ಮಡಿಕೇರಿ, ಮೇ ೭: ಕಳೆದ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಅಜಾಗರೂಕತೆಯಿಂದಾಗಿ ನಗರದ ಹೃದಯ ಭಾಗದಲ್ಲಿ ದಶಕಗಳ ಕಾಲ ನಿಂತಿದ್ದ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನೆಲಕ್ಕುರುಳಿ ಹಾನಿಯಾಗಿತ್ತು. ಇದೇ ಸಂದರ್ಭ ವೃತ್ತಕ್ಕೂ ಹಾನಿಯಾಗಿತ್ತು. ಮೈಸೂರಿನ ಶಿಲ್ಪಕಲಾ ಅಕಾಡೆಮಿಯ ಶಿಲ್ಪಿಗಳು ಪ್ರತಿಮೆಗೆ ಮತ್ತೆ ಕಾಯಕಲ್ಪ ನೀಡಿದ್ದರಾದರೂ, ಹಾನಿಯಾಗಿದ್ದ ವೃತ್ತದ ದುರಸ್ತಿ ಕಾರ್ಯ ಕೈಗೆತ್ತಿಕೊಂಡ ನಗರಸಭೆ ಬರೋಬ್ಬರಿ ೭ ತಿಂಗಳುಗಳ ಕಾಲಾವಧಿಯಲ್ಲಿ ವೃತ್ತವನ್ನು ದುರಸ್ತಿಪಡಿಸಿತ್ತು.

ಈ ಸಂದರ್ಭ ವೃತ್ತವನ್ನು ಸ್ವಲ್ಪ ಬಲಕ್ಕೆ ವರ್ಗಾಯಿಸಿ ಅಲ್ಲಿದ್ದ

ರಸ್ತೆ ವಿಭಜಕವನ್ನು ತೆರೆದ ನಗರಸಭೆಯು, ಈ ಹಿಂದೆ ಮಡಿಕೇರಿಗೆ ಪ್ರವೇಶಿಸಲು

(ಮೊದಲ ಪುಟದಿಂದ) ಇದ್ದ ಗೊಂದಲಮಯವಾಗಿದ್ದ ಎರಡೆರಡು ಪ್ರವೇಶ ದ್ವಾರಗಳ ಸಮಸ್ಯೆಯನ್ನು ಬಗೆಹರಿಸಿತು.

ಆದರೆ ವೃತ್ತವು ಈ ಹಿಂದೆ ನಿಂತಿದ್ದ ಸ್ಥಳವನ್ನು ಬಹುಶಃ ಹಳೆಯ ನೆನಪಿಗೆ ಇರಲಿ ಎಂಬAತೆ ಹಾಗೆಯೇ ಬಿಡಲಾಗಿದೆ. ಕಲ್ಲು-ಮಣ್ಣಿನಿಂದ ಕೂಡಿರುವ ಈ ಸ್ಥಳವು ತಿಮ್ಮಯ್ಯ ವೃತ್ತ, ಪ್ರತಿಮೆಯ ಅಂದಕ್ಕೆ ಧಕ್ಕೆ ತರುತ್ತಿರುವುದರೊಂದಿಗೆ ದ್ವಿಚಕ್ರ ವಾಹನ ಚಾಲಕರಿಗೆ ಅಪಾಯಕಾರಿಯೂ ಹೌದು. ಈ ಸ್ಥಳದಲ್ಲಿ ಬ್ರೇಕ್ ಹಾಕಿದರೆ, ಅಪಾಯ ಕಟ್ಟಿಟ್ಟ ಬುತ್ತಿ. ಮೈಸೂರು ರಸ್ತೆಯಿಂದಾಗಿ ಮಡಿಕೇರಿಗೆ ವಾಹನದಲ್ಲಿ ಪ್ರವೇಶಿಸುವಾಗ ದುಸ್ಥಿತಿಯಲ್ಲಿರುವ ಈ ರಸ್ತೆಯ ಭಾಗವನ್ನು ಕೆಲವರು ತಪ್ಪಿಸಲು ಯತ್ನಿಸಿ ಹಠಾತ್ ಎಡಕ್ಕೆ ತೆರಳಿದರೆ ಮೇಕೇರಿ, ಮಂಗಳೂರು ರಸ್ತೆ ಕಡೆಯಿಂದ ಆಗಮಿಸುವ ವಾಹನಗಳಿಗೆ ಅಪ್ಪಳಿಸುವ ಸಂಭವಗಳೂ ಇವೆ.

ಈ ಸಮಸ್ಯೆಯ ಬಗ್ಗೆ ಅರಿವಿದ್ದರೂ ಮೌನವಾಗಿರುವ ನಗರಸಭೆಯು ಮಳೆಗಾಲ ಪ್ರಾರಂಭವಾಗುವ ಮುನ್ನವಾದರೂ ದುರಸ್ತಿ ಕಾರ್ಯಕ್ಕೆ ಮುಂದಾಗಲಿದೆಯೇ ಎಂಬುದಾಗಿ ಕಾದು ನೋಡಬೇಕಿದೆ ಅಷ್ಟೆ..