*ಗೋಣಿಕೊಪ್ಪ, ಏ. ೪: ಚೇಪುö್ಪಡಿಕೊಲ್ಲಿ ಬೀರುಗ ಗ್ರಾಮದ ಶ್ರೀ ಪಾಲ್‌ಪಾರ್ ಚಾಮುಂಡೇಶ್ವರಿ ವಿಷ್ಣುಮೂರ್ತಿ ವಾರ್ಷಿಕ ಉತ್ಸವ ತಾ.೧ರಿಂದ ಆರಂಭಗೊAಡಿದ್ದು, ೭ರ ತನಕ ಮುಂದುವರೆಯಲಿದೆ.

ತಾ.೧ ರಂದು ಬೆಳಿಗ್ಗೆ ಹಬ್ಬದ ತೋರಣ ಮುಹೂರ್ತ ಪೂಜೆಯಿಂದ ಪ್ರಾರಂಭವಾಗಿ ಎರಡನೇ ದಿನದಲ್ಲಿ ಗಣಪತಿ ಹೋಮ, ಅಲಂಕಾರ ಪೂಜೆ, ಮಹಾಪೂಜೆ, ನಡೆದಿದೆ.

ಮೂರನೇ ದಿನದಲ್ಲಿ ಮೃತ್ಯುಂಜಯ ಹೋಮ, ಶ್ರೀಸೂಕ್ತ ಹೋಮ, ಪುರುಷಸೂಕ್ತ ಹೋಮ, ಹರಕೆ, ಬಳಕುಸಂಕಲ್ಪ, ತುಲಾಭಾರ ಸೇವೆ, ತೂಚಂಬಲಿ ಸೇವೆಗಳು ನಡೆದಿದ್ದು, ನಾಲ್ಕನೆಯ ದಿನದಂದು ಸತ್ಯನಾರಾಯಣ ಪೂಜೆ, ನೆರಪು, ಉತ್ಸವ ಮೂರ್ತಿಯನ್ನು ಹೊರ ತರುವುದು ಮತ್ತು ಮಹಾಪೂಜೆ ನಡೆದಿದೆ.

ತಾ.೫ ರಂದು (ಇಂದು) ದೇವರ ದಶವಿಧ ಸ್ನಾನ, ನಿತ್ಯಪೂಜೆ, ಅಲಂಕಾರ ಪೂಜೆ, ತುಲಾಭಾರ, ವಸಂತ ಪೂಜೆ, ದೇವರ ಅವಭೃತ ಸ್ನಾನ ನಡೆಯಲಿದೆ. ತಾ.೬ರಂದು ಶುದ್ಧಕಲಶ ಅಲಂಕಾರಪೂಜೆ, ಮಹಾಪೂಜೆ, ಚಾಮುಂಡಿ ದೇವರ ತೋತತೆರೆ, ಕುಟ್ಟಿಚಾತ ತೆರೆ, ಬೈರವತೆರೆ, ಕರಿಬಾಳ್ ಭಗವತಿ ತೆರೆ, ನುಚ್ಚುಟ್ಟೆ ತೆರೆಗಳು ನಡೆಯಲಿವೆ.

ತಾ.೭ರಂದು ಚಾಮುಂಡಿ ದೇವರು ಮೈಮೇಲೆ ಬರುವುದು, ವಿಷ್ಣುಮೂರ್ತಿ ತೆರೆ, ಮೇಲೇರಿ ಬೀಳುವುದು, ಹರಕೆ ಒಪ್ಪಿಸುವುದು ಸೇರಿದಂತೆ ಇನ್ನಿತರೆ ಪೂಜೆ ಕಾರ್ಯಗಳು ನಡೆಯಲಿದೆ ಎಂದು ಚೆಕ್ಕೆರ ನಾಣಯ್ಯ ಮಾಹಿತಿ ನೀಡಿದ್ದಾರೆ.