುದು.

೩. ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಬಿಸಾಡದೆ ಇವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮತ್ತು ಸೂಕ್ತ ವಿಲೇವಾರಿ ಮಾಡುವುದು.

೪. ಈಡೀಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ನಿದ್ದೆ ಮಾಡುವ ಮಕ್ಕಳು, ಗರ್ಭಿಣಿಯರು, ಮತ್ತು ವೃದ್ಧರು ತಪ್ಪದೇ ಹಗಲು ಮತ್ತು ರಾತ್ರಿ ವೇಳೆ ಸೊಳ್ಳೆಪರದೆಯನ್ನು ಬಳಸುವುದು ಮತ್ತು ಮೈ ತುಂಬ ಬಟ್ಟೆ ಧರಿಸುವುದು ಹಾಗೂ ಸೊಳ್ಳೆ ರಕ್ಷಣಾತ್ಮಕ ವಿಧಾನಗಳನ್ನು ಬಳಸುವುದು.

೫. ಯಾವುದೇ ಜ್ವರವಿರಲಿ ತಕ್ಷಣವೇ ಸಮೀಪದ ವೈದ್ಯರಲ್ಲಿ ತೋರಿಸಿಕೊಳ್ಳುವುದು.

೬. ಲಾರ್ವಾಹಾರಿ ಮೀನುಗಳನ್ನು ನಿರಂತರ ನೀರು ನಿಲ್ಲುವ ಕೆರೆ, ಕುಂಟೆ, ಬಾವಿ, ಹಳ್ಳ, ಕಲ್ಯಾಣಿಗಳು, ನೀರಿನ ಝರಿಗಳಲ್ಲಿ ಲಾರ್ವಾಹಾರಿ ಮೀನುಗಳ ಸಾಕಾಣಿಕ ತೊಟ್ಟಿಗಳನ್ನು ನಿರ್ಮಿಸಿ ಲಾರ್ವಾಗಳನ್ನು ತಿನ್ನುವ ಗಪ್ಪಿ ಮತ್ತು ಗ್ಯಾಂಬೂಸಿಯಾ ಮೀನುಗಳನ್ನು ಬಿಡಬೇಕು.

೭. ಉಪಯೋಗಕ್ಕೆ ಬಾರದ ನೀರಿನ ಪ್ರದೇಶಗಳು ಕಂಡುಬAದರೆ ಟೆಮಿಫಾಸ್ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು.

೮. ಪಟ್ಟಣ ಪ್ರದೇಶಗಳಲ್ಲಿ ಗ್ಯಾರೇಜು ಮತ್ತು ವಾಹನ ದುರಸ್ತಿ ಪ್ರದೇಶಗಳಲ್ಲಿ ಟೈರಗಳನ್ನು ಹೊರಾಂಗಣದಲ್ಲಿ ಇರಿಸದೇ ಸೂಕ್ತ ವಿಲೇವಾರಿ ಮಾಡಲು ಕ್ರಮ ವಹಿಸುವುದು.

೯. ಡೆಂಗ್ಯೂ ಜ್ವರ ತೀವ್ರವಾಗಿದ್ದರೆ ಇಂಟ್ರಾವೆನಸ್ ದ್ರವ (ಐವಿ) ಪೂರಕ ಮತ್ತು ತೀವ್ರ ನಿರ್ಜಲೀಕರಣದಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ವರ್ಗಾವಣೆಯು ಅವಶ್ಯವಾಗಿರುತ್ತದೆ. ರೋಗಿಯ ಆರೋಗ್ಯ ಸ್ಥಿತಿಗಳನ್ನು ಅವಲೋಕಿಸಿ ವೈದ್ಯರು ಚಿಕಿತ್ಸೆ ನೀಡುತ್ತಾರೆ.

