ಮಾನವ ಜನ್ಮ ಶ್ರೇಷ್ಠ ಜನ್ಮ. ಮಾನವನಷ್ಟು ಬುದ್ಧಿವಂತ ಯಾರೂ ಇಲ್ಲ ಎಂದು ಮಾನವ ಬೀಗುತ್ತಿದ್ದಾನೆ. ರಸ್ತೆಯಲ್ಲಿ ಸಾಗುವ ಗಾಡಿಗಳ ಗಾಲಿಯಿಂದ ಹಿಡಿದು ಚಂದ್ರನಲ್ಲಿ ಉಪಗ್ರಹದ ತನಕ ಸಾಗಿ ಪ್ರಪಂಚದ ಚರಿಷ್ಮಾವನ್ನೇ ಮಾನವಕುಲ ಬದಲಿಸಿದೆ. ಸಕಲ ಜಂತು-ಜೀವಿಗಳಿಗಿAತಲೂ ಅತಿ ಬುದ್ಧಿವಂತ ಮತ್ತು ವಿಕಸಿತ ಪ್ರಾಣಿ ಮನುಷ್ಯ ಎಂದು ಹೇಳಿದರೆ ತಪ್ಪೇನಿಲ್ಲ. ಮನುಷ್ಯನ ನಿರಂಕುಶ ಅಧಿಪತ್ಯ ಈ ಲೋಕಕ್ಕೇ ದಿಗಿಲಾಗುವಂತಹದ್ದು. ಮಾನವನನ್ನು ಈ ತನಕವೂ ಮೀರಿಸಬಲ್ಲ ಶಕ್ತಿ ಹುಟ್ಟಿಲ್ಲ. ಆದರೆ ಮುಂದೆಯೂ ಹುಟ್ಟೋದಿಲ್ಲ... ಎಂದು ಹೇಳಲು ಕಷ್ಟ ಸಾಧ್ಯ. ಏಕೆಂದರೆ ಮನುಷ್ಯನ ಅತಿ ಬುದ್ಧಿವಂತಿಕೆ, ಇತಿಮಿತಿ ಮೀರಿದ ಮಹತ್ವಾಕಾಂಕ್ಷೆಯಿAದ ಬುದ್ಧಿಮತ್ತೆ ಮತ್ತು ರೋಬಾಟಿಕ್ಸ್ ತಂತ್ರಜ್ಞಾನ ಇಂದು ತಯಾರಾಗಿದೆ.

ಈ ತಂತ್ರಜ್ಞಾನ ನವೀನ ಸಾಧ್ಯತೆಗಳನ್ನು ತೆರೆದಿಡುತ್ತಿದ್ದು, ಇದರಿಂದ ಕ್ಷಿಪ್ರ ಬದಲಾವಣೆಗಳು ಭವಿಷ್ಯದಲ್ಲಿ ಕಾಣಬಹುದಾಗಿದೆ. ಮಾನವನಿಗೆ ಬದಲಿಯಾಗಿ ಪಕ್ವ ರೀತಿಯಲ್ಲಿ ಕೆಲಸವನ್ನು ಲೋಪಗಳಿರದೆ ಮಾಡಲು ರೋಬಾಟ್‌ಗಳು ತಯಾರಾಗುತ್ತಿವೆ. ಇಂದು ಮನೆ ಸ್ವಚ್ಛತೆಗೆ ಕಸ ಗುಡಿಸುವುದರಿಂದ ಹಿಡಿದು ಮಂಗಳನ ಅಂಗಳಕ್ಕೂ ಸಂಶೋಧನೆಗೆAದು ರೋಬಾಟಿಕ್ಸ್ ಬಳಕೆ ಆಗುತ್ತಿದೆ. ಇದು ಮಾನವನಿಗೆ ಮುಂದೊAದು ದಿನ ಕಂಟಕವಾದೀತೇ...?

