ಸುಂಟಿಕೊಪ್ಪ, ಮೇ ೫: ಸುಂಟಿಕೊಪ್ಪದ ಟಿ.ಸಿ.ಎಲ್. ತೋಟದಲ್ಲಿರುವ ಶ್ರೀ ಮಹಾಗಣಪತಿ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕ ಪೂಜೆ ನಡೆಯಿತು.

ಗಣಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಮಹಾ ಮಂಗಳಾರತಿ ಹಾಗೂ ಅನ್ನಸಂತರ್ಪಣೆ ನೆರವೇರಿತು. ಸ್ಥಳೀಯ ಮಠತ್‌ಕಾಡು ತೋಟದ ಮಾಲೀಕರಾದ ದಿ. ಸಿ.ಬಿ. ದೇವಯ್ಯ ಅವರ ಜ್ಞಾಪಕಾರ್ಥ ಅವರ ಕುಟುಂಬದವರು ಸುಮಾರು ರೂ. ೫೦ ಸಾವಿರ ಮೌಲ್ಯದ ಅಡುಗೆ ಪಾತ್ರೆಯನ್ನು ಉದಾರವಾಗಿ ನೀಡಿದರು. ಈ ಸಂದರ್ಭ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯ ಆಲಿಕುಟ್ಟಿ ಸೇರಿದಂತೆ ದೇವಾಲಯದ ಸಮಿತಿ ಸದಸ್ಯರು ಹಾಜರಿದ್ದರು.