ಚೆಟ್ಟಳ್ಳಿ, ಮೇ ೬: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಟೆನ್ನಿಸ್ ಆಟಗಾರ ಕೊಡಗಿನ ಮಚ್ಚಂಡ ರೋಹನ್ ಬೋಪಣ್ಣ ಅವರ ಪರವಾಗಿ ಮಾದಾಪುರದ ಅವರ ಸ್ವಗೃಹದಲ್ಲಿ ಪೋಷಕರಾದ ಮಚ್ಚಂಡ ಪ್ರಭಾ ಬೋಪಣ್ಣ ಹಾಗೂ ಮಲ್ಲಿಕಾ ಬೋಪಣ್ಣ ಅವರನ್ನು ಮಡಿಕೇರಿ ಕೊಡವ ಸಮಾಜದ ವತಿಯಿಂದ ಸನ್ಮಾನಿಸಿ, ಗೌರವಿಸ ಲಾಯಿತು. ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಸನ್ಮಾನಿಸಿ ಮಾತನಾಡಿ, ರೋಹನ್ ಬೋಪಣ್ಣ ಅವರ ಸಾಧನೆಯನ್ನು ಶ್ಲಾಘಿಸಿದರು. ಈ ಸಂದರ್ಭ ಸಮಾಜದ ಜಂಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್, ನಿರ್ದೇಶಕರುಗಳಾದ ಮೂವೆರ ಜಯರಾಂ, ನಂದಿನೆರವAಡ ರವಿಬಸಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಶಾಂತೆಯAಡ ವಿಶಾಲ್ ಕಾರ್ಯಪ್ಪ, ಕಾಂಡೆರ ಲಲ್ಲು ಕುಟ್ಟಪ್ಪ ಹಾಜರಿದ್ದರು.