ಪ್ರತಿಯೊಬ್ಬರಿಗೂ ನೀರಿನ ಮಹತ್ವ ತಿಳಿದಿದೆ. ನೀರಿಲ್ಲದಿದ್ದರೆ ಭೂಮಿಯ ಮೇಲೆ ಯಾವುದೇ ಜೀವಿಯು ಬದುಕಲಾರದು.

ಭೂಮಿಯ ಮೇಲೆ ನೀರು ಅತ್ಯವಶ್ಯಕವಾಗಿದೆ.

ನಾವು ಅಂತರ್ಜಲವನ್ನು ವೃದ್ಧಿಸಲು ಕ್ರಮಕೈಗೊಳ್ಳಬೇಕು. ಜಲ ಮಾಲಿನ್ಯವನ್ನು ತಡೆಗಟ್ಟುವ ದಿಸೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ. ನಾವು ಭವಿಷ್ಯಕ್ಕಾಗಿ ನೀರನ್ನು ಸಂರಕ್ಷಿಸದಿದ್ದಲ್ಲಿ

ಭವಿಷ್ಯದಲ್ಲಿ ಜಲಕ್ಷಾಮ ಉಂಟಾಗಿ ನಾವು ಗಂಡಾAತರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಜಾಗತಿಕ ತಾಪಮಾನದಿಂದ ನಾವು ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಇದು ಜಲಕ್ಷಾಮದ ಎಚ್ಚರಿಕೆಯ ಗಂಟೆಯನ್ನು ನೀಡಿದೆ.

ಈ ಗ್ರಹದಲ್ಲಿ ಎಲ್ಲಾ ಜೀವಿಗಳ ಜೀವನವನ್ನು ವ್ಯಾಖ್ಯಾನಿಸುವ ಒಂದು ವಿಷಯವೆಂದರೆ ಅದು ನೀರು ಮಾತ್ರ.

ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ಉಳಿಸಲು ಎಚ್ಚರಗೊಳ್ಳುವ ಮತ್ತು ನೀರನ್ನು ಉಳಿಸುವ ಸಮಯ ಇದು.

ಭಾರತದಲ್ಲಿ ನೀರನ್ನು ದೇವ ಸ್ವರೂಪಿಯಂತೆ ಪೂಜಿಸಲಾಗುತ್ತದೆ. ಜಲ ಮೂಲಗಳಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಮುಂದಿನ ಪೀಳಿಗೆಗೆ ಶುದ್ಧ ನೀರು ಸಿಗಬೇಕು. ನೀರು ಸ್ವಚ್ಛ ಮತ್ತು ಶುದ್ಧವಾಗಿರಬೇಕೆಂಬುದೇ ಈಗಿನ ಪ್ರಮುಖ ಧ್ಯೇಯವಾಗಿದೆ.

ನೈಸರ್ಗಿಕ ಸಂಪನ್ಮೂಲವಾದ ನೀರಿನ ಸಂರಕ್ಷಣೆ ಇಂದು ನಮಗೆ ಅತಿ ಮುಖ್ಯವಾಗಿದೆ. ಏಕೆಂದರೆ ಶುದ್ಧ ನೀರು ಸೀಮಿತ ಸಂಪನ್ಮೂಲವಾಗಿದೆ. ಆದ್ದರಿಂದ ನಾವು ನೀರನ್ನು ಅನಗತ್ಯವಾಗಿ ಪೋಲು ಮಾಡದೇ ಭವಿಷ್ಯತ್ತಿಗಾಗಿ ನೀರನ್ನು ಮಿತವಾಗಿ ಬಳಕೆ ಮಾಡಬೇಕು.

ನಾಳಿನ ಉತ್ತಮ ಭವಿಷ್ಯಕ್ಕಾಗಿ ‘ಹನಿ ಹನಿ ನೀರು ಉಳಿಸಿ, ಜೀವ ಉಳಿಸಿ’ ಎಂಬ ಘೋಷಣೆ ಮೂಲಕ ನಾವು ನೀರಿನ ಸಂರಕ್ಷಣೆ ಮಾಡಬೇಕಿದೆ.

ನಿಸರ್ಗದತ್ತವಾಗಿ ದೊರಕುವ ಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆ ಹಾಗೂ ಅಮೂಲ್ಯತೆಯನ್ನು ವಿಶ್ವದ ಮನುಕುಲಕ್ಕೆ ಅರ್ಥವಾಗಿಸಿ ಜನಜಾಗೃತಿ ಮೂಡಿಸಬೇಕಾಗಿದೆ.