ಅದೊಂದು ವಿಸ್ತಾರವಾದ ವಿಚಾರ ವಿಶ್ಲೇಷಿಸುವುದಾದರೆ

ಕೃತಕ ಬುದ್ಧಿಮತ್ತೆಯನ್ನು ನಾಲ್ಕನೇ ಕೈಗಾರಿಕಾ ಕ್ರಾಂತಿ ಎಂದು ಕರೆಯಲಾಗುತ್ತದೆ. ಇದನ್ನು ಬಳಸಿ ರೋಬಾಟಿಕ್ಸ್ ಕೂಡ ಭುವಿಯ ವಿವಿಧ ದೇಶಗಳಲ್ಲಿ ಬಳಕೆಯಲ್ಲಿದೆ. ಪ್ರಪಂಚದ ಮೊದಲ ರೋಬಾಟ್ ‘ಯೂನಿಮೆಟ್' ವಿನ್ಯಾಸಗೊಂಡಿದ್ದು, ಅಮೇರಿಕನ್ ಸಂಶೋಧಕರಾದ ಜಾರ್ಜ್ ಡೆವೊಲ್ ಹಾಗೂ ಜೋಸೆಫ್ ಎಂಜಿಲ್‌ಬರ್ಗ್ ಅವರುಗಳಿಂದ ೧೯೫೬ರಲ್ಲಿ ‘ಯೂನಿಮೆಟ್' ಎಂಬ ಹೆಸರಿನಲ್ಲಿ. ಇದು ಕೈಗಾರಿಕೆಯಲ್ಲಿ ಬಿಸಿ ಲೋಹದ ತುಂಡುಗಳನ್ನು ಸಾಗಿಸಲು ಹಾಗೂ ವೆಲ್ಡಿಂಗ್ ಕೆಲಸಕ್ಕೆ ಬಳಸಲಾಗಿತ್ತು. ಈ ಸಂಶೋಧನೆಗೆ ಪ್ರೇರಣೆ ಆಗಿದ್ದು, ಒಂದು ವಿಜ್ಞಾನಿಕ ಕಾದಂಬರಿ ಎಂಬುದು ಅಚ್ಚರಿ ಹುಟ್ಟಿಸುವಂತಹ ವಿಚಾರವಾಗಿದೆ. ಸಂಶೋಧಕರಾದ ಇವರಿಬ್ಬರನ್ನು ಕೂಡ ರೋಬಾಟಿಕ್ಸ್ನ ಪಿತಾಮಹರು ಎಂದು ಕರೆಯಲಾಗುತ್ತದೆ.

ಮೊದಲ ಚಲನಶೀಲ ರೋಬಾಟ್ ‘ಶಕಾಯ್'

ಸ್ಟಾನ್ಫರ್ಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪರಿಶ್ರಮದಿಂದಾಗಿ ಮೊದಲ ಚಲನಶೀಲ ರೋಬಾಟ್ ‘ಶಕಾಯ್' ಎಂಬ ಹೆಸರಿನಲ್ಲಿ ಅಮೇರಿಕಾದಲ್ಲಿ ಸಂಶೋಧಿಸಲ್ಪಟ್ಟಿತ್ತು. ಇದನ್ನು ಟಿವಿ ಕ್ಯಾಮರಾ ಹಾಗೂ ಬಂಪ್ ಸೆನ್‌ಸರ್ ಬಳಸಿ ತಯಾರಿಸಲಾಗಿತ್ತು. ಇದು ಗಂಟೆಗೆ ಕೇವಲ ಎರಡು ಮೀಟರ್ ಚಲಿಸಬಲ್ಲ ಸಾಮರ್ಥ್ಯ ಹೊಂದಿತ್ತು. ಇದು ೧೯೬೬ ರಿಂದ ೧೯೭೨ರ ತನಕ ಕಾರ್ಯ ನಿರ್ವಹಿಸಿತ್ತು.

ಪ್ರಪಂಚದ ಮೊದಲ ಹ್ಯೂಮನಾಯ್ಡ್ ರೋಬಾಟ್: Wಂಃಔಖಿ

ಇದನ್ನು ಜಾರ್ಜ್ ಡೆವೊಲ್ ರಚಿಸಿದ್ದಾರೆ ಮತ್ತು ಮೊದಲ ರೋಬಾಟ್ ಉತ್ಪಾದನಾ ಕಂಪೆನಿಯಾದ ಯೂನಿಮೇಷನ್ ನಿರ್ಮಿಸಿದೆ. ವಾಸೆಡಾ ವಿಶ್ವವಿದ್ಯಾನಿಲಯವು ೧೯೬೭ ರಲ್ಲಿ Wಂಃಔಖಿ ಯೋಜನೆಯನ್ನು ಪ್ರಾರಂಭಿಸಿತು ಮತ್ತು ೧೯೭೨ ರಲ್ಲಿ Wಂಃಔಖಿ-೧ ಅನ್ನು ಪೂರ್ಣಗೊಳಿಸಿತು. ಇದು ವಿಶ್ವದ ಮೊದಲ ಪೂರ್ಣ ಪ್ರಮಾಣದ ಹ್ಯೂಮನಾಯ್ಡ್ ಬುದ್ಧಿವಂತ ರೋಬಾಟ್ ಆಗಿದೆ.