ರಾಜ್ಯದಲ್ಲಿ ಮುಂಗಾರು ಆರಂಭವಾಗುತ್ತಿದ್ದAತೆ ಡೆಂಗ್ಯೂ ಪ್ರಕರಣಗಳು ಏರುಗತಿ ಪಡೆಯುತ್ತಿದ್ದು, ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಹತೋಟಿ ಕಾರ್ಯಕ್ರಮದಲ್ಲಿ ಈಡೀಸ್ ಸೊಳ್ಳೆಗಳ ಉತ್ಪತ್ತಿ ತಾಣಗಳ ಸಮೀಕ್ಷೆ ಹಾಗೂ ನಾಶ ಮಾಡುವುದು ಬಹಳ ಮುಖ್ಯವಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸರ್ವೇಕ್ಷಣ ಘಟಕದ ಮೂಲಕ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ, ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಈ ಚಟುವಟಿಕೆಗಳಿಂದ ಆರೋಗ್ಯ ಇಲಾಖೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ನಿಗದಿತವಾಗಿ ಹಾಗೂ ನಗರ ಪ್ರದೇಶಗಳಲ್ಲಿ ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶುಕ್ರವಾರ ಮನೆ-ಮನೆ ಭೇಟಿ ಮೂಲಕ ಜನರಲ್ಲಿ ಜಾಗೃತಿ ಮತ್ತು ಮನೆಯ ಒಳಗುತ್ತು ಹೊರಗಿನ ಎಲ್ಲಾ ನೀರಿನ ತಾಣಗಳಗಳಲ್ಲಿ ಲಾರ್ವಾಗಳು ಉತ್ಪತ್ತಿ ಆಗದಂತೆ ಮತ್ತು ಅಂತಹ ನೀರಿನ ತಾಣಗಳನ್ನು ನಿರ್ಮೂಲನೆ ಮಾಡಲಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, (ಮಡಿಕೇರಿ ತಾಲೂಕು-೫, ಸೋಮವಾರಪೇಟೆ ತಾಲೂಕು-೧೫, ವೀರಾಜಪೇಟೆ ತಾಲೂಕು-೨೨.) ಕಳೆದ ವರ್ಷ ೨೦೨೩ರ ಜನವರಿಯಿಂದ ಮೇವರೆಗೆ ೧೬ ಡೆಂಗ್ಯೂ ಪ್ರಕಟಣಗಳು ವರದಿಯಾಗಿದ್ದು, ಈ ಬಾರಿಯ ನಿಯಂತ್ರಣದಲ್ಲಿ ಕೊಡಗು ಜಿಲ್ಲಾ ಸರ್ವೇಕ್ಷಣಾ ಘಟಕ ಮುಂಜಾಗ್ರತಾ ಕ್ರಮಗಳ ಅನುಸರಣೆಗಾಗಿ ಹಲವಾರು ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಕಾರ್ಯಮಗ್ನರಾಗಿದ್ದಾರೆ. ಜನರು ರೋಗದ ಪರಿಣಾಮಗಳನ್ನು ಗ್ರಹಿಸಲು ಮತ್ತು ಅದರ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ರೋಗದ ಲಕ್ಷಣಗಳು, ಕಾರಣಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ತಿಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ಸಾರ್ವಜನಿಕ ಶಿಕ್ಷಣ ಮತ್ತು ರೋಗದ ಕಣ್ಗಾವಲುಗಾಗಿ ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಆದರೂ ಸಂಪೂರ್ಣ ನಿಯಂತ್ರಣ ಕೆವಲ ಆರೋಗ್ಯ ಇಲಾಖೆಯಿಂದ ಸಾಧ್ಯವಾಗದೇ ಸಹ ಇಲಾಖೆಗಳ ಸಹಕಾರ ಮತ್ತು ಸಾರ್ವಜನಿಕರ ಸಹಕಾರದಿಂದ ಮಾತ್ರ ಇಂತಹ ಖಾಯಿಲೆಗಳನ್ನು ನಿರ್ಮೂಲನೆ ಮಾಡಲು ಸಾಧ್ಯ.

- ಜಿ.ವಿ. ಶ್ರೀನಾಥ್. ಗಾವಡಗೆರೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಡಿಕೇರಿ, ಮೊ. ೯೯೦೦೯೨೭೨೫೯