ಭೂಮಿಯ ಶೇ.೭೦ಕ್ಕೂ ಹೆಚ್ಚು ಭಾಗವನ್ನು ಆವರಿಸಿರುವ ನೀರಿನಲ್ಲಿ ಕುಡಿಯಲು ಹಾಗೂ ದಿನ ಬಳಕೆಗೆ ಯೋಗ್ಯವಾಗಿರುವುದು (ಸಿಹಿ ನೀರು) ಕೇವಲ ಶೇ. ೧ ರಿಂದ ೨ರಷ್ಟು ಮಾತ್ರ ಎಂಬುದು ಅಚ್ಚರಿಯ ಸಂಗತಿ. ಈ ಯೋಗ್ಯ ನೀರಿನಲ್ಲಿ ಶೇ.೧ ರಷ್ಟು ಧ್ರುವ ಪ್ರದೇಶಗಳ ಹಿಮ ಮತ್ತು ನೀರ್ಗಲ್ಲುಗಳ ರೂಪದಲ್ಲಿ ಕಂಡುಬರುತ್ತದೆ.

ಇತ್ತೀಚಿನ ಕೆಲವು ವರ್ಷಗಳಿಂದ ಮಳೆ ಪ್ರಮಾಣ ಕ್ಷೀಣಿಸಿರುವುದರಿಂದ ಜಲಮೂಲಗಳು ಬತ್ತಿಹೋಗಿವೆ. ಇದರಿಂದ ದಿನೇ ದಿನೇ ನೀರಿನ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ನೀರಿಗೆ ಸಂಬAಧಿಸಿದAತೆ ಮುಂದೊAದು ದಿನ ನೀರಿಗಾಗಿ ಮೂರನೇ ಮಹಾಯುದ್ಧ ಘಟಿಸಬಹುದು ಎಂಬುದು ಜಲತಜ್ಞರ ಅಭಿಪ್ರಾಯವಾಗಿದೆ.

ನೀರನ್ನು ನಾವು ದುಡ್ಡಿನ ರೀತಿಯಲ್ಲಿ ವೈಯಕ್ತಿಕವಾಗಿ ನೀರನ್ನು ಭವಿಷ್ಯಕ್ಕಾಗಿ ಶೇಖರಿಸಿಡಲು ಸಾಧ್ಯವಿಲ್ಲ. ಅಂದರೆ ನಾವು ನೀರನ್ನು ಪೋಲು ಮಾಡಬಾರದು. ಆದ್ದರಿಂದ ನಾವು ನೀರನ್ನು ಜಾಣ್ಮೆ ಮತ್ತು ವಿವೇಕತನದಿಂದ ಮಿತ ಬಳಕೆ ಮಾಡಬೇಕಿದೆ. ಎಲ್ಲರೂ ಪ್ರತಿಹಂತದಲ್ಲೂ ನೀರನ್ನು ಅತಿ ಎಚ್ಚರಿಕೆಯಿಂದ ಬಳಸಬೇಕು.

ಜಗತ್ತಿನಾದ್ಯಂತ ಎಲ್ಲಾ ದೇಶಗಳಲ್ಲೂ ಇಂದು ನೀರಿನ ಸಮಸ್ಯೆ ಎದುರಾಗಿದೆ. ಅದರಲ್ಲೂ ನಮ್ಮ ದೇಶದಲ್ಲಿ ಜನಸಂಖ್ಯೆ ಏರಿದಂತೆ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಆದರೆ ನೀರಿನ ಬಳಕೆಯ ಮೊತ್ತವೂ ಹೆಚ್ಚುತ್ತಿದೆ. ಉದ್ಯಮಕ್ಕೆ, ಕೃಷಿಗೆ, ಮಾಲಿನ್ಯ ನಿವಾರಣೆ, ಇತ್ಯಾದಿ ಕೆಲಸಗಳಿಗೆ ನೀರಿನ ಬೇಡಿಕೆ ದಿನವೂ ಹೆಚ್ಚುತ್ತಿದೆ..

ಪಶ್ಚಿಮಘಟ್ಟ ಪ್ರದೇಶದಲ್ಲಿ ೨-೩ ದಶಕಗಳ ಹಿಂದೆ ಐದಾರು ತಿಂಗಳು ಕಾಲ ಸತತ ಮಳೆಯಾಗುತ್ತಿದ್ದ ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ತೀವ್ರವಾಗಿ ಕ್ಷೀಣಿಸಿದೆ. ಇದರಿಂದ ಬೇಸಿಗೆಯಲ್ಲಿ ಕೊಡಗಿನ ಹಳ್ಳ-ಕೊಳ್ಳಗಳು, ಜಲಧಾರೆಗಳು, ಕೆರೆಕಟ್ಟೆಗಳು ಬತ್ತುತ್ತಿವೆ. ನಾಡಿನ ಜೀವನದಿ ಕಾವೇರಿಯಲ್ಲಿ ನೀರಿನ ಪ್ರಮಾಣ ಈ ವರ್ಷ ತೀವ್ರವಾಗಿ ಕ್ಷೀಣಿಸಿರುವುದನ್ನು ನಾವು ಗಮನಿಸಬಹುದಾಗಿದೆ.