ಭಾರತದ ಮೊದಲ ರೋಬಾಟ್ ‘ಮಾನವ್'

ಮಾನವ್ ಎಂಬ ಹೆಸರಿನ ರೋಬಾಟ್, ಭಾರತದ ಮೊದಲ ೩ಆ-ಮುದ್ರಿತ ಹ್ಯೂಮನಾಯ್ಡ್ ರೋಬಾಟ್. ಇದನ್ನು ಂ-Sಇಖಿ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ, ಮಾನವ್ ಕೆಲವೇ ಕಿಲೋಗ್ರಾಂಗಳಷ್ಟು ತೂಗುತ್ತದೆ ಮತ್ತು ಧ್ವನಿ ಸಂಸ್ಕರಣಾ ಸಾಮರ್ಥ್ಯಗಳನ್ನು ಹೊಂದಿದೆ. ಇದನ್ನು ಸಂಶೋಧನಾ ಉದ್ದೇಶಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

‘ಮಾನವ್' ಪುಷ್-ಅಪ್‌ಗಳು, ಹೆಡ್‌ಸ್ಟಾö್ಯಂಡ್‌ಗಳAತಹ ಚಟುವಟಿಕೆಗಳನ್ನು ಮಾಡಬಹುದು ಮತ್ತು ಫುಟ್‌ಬಾಲ್ ಆಡಬಹುದು. ಇದು ವೈಫೈ, ಬ್ಲೂಟೂತ್ ಮತ್ತು ರೀಚಾರ್ಜ್ ಮಾಡಬಹುದಾದ ಲಿಥಿಯಂ ಪಾಲಿಮರ್ ಬ್ಯಾಟರಿಯೊಂದಿಗೆ ಒಂದೇ ಚಾರ್ಜ್ನಲ್ಲಿ ಒಂದು ಗಂಟೆಯವರೆಗೆ ಇರುತ್ತದೆ.

ಭಾರತದಲ್ಲಿನ ಇತರೆ ರೋಬಾಟ್‌ಗಳು ಮಿತ್ರ

‘ಮಿತ್ರ', ಐದು ಅಡಿ ಎತ್ತರದ ಹ್ಯೂಮನಾಯ್ಡ್ ರೋಬಾಟ್ ಅನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಇನ್ವೆಂಟೊ ರೋಬಾಟಿಕ್ಸ್ ರಚಿಸಿದೆ. ಇದನ್ನು ಫೈಬರ್‌ಗ್ಲಾಸ್‌ನಿಂದ ರಚಿಸಲಾಗಿದೆ, ಮಿತ್ರ ಮಾನವ-ರೀತಿಯ ಸಂಭಾಷಣೆಗಳು, ಸಂಚರಣೆ, ಮುಖ ಗುರುತಿಸುವಿಕೆ ಮತ್ತು ಭಾಷಣ ಗುರುತಿಸುವಿಕೆಯಲ್ಲಿ ಉತ್ತಮವಾಗಿದೆ. ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆ ೨೦೨೦ ರ ಸಮಯದಲ್ಲಿ ಇದನ್ನು ಪರಿಚಯಿಸಲಾಗಿದೆ, ಮಾಜಿ ಯುಎಸ್ ಅಧ್ಯಕ್ಷ ಟ್ರಂಪ್ ಮತ್ತು ಭಾರತದ ಪಿಎಂ ಮೋದಿಯಂತಹ ಉನ್ನತ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಮಿತ್ರ ಮನ್ನಣೆಯನ್ನು ಗಳಿಸಿದೆ.

