ಕುಶಾಲನಗರ, ಮೇ ೪: ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಮೆಕಾನಿಕ್ ವೃತ್ತಿಯ ಬಗ್ಗೆ ಕೀಳಾಗಿ ನಿಂದಿಸಿ ಅಪಮಾನಿಸಲಾಗಿದೆ ಎಂದು ಆರೋಪಿಸಿ ಕುಶಾಲನಗರ ವರ್ಕ್ಶಾಪ್ ಕಾರ್ಮಿಕರ ಸಂಘದಿAದ ಪ್ರತಿಭಟನೆ ನಡೆಯಿತು. ಕುಶಾಲನಗರ ಗಣಪತಿ ದೇವಾಲಯ ಮುಂಭಾಗದಿAದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಖಾಸಗಿ ಚಾನಲ್, ನಿರೂಪಕರು, ತೀರ್ಪುಗಾರರು ಹಾಗೂ ಸ್ಪರ್ಧಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆ ಮೂಲಕ ಡಿ.ವೈ.ಎಸ್ಪಿ. ಕಚೇರಿಗೆ ತೆರಳಿ ನಿಂದಿಸಿರುವವರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿ ಡಿ.ವೈ.ಎಸಿ.್ಪ ಗಂಗಾಧರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಪೂವಯ್ಯ, ಉಪಾಧ್ಯಕ್ಷ ಎನ್.ಸಿ. ಗಣೇಶ್, ಕಾರ್ಯದರ್ಶಿ ಶಿವು, ಖಜಾಂಚಿ ರಂಜಿತ್, ಮತ್ತಿತರರು ಇದ್ದರು.