ಸಿದ್ದಾಪುರ, ಮೇ ೧೪: ಮಂಗಳವಾರದAದು ತಿತಿಮತಿ ವಲಯ ಅರಣ್ಯ ಇಲಾಖೆ ವತಿಯಿಂದ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಬಾಡಗ ಬಾಣಂಗಾಲದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಲ್ಲಿ ಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಯು ಡಿಸಿಎಫ್ ಜಗನ್ನಾಥ ನೇತೃತ್ವದಲ್ಲಿ ನಡೆಯಿತು. ಮರಿಗಳೊಂದಿಗಿರುವ ತಲಾ ೨೨ ಕಾಡಾನೆಗಳ ಎರಡು ಹಿಂಡುಗಳನ್ನು ಗುರಿಯಾಗಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಗೆ ಇಳಿದಿದ್ದು ಕಾಡಾನೆಗಳು ಅತ್ತಿತ್ತ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಿಲೋಮೀಟರ್ ಗಟ್ಟಲೆ ನಡೆದು ಸುಸ್ತಾದರು.

ಆರು ಸಾಕಾನೆ, ನೂರು ಸಿಬ್ಬಂದಿ: ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಗುಂಪಿನಲ್ಲಿರುವ ಮೂರು ಕಾಡಾನೆಗಳನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸುವ ನಿಟ್ಟಿನಲ್ಲಿ ತಿತಿಮತಿ ವಲಯ ಅರಣ್ಯ ಇಲಾಖೆಯ ಸುಮಾರು ನೂರು ಸಿಬ್ಬಂದಿ, ದುಬಾರೆ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ನೇತೃತ್ವದಲ್ಲಿ ಹರ್ಷ, ಅಶ್ವತ್ಥಾಮ, ಭೀಮ, ಧನಂಜಯ, ಮಹೇಂದ್ರ ಸಾಕಾನೆಗಳ ಸಹಕಾರದಿಂದ ಕಾರ್ಯಾಚರಣೆ ನಡೆಯಿತು. ಆಕಾಂಕ್ಷ ಮತ್ತು ಮೀರ ಎಂಬ ಎರಡು ಕಾಡಾನೆಗಳಿಗೆ ಮಾತ್ರ ರೇಡಿಯೋ ಕಾಲರ್ ಅಳವಡಿಸಲು ಇಲಾಖೆ ಮುಂದಾಗಿದೆ. ಉಳಿದಂತೆ ದಕ್ಷ ಎಂಬ ಕಾಡಾನೆಯು ಅರಣ್ಯದಂಚಿನಲ್ಲಿರುವುದರಿAದ ಬುಧವಾರದಂದು ಎರಡನೇ ಕಾರ್ಯಾಚರಣೆ ನಡೆಸಲಾಗುವು ದೆಂದು ಇಲಾಖೆ ತಿಳಿಸಿದೆ.

ಈಗಾಗಲೇ ಉಷಾ ಹಾಗೂ ದಕ್ಷ ಕಾಡಾನೆಗಳಿಗೆ ಕಾಲರ್ ಅಳವಡಿಸಲಾಗಿದ್ದು ಅದರಲ್ಲಿ ದಕ್ಷ ಎಂಬ ಕಾಡಾನೆಯ ರೇಡಿಯೋ ಕಾಲರ್ ಕಳೆದ ಕೆಲವು ದಿನಗಳಿಂದ ಕಳಚಿದೆ. ಈ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುವುದು.

೨೦ ಕ್ಕೂ ಅಧಿಕ ಸಂಖ್ಯೆಯಲ್ಲಿ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗ ಮೂರು ಗುಂಪುಗಳಲ್ಲಿ ಮೂರರಲ್ಲೂ ಸಣ್ಣ ಮರಿಗಳಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ವೇಳೆ ಕಾಡಾನೆಗಳ ಹಿಂಡು ಗಾಬರಿಗೊಂಡು ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಓಡುತ್ತಿರುವುದು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಕಾಡಾನೆಗಳಿಗೆ ಅಳವಡಿಸುವ ರೇಡಿಯೋ ಕಾಲರ್ ದೆಹಲಿಯ ಪ್ರತಿಷ್ಠಿತ ಸಂಸ್ಥೆಯಿAದ ಖರೀದಿಸ ಲಾಗುತ್ತದೆ. ಒಂದು ರೇಡಿಯೋ ಕಾಲರ್ ಬೆಲೆ ೨ ಲಕ್ಷದ ೭೫ ಸಾವಿರ ಎಂದು ಅಂದಾಜಿಸಲಾಗಿದೆ.