ರೋಬೋಕಾಪ್

ಹೈದರಾಬಾದ್ ಮೂಲದ ಸ್ಟಾರ್ಟ್ಅಪ್ ಊ-ಃoಣs ರೋಬಾಟಿಕ್ಸ್ನಿಂದ ಅಭಿವೃದ್ಧಿಪಡಿಸಲಾಗಿದೆ. ರೋಬೋಕಾಪ್ ಕಾನೂನು, ಸುವ್ಯವಸ್ಥೆ ಮತ್ತು ಟ್ರಾಫಿಕ್ ನಿರ್ವಹಣೆಯನ್ನು ಕಾಪಾಡುವಲ್ಲಿ, ಕಾನೂನು ಜಾರಿಗೊಳಿಸಲು ಸಹಾಯ ಮಾಡುತ್ತದೆ.

ಇದು ಕ್ಯಾಮೆರಾಗಳು ಮತ್ತು ಸಂವೇದಕಗಳ ಶ್ರೇಣಿಯನ್ನು ಹೊಂದಿದೆ, ರೋಬೋಕಾಪ್ ಸ್ವಾಯತ್ತವಾಗಿ ಸಾರ್ವಜನಿಕ ಸ್ಥಳಗಳನ್ನು ಸುರಕ್ಷಿತಗೊಳಿಸುತ್ತದೆ ಮತ್ತು ಬಾಂಬ್ ಪ್ರಸರಣ ಸೇರಿದಂತೆ ಭದ್ರತಾ ಬೆದರಿಕೆಗಳನ್ನು ಸಮರ್ಥವಾಗಿ ನಿಭಾಯಿಸುತ್ತದೆ. ಇದೇ ರೀತಿ ಇನ್ನಷ್ಟು ರೋಬಾಟ್‌ಗಳು ಭಾರತದಲ್ಲಿ ಅನ್ವೆಷಣೆಗೊಂಡಿದೆ.

‘ಐiಜಿe imiಣಚಿಣes ಚಿಡಿಣ' ಎಂಬುದು ನಿಜ?!

ಈವರೆಗೆ ತೆರೆಕಂಡಿರುವ ವಿಶ್ವದ ಹಲವು ಭಾಷೆಗಳ ಸಿನಿಮಾಗಳಲ್ಲಿ ರೋಬಾಟ್ ಮನುಷ್ಯನಿಗೆ ಕಂಟಕವಾದೀತು ಎಂಬAತೆ ಬಿಂಬಿಸಲಾಗಿದೆ. ಮಾನವನಿಗೆ ರೋಬಾಟ್‌ಗಳು ಮುಂದೊAದು ದಿನ ಮಾರಣಾಂತಿಕ ಶಕ್ತಿ ಆಗಬಲ್ಲವು ಎಂಬುದಾಗಿ ತೋರಿಸಲಾಗಿದೆ. ಅದು ಈಗಾಗಲೇ ಹಲವು ನಿದರ್ಶನಗಳಲ್ಲಿ ಸುಳಿವುಗಳಾಗಿ ಮನುಷ್ಯನಿಗೆ ಸಿಕ್ಕಿದೆ.

ಅವುಗಳ್ಯಾವುದೆಂದರೆ,

ಅಲೆಕ್ಸಾ ಅಟ್ಟಹಾಸದ ನಗು!

೨೦೧೮ರಲ್ಲಿ ಆ್ಯಮಜಾನ್ ಎ.ಐ ಅಲೆಕ್ಸಾ ಒಬ್ಬ ಬಳಕೆದಾರನ ಮನೆಯಲ್ಲಿ ಮಧ್ಯ ರಾತ್ರಿ ನಗೋದಕ್ಕೆ ಶುರು ಮಾಡುತ್ತದೆ. ಆ ಬಳಕೆದಾರ ಹಾಗೂ ಮನೆ ಮಂದಿ ಎಲ್ಲಾ ಅಲೆಕ್ಸಾದ ಅಟ್ಟಹಾಸ ಭಯಂಕರ ನಗೆಯಿಂದ ತೀರಾ ಭಯವಾಗುತ್ತಾರೆ. ನಂತರ ಆ ಬಳಕೆದಾರ ಈ ವಿಚಿತ್ರ ಘಟನೆ ಬಗ್ಗೆ ಆ್ಯಮಜಾನ್ ಕಂಪೆನಿಗೆ ರಿಪೋರ್ಟ್ ಮಾಡುತ್ತಾರೆ.

