ಸೋಮವಾರಪೇಟೆ, ಮೇ ೧೪: ಪೊಲೀಯೋ ವಿರುದ್ಧ ಸಂಘಟಿತ ಹೋರಾಟ ನಡೆಸಿ, ದೇಶದಿಂದ ನಿರ್ಮೂಲನೆ ಮಾಡುವಲ್ಲಿ ಯಶಸ್ಸು ಕಂಡಿರುವ ಅಂತರಾಷ್ಟಿçÃಯ ಸಂಘಟನೆಯಾದ ರೋಟರಿಯಿಂದ ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯ ೧೦೦ಕ್ಕೂ ಅಧಿಕ ಅಂಗನವಾಡಿಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ರೋಟರಿ ಜಿಲ್ಲಾ ಗವರ್ನರ್ ಡಿ.ಜಿ. ಕೇಶವ್ ಹೇಳಿದರು.

ಸೋಮವಾರಪೇಟೆ ರೋಟರಿ ಸಂಸ್ಥೆಗೆ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ರೋಟರಿ ಸದಸ್ಯರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಹಿಂದೆ ಇದ್ದ ‘ಮನೆಯೇ ಮೊದಲ ಪಾಠಶಾಲೆ- ತಾಯಿಯೇ ಮೊದಲ ಗುರು’ ಎಂಬ ಮಾತು ಇತ್ತೀಚಿನ ದಿನಗಳಲ್ಲಿ ದೂರವಾಗುತ್ತಿದೆ. ಮಕ್ಕಳನ್ನು ಎಳೆಯ ವಯಸ್ಸಿನಲ್ಲಿಯೇ ಅಂಗನವಾಡಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆ ‘ಅಂಗನವಾಡಿಯೇ ಮೊದಲ ಪಾಠಶಾಲೆ-ಅಂಗನವಾಡಿ ಶಿಕ್ಷಕಿಯೇ ಮೊದಲ ಗುರು’ ಎಂಬAತಾಗಿದೆ ಎಂದರು.

ಈ ವಾಸ್ತವತೆಯನ್ನು ಅರಿತು ರೋಟರಿ ಸಂಸ್ಥೆಯು ೩೧೮೧ರ ರೋಟರಿ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ೧ ಸಾವಿರ ಅಂಗನವಾಡಿಗಳ ಅಭಿವೃದ್ಧಿಗೆ ಕಾರ್ಯಯೋಜನೆ ತಯಾರಿಸುತ್ತಿದೆ. ಅದರಂತೆ ಕೊಡಗಿನಲ್ಲೂ ೧೦೦ಕ್ಕೂ ಅಧಿಕ ಅಂಗನವಾಡಿಗಳ ಅಭಿವೃದ್ಧಿಗೆ ಚಿಂತನೆ ಹರಿಸಿದೆ ಎಂದರು.

ಈಗಿರುವ ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದು, ಕಟ್ಟಡ ದುರಸ್ತಿ, ಶೌಚಾಲಯ, ಆಟೋಪಕರಣ, ಪೀಠೋಪಕರಣ, ಲೇಖನ ಸಾಮಾಗ್ರಿ, ಅಡುಗೆ ಒಲೆ, ಪಾತ್ರೆಗಳು, ಬಾಲಸ್ನೇಹಿ ಕಲಿಕೋಪಕರಣ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಸೋಮವಾರಪೇಟೆ ರೋಟರಿ ಸಂಸ್ಥೆ ಈವರೆಗೂ ಉತ್ತಮ ಸೇವೆಗಳನ್ನು ಮಾಡುತ್ತಾ ಬಂದಿದೆ. ಅತ್ಯುತ್ತಮ ರೋಟರಿ ಭವನವನ್ನೂ ನಿರ್ಮಿಸಿದೆ. ಬಸ್ ತಂಗುದಾಣ, ಸಿಲಿಕಾನ್ ಚೇಂಬರ್‌ಗಳ ಅಳವಡಿಕೆ, ಆರೋಗ್ಯ, ಶಿಕ್ಷಣ, ಸಾಮಾಜಿಕ, ಪ್ರವಾಸೋದ್ಯಮ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದೆ. ಸೋಮವಾರಪೇಟೆ ರೋಟರಿ ಸಂಸ್ಥೆಯಿAದ ಸಾರ್ವಜನಿಕ ಉದ್ದೇಶಕ್ಕಾಗಿ ಶೀಥಲೀಕರಣ ಯಂತ್ರದ ಶವಪೆಟ್ಟಿಗೆಯನ್ನು ನೀಡುವ ಯೋಜನೆಯಿದೆ ಎಂದರು.

ಗೋಷ್ಠಿಯಲ್ಲಿ ಸಹಾಯಕ ಪೀಠೋಪಕರಣ, ಲೇಖನ ಸಾಮಾಗ್ರಿ, ಅಡುಗೆ ಒಲೆ, ಪಾತ್ರೆಗಳು, ಬಾಲಸ್ನೇಹಿ ಕಲಿಕೋಪಕರಣ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಸೋಮವಾರಪೇಟೆ ರೋಟರಿ ಸಂಸ್ಥೆ ಈವರೆಗೂ ಉತ್ತಮ ಸೇವೆಗಳನ್ನು ಮಾಡುತ್ತಾ ಬಂದಿದೆ. ಅತ್ಯುತ್ತಮ ರೋಟರಿ ಭವನವನ್ನೂ ನಿರ್ಮಿಸಿದೆ. ಬಸ್ ತಂಗುದಾಣ, ಸಿಲಿಕಾನ್ ಚೇಂಬರ್‌ಗಳ ಅಳವಡಿಕೆ, ಆರೋಗ್ಯ, ಶಿಕ್ಷಣ, ಸಾಮಾಜಿಕ, ಪ್ರವಾಸೋದ್ಯಮ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದೆ. ಸೋಮವಾರಪೇಟೆ ರೋಟರಿ ಸಂಸ್ಥೆಯಿAದ ಸಾರ್ವಜನಿಕ ಉದ್ದೇಶಕ್ಕಾಗಿ ಶೀಥಲೀಕರಣ ಯಂತ್ರದ ಶವಪೆಟ್ಟಿಗೆಯನ್ನು ನೀಡುವ ಯೋಜನೆಯಿದೆ ಎಂದರು.

ಗೋಷ್ಠಿಯಲ್ಲಿ ಸಹಾಯಕ ರಾಜ್ಯಪಾಲ ಎಂ.ಡಿ. ಲಿಖಿತ್, ಪದಾಧಿಕಾರಿಗಳಾದ ಉಲ್ಲಾಸ್ ಕೃಷ್ಣ, ರೋಟರಿ ಅಧ್ಯಕ್ಷ ನಂಗಾರು ವಸಂತ್, ಕಾರ್ಯದರ್ಶಿ ಚೇತನ್, ಮುಂದಿನ ಸಾಲಿನ ನಿಯೋಜಿತ ಅಧ್ಯಕ್ಷ ಜೆ.ಕೆ. ಹೊನ್ನಪ್ಪ, ಕಾರ್ಯದರ್ಶಿ ಬಿದ್ದಪ್ಪ, ಮಾಜಿ ಅಧ್ಯಕ್ಷ ಪಿ.ಕೆ. ರವಿ ಅವರುಗಳು ಉಪಸ್ಥಿತರಿದ್ದರು.