ಈ ಬಾರಿ ಬೇಸಿಗೆಯ ಆರಂಭದಲ್ಲೇ ನಾಡಿನ ಜೀವನದಿ ಕಾವೇರಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಾ ಬಂದಿದೆ. ಕಾವೇರಿ ನದಿಯಲ್ಲಿ ನೀರು ಕ್ಷೀಣಗೊಂಡಲ್ಲಿ ಭವಿಷ್ಯತ್ತಿನಲ್ಲಿ ಕುಡಿಯುವ ನೀರಿಗೆ ಪರದಾಡುತ್ತಿರುವ ಪರಿಸ್ಥಿತಿ ಬಂದಿದೆ. ಕೊಡಗಿನಲ್ಲಿ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವತಿಯಿಂದ ಜನರಿಗೆ ಟ್ಯಾಂಕರ್‌ಗಳ ಮೂಲಕ ಮನೆಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

ಜನರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಕುಡಿಯುವ ನೀರಿಗಾಗಿ ಜನರು ಪರಿತಪಿಸುವ ದುಃಸ್ಥಿತಿ ಬಂದಿರುವುದು ದುರ್ದೈವದ ಸಂಗತಿಯಾಗಿದೆ.

ನದಿ ನೀರು ಕ್ಷೀಣ : ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ತೀವ್ರವಾಗಿ ಕ್ಷೀಣಿಸಿದಂತೆ ಜೀವನದಿ ಕಾವೇರಿ ಒಡಲಿನಲ್ಲಿ ಅಂತರ್ಜಲ ಕುಗ್ಗಿದ್ದು ನದಿಯ ನೀರಿನ ಮಟ್ಟ ಕ್ಷೀಣಿಸುತ್ತಿದೆ.

ನದಿಯಲ್ಲಿ ಅವೈಜ್ಞಾನಿಕ ಮರಳು ಗಣಿಗಾರಿಕೆ ಮತ್ತು ನದಿ ಪಾತ್ರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ಹಾಗೂ ಚರಂಡಿಯ ಕೊಳಚೆ ನೀರು ನದಿ ಸೇರುತ್ತಿರುವುದು ಕೂಡ ನದಿ ಕಲುಷಿತಗೊಳ್ಳಲು ಕಾರಣವಾಗಿದೆ.

ಹಿಂದಿನ ದಶಕಗಳಲ್ಲಿ ಶುದ್ಧ ನೀರಿನಿಂದ ತುಂಬಿ ತುಳುಕುತ್ತಿದ್ದ ಬಾವಿಗಳು ಇಂದು ಕಸದ ಗುಂಡಿಗಳಾಗಿ ಮಾರ್ಪಟ್ಟಿವೆ. ನಾಡಿನ ಜೀವನಾಡಿಗಳಾಗಿದ್ದ ಕೆರೆಕಟ್ಟೆಗಳು ಇಂದು ಅಭಿವೃದ್ಧಿ ಹೆಸರಿನಲ್ಲಿ ಕಣ್ಮರೆಯಾಗುತ್ತಿವೆ. ಈ ಎಲ್ಲಾ ಅವ್ಯವಸ್ಥೆಗೆ ಮನುಷ್ಯನ ದುರಾಸೆ ಕಾರಣವಾಗಿದೆ. ಈ ಪರಿಸ್ಥಿತಿಯನ್ನು ನಾವು ಸುಧಾರಿಸಲೇ ಬೇಕು.

ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಷ್ಟವಾಗಲಿದೆ. ಪ್ರಸ್ತುತ ನಾವು ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ಮನಗಂಡು ನೀರನ್ನು ಪ್ರಜ್ಞೆಯಿಂದ ಬಳಸಬೇಕು.

ಹನಿ ಹನಿ ನೀರು ಸೇರಿ ಒಂದು ಬಕೆಟ್ ನೀರಾಗುತ್ತದೆ. ಎಷ್ಟೋ ಬಕೆಟ್‌ಗಳ ನೀರಿನ ಸಂಗ್ರಹದಿAದ ಒಂದು ಕೆರೆ ತುಂಬುತ್ತದೆ. ಎಷ್ಟೋ ಕೆರೆಗಳು ಸೇರಿ ಒಂದು ನದಿಯಾಗುತ್ತದೆ. ಹಲವಾರು ನದಿಗಳು ಸೇರಿ ಸಮುದ್ರವಾಗುತ್ತದೆ. ಅಂದರೆ ಒಂದು ಹನಿ ನೀರಿಗೆ ಅದರದ್ದೇ ಆದ ಮಹತ್ವ ಇದೆ.

ಆದ್ದರಿಂದ ನಾವು ನೀರನ್ನು ಪೋಲು ಮಾಡದೇ ಅಂತರ್ಜಲವನ್ನು ಸಂರಕ್ಷಿಸುವ ಮೂಲಕ ನೀರನ್ನು ಮಿತವಾಗಿ ಬಳಸಬೇಕಿದೆ. ಹಾಗೆಯೇ, ನಾಳಿನ ಉತ್ತಮ ಭವಿಷ್ಯಕ್ಕಾಗಿ ನೀರಿನ ಸಂರಕ್ಷಣೆ ಮಾಡಬೇಕಾದುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ.

- ಟಿ.ಜಿ. ಪ್ರೇಮಕುಮಾರ್,

ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,

ಕೂಡುಮಂಗಳೂರು,

(ಮೊ: ೯೪೪೮೫ ೮೮೩೫೨)