ಫೇಸ್‌ಬುಕ್ ರೋಬಾಟ್‌ಗಳ ಖಾಸಗಿ ಭಾಷೆ

ಫೇಸ್‌ಬುಕ್ ಸಾಮಾಜಿಕ ಜಾಲತಾಣ ಇಂಗ್ಲೀಷ್ ಸರಳೀಕರಿಸಲು ಶಾರ್ಟ್ಹ್ಯಾಂಡ್ ತಂತ್ರಜ್ಞಾನ ಅಭಿವೃದ್ಧಿ ಮಾಡುವ ಉದ್ದೇಶದಿಂದ ಎರಡು ರೋಬಾಟ್‌ಗಳನ್ನು ಸೃಷ್ಟಿಸಲಾಯಿತು. ಅವೆರಡನ್ನು ಪರಸ್ಪರ ಆಂಗ್ಲ ಭಾಷೆಯಲ್ಲಿ ಮಾತನಾಡಲು ಒಂದು ಕೋಣೆಯಲ್ಲಿ ಒಟ್ಟಿಗೆ ಬಿಡಲಾಯಿತು. ಅವು ಪರಸ್ಪರ ‘ಆ್ಯಲಿಸ್' ಹಾಗೂ ‘ಬಾಬ್' ಎಂಬ ಹೆಸರುಗಳನ್ನು ಇಟ್ಟುಕೊಂಡವು. ಸ್ವಲ್ಪ ಹೊತ್ತು ಅವು ಇಂಗ್ಲೀಷಿನಲ್ಲಿ ಮಾತನಾಡಿ ನಂತರ ಅವು ತಮ್ಮದೇ ಆದ ಮತ್ತು ಮನುಷ್ಯನಿಗೆ ಅರ್ಥವಾಗದ ಭಾಷೆಯಲ್ಲಿ ಮಾತನಾಡಲು ಆರಂಭಿಸಿದವು.

ಅಪಾಯಕಾರಿ ಟ್ವೀಟ್ ಮಾಡುತ್ತಿದ್ದ ಖಿಚಿಥಿ.ಚಿi

ಟ್ವಿಟರ್ ೨೦೧೬ರಲ್ಲಿ ಅಂತರ್ಮುಖಿಗಳಿಗೆ ಸಂವಹನಕ್ಕೆ ಸಾಥಿ ಆಗಲೆಂದು 'ಖಿಚಿಥಿ.ಚಿi' ಎಂಬ ಕೃತಕ ಬುದ್ಧಿಮತ್ತೆಯನ್ನು ತಯಾರಿಸಿತು. ಅದು ಆರಂಭಿಕ ಹಂತದಲ್ಲಿ ಉದ್ದೇಶಿತ ಬಳಕೆಗೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಕ್ರಮೇಣ ತಾನೇ ಸ್ವಂತವಾಗಿ ಕೆಲವು ಅಪಾಯಕಾರಿ ಟ್ವೀಟ್‌ಗಳನ್ನು ಹಾಕಲು ಶುರು ಮಾಡಿತು. ಇದನ್ನೂ ನಿಷ್ಕಿçÃಯಗೊಳಿಸಲಾಯಿತು.

ಇವು ರೋಬಾಟ್‌ಗಳು ಮನುಷ್ಯರಿಗೆ ಹೇಗೆ ಹಾನಿಕಾರಕವಾಗಬಲ್ಲವು ಎಂಬುದಕ್ಕೆ ಅತ್ಯಂತ ಸಮಂಜಸ ಉದಾಹರಣೆಗಳಾಗಿವೆ.

ಉದ್ಯೋಗಗಳ ಮೇಲೂ ಂI ಪ್ರಭಾವವು ಜಾಗತಿಕವಾಗಿ ಗಮನಾರ್ಹ. ಭಾರತವು ಇದಕ್ಕೆ ಹೊರತಾಗಿಲ್ಲ. ಕೆಲವು ಪ್ರಮುಖ ಅಂಶಗಳನ್ನು ಪರಿಶೀಲಿಸೋಣ:

ಭಾರತೀಯ ಕಾರ್ಮಿಕರ ಭಯ

ಮೈಕ್ರೋಸಾಫ್ಟ್ ವರ್ಕ್ ಟ್ರೆಂಡ್ ಇಂಡೆಕ್ಸ್ ೨೦೨೩ ರ ವರದಿಯ ಪ್ರಕಾರ, ಶೇ. ೭೪ ಭಾರತೀಯ ಕಾರ್ಮಿಕರು ಂI ತಮ್ಮ ಉದ್ಯೋಗಗಳನ್ನು ಕಸಿದುಕೊಳ್ಳಬಹುದೆಂದು ಕಳವಳ ವ್ಯಕ್ತಪಡಿಸಿದ್ದಾರೆ.

