ಪೊನ್ನಂಪೇಟೆ, ಮೇ ೫: ಮಂಗಳೂರು ಯನಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ರಾಷ್ಟçಮಟ್ಟದ ಹ್ಯಾಕಥಾನ್ ಸ್ಪರ್ಧೆಯ ಕೋಡಿಂಗ್ ವಿಭಾಗದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ತೃತೀಯ ಬಿಸಿಎ ವಿದ್ಯಾರ್ಥಿಗಳಾದ ಅರ್ಚನ ಸುರೇಶ್, ಅಬುತಾಹಿರ್, ಪ್ರಜ್ವಲ್ ಹರಿಹರನ್ ಮತ್ತು ರಣ್ ದೀಪ್ ಅವರುಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈ ಸಾಧನೆಗಾಗಿ ವಿದ್ಯಾರ್ಥಿಗಳು ರೂ. ೨೦ ಸಾವಿರ ನಗದು, ಟ್ರೋಫಿ ಹಾಗೂ ಪ್ರಮಾಣ ಪತ್ರ ಪಡೆದು ಕೊಂಡಿರುತ್ತಾರೆ. ಅಲ್ಲದೆ ಪ್ರಜ್ವಲ್ ಹರಿಹರನ್ ಫಿಗ್ಮ ಕಂಪೆನಿಯಲ್ಲಿ ಉದ್ಯೋಗ ಅವಕಾಶ ಪಡೆದು ಕೊಂಡರೆ, ಅರ್ಚನ ಸುರೇಶ್ ಬಾಬು, ಅಬುತಾಹಿರ್ ಮತ್ತು ರಣ್ದೀಪ್ ಐಬಿಎಂ ಕಂಪೆನಿಯಲ್ಲಿ ಉದ್ಯೋಗಾ ವಕಾಶ ಪಡೆದುಕೊಂಡಿದ್ದಾರೆ.