ತಿತಿಮತಿ, ವೀರಾಜಪೇಟೆ ವಲಯದಲ್ಲಿ ೧೭ ಹೆಚ್‌ಇಸಿ ತಂಡವನ್ನು ಕಾಡಾನೆಗಳ ಚಲನವಲನಗಳನ್ನು ಪತ್ತೆ ಹಚ್ಚಿ ಶೀಘ್ರವಾಗಿ ಕಾರ್ಯಾಚರಣೆ ನಡೆಸುವ ಸಲುವಾಗಿ ರಚಿಸಲಾಗಿದೆ. ಆರು ಗ್ರಾಮಗಳಿಗೆ ಒಂದು ತಂಡ ಕಾರ್ಯನಿರ್ವಹಿಸಲಿದೆ. ತಂಡದಲ್ಲಿ ಸುಮಾರು

(ಮೊದಲ ಪುಟದಿಂದ) ೫ ರಿಂದ ೧೦ ಮಂದಿ ಇದಲ್ಲಿದ್ದು, ಒಂದು ತಂಡದಲ್ಲಿ ಒಂದು ವಾಕಿ ಟಾಕಿ, ಕೋವಿ, ಒಂದು ವಾಹನ ಇರಲಿದೆ. ಈ ತಂಡವು ಸಿಸಿಎಫ್ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಲಿದೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಮಟದಲ್ಲಿ ಆಯಿಷಾ ಎಂಬ ಮಹಿಳೆಯನ್ನು ಕೊಂದಿದ್ದ ದಕ್ಷ ಎಂಬ ಕಾಡಾನೆಗೆ ಕಾಲರ್ ಅಳವಡಿಸಲಾಗಿತ್ತು. ಆದರೆ ಕಾಲರ್ ಕಳಚಿ ಹೋಗಿದ್ದ ಕಾರಣದಿಂದ ಇದೀಗ ಮತ್ತೊಮ್ಮೆ ರೇಡಿಯೋ ಕಾಲರ್ ಅಳವಡಿಸಲು ಇಲಾಖೆ ಮುಂದಾಗಿದೆ ಅಲ್ಲದೆ ಈ ಕಾಡಾನೆಯನ್ನು ಸೆರೆ ಹಿಡಿದು ನಾಗರಹೊಳೆಗೆ ಸ್ಥಳಾಂತರಿಸಲಾಗುತ್ತದೆ.

ತಾ೧೫ ರಂದು (ಇಂದು) ಕೂಡ ಕಾರ್ಯಚರಣೆ ಮುಂದುವರಿಸ ಲಾಗುವುದು ಎಂದು ಡಿಸಿಎಫ್ ಜಗನಾಥ ತಿಳಿಸಿದ್ದಾರೆ. ಕಾರ್ಯಾ ಚರಣೆ ತಂಡದಲ್ಲಿ ತಿತಿಮತಿ ವಿಭಾಗದ ಎಸಿಎಫ್ ಗೋಪಾಲ್, ವೀರಾಜಪೇಟೆ ವಲಯ ಎಸಿಎಫ್ ನೆಹರು, ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್, ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ವನ್ಯಜೀವಿ ವೈದ್ಯಾಧಿಕಾರಿಗಳಾದ ಡಾ. ಚಿಟ್ಟಿಯಪ್ಪ, ಡಾ. ರಮೇಶ್, ಶೂಟರ್ ರಂಜನ್ ಹಾಗೂ ಇತರರು ಇದ್ದರು. ಕಾರ್ಯಾಚರಣೆ ಸ್ಥಳಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- ವರದಿ : ವಾಸು