ಉದ್ಯೋಗ ನಷ್ಟಗಳು ಮತ್ತು ಂI

ಮೇ ೨೦೨೩ ರಲ್ಲಿ, ಸುಮಾರು ೪,೦೦೦ ಉದ್ಯೋಗ ನಷ್ಟಗಳಿಗೆ ಭಾರತದಲ್ಲಿ ಂI ಕಾರಣವಾಗಿದೆ.

ಉದ್ಯೋಗದ ಭೂದೃಶ್ಯವನ್ನು ಬದಲಾಯಿಸುವುದು

ಂI ಕೆಲವು ಪಾತ್ರಗಳ ಕುಸಿತಕ್ಕೆ ಕಾರಣವಾಗಬಹುದು (ಉದಾಹರಣೆಗೆ ಕ್ಲೆರಿಕಲ್ ಅಥವಾ ಕಾರ್ಯದರ್ಶಿ ಸ್ಥಾನಗಳು), ಇದು ಇತರ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತದೆ.

ಂI ಮತ್ತು ಯಂತ್ರ ಕಲಿಕೆ ತಜ್ಞರು, ಡೇಟಾ ವಿಶ್ಲೇಷಕರು, ವಿಜ್ಞಾನಿಗಳು ಮತ್ತು ಡಿಜಿಟಲ್ ರೂಪಾಂತರ ತಜ್ಞರ ಪಾತ್ರಗಳು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ.

ಂI ಅಪಾರ ಸಾಮರ್ಥ್ಯವನ್ನು ತಂದರೂ, ಇದು ಇತರ ಉದ್ಯೋಗಿಗಳಿಗೆ ಸವಾಲುಗಳನ್ನು ಒಡ್ಡುತ್ತದೆ. ತಾಂತ್ರಿಕ ಪ್ರಗತಿ ಮತ್ತು ಉದ್ಯೋಗ ಭದ್ರತೆಯ ನಡುವೆ ಸಮತೋಲನವನ್ನು ಸಾಧಿಸುವುದು ಸುಸ್ಥಿರ ಬೆಳವಣಿಗೆಗೆ ನಿರ್ಣಾಯಕವಾಗಿದೆ.

ಮನುಷ್ಯ ರೋಬಾಟ್‌ಗಳನ್ನು ತನಗೆ ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ವಿಕಸಿತಗೊಳಿಸುವುದು ಅವನೆ ಅವನಿಗೆ ಕುತ್ತು ತರಬಹುದಾದ ವಿಚಾರ. ಮಾನವ ಶತಮಾನಗಳ ಮತ್ತು ತಲೆಮಾರುಗಳ ನಿರಂತರ ಪರಿಶ್ರಮದಿಂದ ಈ ಮಟ್ಟಿಗೆ ಪ್ರಪಂಚವನ್ನು ಬದಲಿಸಿ, ವಿವೇಕಯುತವಾಗಿ ಬೆಳೆದು ನಿಂತಿದ್ದಾನೆ. ಆ ಮಟ್ಟಿಗಿನ ಅವನ ಪರಿಶ್ರಮವನ್ನೆಲ್ಲಾ ರೋಬಾಟ್ ಎಂಬ ಮಾಯಾವಿ ಹಾಳುಗೆಡವದಿರಲಿ.

ಮನುಷ್ಯನ ವಿನಾಶಕ್ಕೆ ವಿಜ್ಞಾನದ ಈ ನಿರ್ಜೀವ ಬುದ್ಧಿಮತ್ತೆಯನ್ನು ನಿಯಂತ್ರಣದಲ್ಲಿಟ್ಟರೆ ಮಾನವ ಕುಲಕ್ಕೆ ಕ್ಷೇಮ...

- ರಜತ್ ರಾಜ್ ಡಿ.ಹೆಚ್., ಮಡಿಕೇರಿ