ಮಡಿಕೇರಿ, ಮೇ ೧೪: ಉದಯೋನ್ಮುಖ ಕ್ರೀಡಾ ಪ್ರತಿಭೆ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಇದೀಗ ತಮ್ಮ ಕ್ರೀಡಾ ಸಾಧನೆಗೆ ಹೊಸದೊಂದು ಗರಿ ಮೂಡಿಸಿ ಕೊಂಡಿದ್ದಾರೆ.

೧೮ರ ವಯೋಮಿತಿಯಲ್ಲಿ ಉನ್ನತಿ ಇದೀಗ ಸೀನಿಯರ್ ವಿಮೆನ್ಸ್ ವಿಭಾಗದಲ್ಲಿ ಸ್ಪರ್ಧಿಸಿ ೨೦೦ ಮೀಟರ್ ಹರ್ಡಲ್ಸ್ನಲ್ಲಿ ಸೀನಿಯರ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕದ ಸಾಧನೆ ಮಾಡಿರುವುದು ವಿಶೇಷವಾಗಿದೆ.

ಭುವನೇಶ್ವರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಫೆಡರೇಷನ್ ಕಪ್ ಕ್ರೀಡಾಕೂಟದಲ್ಲಿ ಉನ್ನತಿ ಸ್ಪರ್ಧಿಸಿ ೨೦೦ ಮೀರ‍್ಸ್ ಹರ್ಡಲ್ಸ್ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಅಂತರವನ್ನು ೨೩.೮೫ ಸೆಕೆಂಡ್‌ನಲ್ಲಿ ಕ್ರಮಿಸುವ ಮೂಲಕ ವೃತ್ತಿ ಜೀವನದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ೨೦೨೪ರ ಆಗಸ್ಟ್ನಲ್ಲಿ ಪೆರುವಿನಲ್ಲಿ ನಡೆಯಲಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ಗೆ ಇವರು ಅರ್ಹತೆಗಳಿಸಿದ್ದು, ದೇಶವನ್ನು ಪ್ರತಿನಿಧಿಸಲಿದ್ದಾರೆ.

(ಮೊದಲ ಪುಟದಿಂದ) ಇತ್ತೀಚೆಗೆ ದುಬೈಯಲ್ಲಿ ನಡೆದ ಜೂನಿಯರ್ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ೧೦೦ ಮೀಟರ್ ಹರ್ಡಲ್ಸ್ನಲ್ಲಿ ಇವರು ಕಂಚಿನ ಪದಕಗಳಿಸಿದ್ದರು. ಇದೀಗ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ೨೦೦ ಮೀಟರ್ ಹಾಗೂ ೧೦೦ ಮೀಟರ್ ಹರ್ಡಲ್ಸ್ ಈ ಎರಡೂ ವಿಭಾಗದಲ್ಲೂ ಇವರು ಸ್ಪರ್ಧಿಸಲಿದ್ದಾರೆ. ಉನ್ನತಿ ಮೂಲತಃ ಮಡಿಕೇರಿ ನಿವಾಸಿ ರಾಷ್ಟಿçÃಯ ಅಥ್ಲೆಟಿಕ್ ಕೋಚ್ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ ದಂಪತಿಯ ಪುತ್ರಿ.