ಕರಿಕೆ, ಮೇ ೧೫ : ಕೊಡಗು ಅರಣ್ಯ ವೃತ್ತದ ವೀರಾಜಪೇಟೆ ಉಪವಿಭಾಗದ ಮುಂಡ್ರೋಟ್ ವಲಯದ ಮುರುಕುಮೊಟ್ಟೆ ಉಪವಲಯದ ಮುಂದಾರೆ ಮಲೆಯ ತಲಕಾವೇರಿ ವನ್ಯಧಾಮದ ಅಂಚಿನಲ್ಲಿ ಮರಕಡಿತಲೆ ಪ್ರಕರಣಕ್ಕೆ ಸಂಬAಧಿಸಿದAತೆ ಕರ್ತವ್ಯ ಲೋಪ ಎಸಗಿದ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಹಾಗೂ ಮರ ಕಡಿದ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕರ್ನಾಟಕ ಸರಕಾರದ ಅರಣ್ಯ ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.

ಈ ಬಗ್ಗೆ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆಯ ಮುಖ್ಯಸ್ಥರಿಗೆ ಪತ್ರ ರವಾನಿಸಿರುವ ಅವರು, ಕೊಡಗು ಜಿಲ್ಲೆಯ ಕೇರಳ ಗಡಿ ಭಾಗದ ತಲಕಾವೇರಿ ಅಭಯಾರಣ್ಯದ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಸಾವಿರಾರು ಮರಗಳ ಅಕ್ರಮ ಕಡಿತಲೆ ಆಗಿರುವ ಕುರಿತಂತೆ ನಾಡಿನ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಸಚಿತ್ರ ಸಹಿತ ವರದಿ ಪ್ರಕಟವಾಗಿದ್ದು, ಸಾವಿರಾರು ಮರಗಳ ಅಕ್ರಮ ಹನನ ಆಗಿದ್ದರೂ ಅರಣ್ಯ ಸಚಿವರ ಕಾರ್ಯಾಲಯಕ್ಕೆ ಕೂಡಲೇ ಮಾಹಿತಿ ನೀಡದೇ ಇರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿದ್ದಾರೆ.

ವೃಕ್ಷ ಸಂಪತ್ತು ಮತ್ತು ವನ್ಯ ಸಂಪತ್ತನ್ನು ರಕ್ಷಿಸಬೇಕಾದದ್ದು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಹಾಗೂ ಅಧೀನ ಸಿಬ್ಬಂದಿಗಳ ಆದ್ಯ ಕರ್ತವ್ಯ ಆಗಿರುತ್ತದೆ. ಮಾಧ್ಯಮಗಳಲ್ಲಿ ಮರಗಳ ಅಕ್ರಮ ಹನನ ಕುರಿತು ಪ್ರಕಟವಾದ ವರದಿಯನ್ನು ಮೇ ೧೦ ರಂದು ಸಿಸಿಎಫ್‌ಗಳು ಸದಸ್ಯರಾಗಿರುವ ವಾಟ್ಸಪ್ ಗ್ರೂಪ್‌ನಲ್ಲಿ ಸಚಿವರ ಕಚೇರಿ ಆಪ್ತ ಸಿಬ್ಬಂದಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದರೂ ಸಚಿವರ ಕಾರ್ಯಾಲಯಕ್ಕೆ ಯಾವುದೇ ಮಾಹಿತಿ ನೀಡಲಾಗಿರುವುದಿಲ್ಲ, ಇದು ಕರ್ತವ್ಯ ನಿರ್ಲಕ್ಷö್ಯ ಮತ್ತು ಕರ್ತವ್ಯ ಲೋಪವಾಗಿರುತ್ತದೆ. ಕೂಡಲೇ ಎಪಿಸಿಸಿಎಫ್ ದರ್ಜೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ, ಎಷ್ಟು ಮರಗಳನ್ನು ಕಡಿಯಲಾಗಿದೆ ಎಂಬ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ವಾಸ್ತವ ವರದಿಯನ್ನು ಜಿಪಿಎಸ್ ಸಹಿತ, ವೀಡಿಯೋ ಸಹಿತ ೩ ದಿನಗಳ ಒಳಗಾಗಿ ಈ ಕಚೇರಿಗೆ ಸಲ್ಲಿಸಲು ಮತ್ತು ನಿರ್ಲಕ್ಷö್ಯ ವಹಿಸಿರುವ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕಾನೂನು ರೀತ್ಯಾ ಶಿಸ್ತು ಕ್ರಮ ಜರುಗಿಸಲು ಹಾಗೂ ಅನುಮತಿ ಇಲ್ಲದೆ ಮರ ಕಡಿದ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಚಿವರು ಆದೇಶಿಸಿದ್ದಾರೆ. ಈ ಪ್ರಕರಣದ ಕುರಿತು ಮೇ ೧೦ ರಂದು ‘ಶಕ್ತಿ’ ವಿಸ್ತಾರವಾದ ವರದಿ ಪ್ರಕಟಿಸಿತ್ತು. ಈ ಸುದ್ದಿ, ಮೇ ೧೦ರಂದು ಸಚಿವರ ಕಚೇರಿ ಸಿಬ್ಬಂದಿಯು ಹಿರಿಯ ಅರಣ್ಯ ಅಧಿಕಾರಿಗಳ ವಾಟ್ಸಾö್ಯಪ್ ಗುಂಪಿನಲ್ಲಿ ಹಂಚಿಕೊAಡಿರುವ ವಿಚಾರವನ್ನು ಅರಣ್ಯ ಸಚಿವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬುಧವಾರ, ಘಟನೆ ನಡೆದ ಸ್ಥಳಕ್ಕೆ ಅರಣ್ಯ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ತೆರಳಿ ಜಂಟಿ ಸರ್ವೆ ನಡೆಸಿರುವ ಬಗ್ಗೆ ‘ಶಕ್ತಿ’ಗೆ ತಿಳಿದು ಬಂದಿದೆ.

-ಸುಧೀರ್ ಹೊದ್ದೆಟ್ಟಿ