ಮಡಿಕೇರಿ, ಮೇ ೪: ಜಿಲ್ಲೆಯಲ್ಲಿನ ಖಾಸಗಿ ಒಡೆತನದ ಜಮೀನು ಗಳಲ್ಲಿರುವ ಮರಗಳನ್ನು ಸರಕಾರಿ ಮರಗಳೆಂದು ಸರ್ವೆ ಮಾಡಿ ಪಟ್ಟಿ ಮಾಡುವಂತೆ ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ಈ ಕೂಡಲೇ ಹಿಂಪಡೆಯಬೇಕೆAದು ಒತ್ತಾಯಿಸಿರುವ ಜಿಲ್ಲಾ ಬಿಜೆಪಿ, ತಪ್ಪಿದಲ್ಲಿ ಬೆಳೆಗಾ ರರನ್ನೊಳಗೊಂಡು ಸರಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ; ಖಾಸಗಿ ಜಮೀನಿ ನಲ್ಲಿರುವ ಬೆಲೆಬಾಳುವ ಎಲ್ಲಾ ಮರಗಳನ್ನು ಸರಕಾರಿ ಮರಗಳೆಂದು ಸರ್ವೆ ಮಾಡಿ, ಕಂದಾಯ ಇಲಾಖೆ ಮೂಲಕ ಅವುಗಳ ಪಟ್ಟಿ ಮಾಡಿ ೩೦-೪-೨೦೨೪ರೊಳಗಡೆ ಕಳುಹಿಸಿ ಕೊಡುವಂತೆ ಅರಣ್ಯ ಇಲಾಖಾಧಿಕಾರಿ ಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾಗಮಂಡಲ, ಚೆಟ್ಟಿಮಾನಿ, ಮದೆ ಗ್ರಾಮಗಳಲ್ಲಿನ ತೋಟಗಳಲ್ಲಿರುವ ಮರಗಳ ಪಟ್ಟಿ ಮಾಡಿ ಅದನ್ನು ಸರಕಾರಕ್ಕೆ ಕಳುಹಿಸಿಕೊಡಲು ಈಗಾಗಲೇ ಅರಣ್ಯ ಇಲಾಖಾಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ. ವಿಳಂಬವಾಗಿ ರುವದಕ್ಕೆ ಸಿಬ್ಬಂದಿಗಳ ಕೊರತೆಯ ಕಾರಣ ನೀಡಿದ್ದಾರೆ. ಆದರೆ, ಇಲ್ಲಿಯ ವಾಸ್ತವತೆ, ಜಾಗದ ಟೆನ್ಯೂರ್ಗಳ ಬಗ್ಗೆ ಅಧಿಕಾರಿಗಳು
ಆತಂಕ ಬೇಡ - ಸಮಸ್ಯೆ ಪರಿಹಾರಕ್ಕೆ ಕ್ರಮ : ಪೊನ್ನಣ್ಣ
ಮರಗಳ ಸಮೀಕ್ಷೆ ವಿಚಾರದಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಕ್ರಮವಹಿಸಲಾಗಿದೆ. ಚುನಾವಣೆ ಮುಗಿದ ಬಳಿಕ ಉನ್ನತಮಟ್ಟದ ಸಭೆ ನಡೆಸಿ ವಿವಾದ ಬಗೆಹರಿಸಲಾಗುವುದು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಹೇಳಿದ್ದಾರೆ.
ತೋಟಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮರಗಳ ಸಮೀಕ್ಷೆಗಾಗಿ ಬರುತ್ತಿರುವ ಕುರಿತು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಉನ್ನತಾಧಿಕಾರಿಗಳ ಗಮನಕ್ಕೆ ತಂದು ಸಮೀಕ್ಷೆ ತಡೆಯಿಡಿಯಲು ಸೂಚಿಸಿದ್ದೇನೆ. ಚುನಾವಣೆ ಮುಗಿದ ಬಳಿಕ ಉನ್ನತ ಮಟ್ಟದ ಸಭೆ ನಡೆಸಿ ಇದಕ್ಕೆ ಪರಿಹಾರ ಹುಡುಕಲಾಗುವುದು. ಈ ವಿಚಾರವನ್ನು ರಾಜಕಾರಣ ಬಳಸಿಕೊಂಡು ತಿರುಚುವ ಕೆಲಸ ಮಾಡಬಾರದು. ಮರದ ಹಕ್ಕು ವಿಚಾರದಲ್ಲಿ ತಾನೂ ವೈಯಕ್ತಿಕವಾಗಿ ಹೋರಾಟ ಮಾಡಿದವನು. ಇಲ್ಲ ಸಲ್ಲದ ವಿಚಾರಕ್ಕೆ ಜನತೆ ಕಿವಿಗೊಡಬಾರದು. ಸರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ತನಕ ಅರಣ್ಯ ಇಲಾಖೆ ತೋಟಕ್ಕೆ ಬರುವುದಿಲ್ಲ. ಅರಣ್ಯ ಪ್ರದೇಶ ಒತ್ತುವರಿ ಮಾಡಿ ಮರ ಕಡಿಯುವುದಕ್ಕೆ ಅವಕಾಶ ಇರುವುದಿಲ್ಲ. ಪ್ರಕೃತಿ ನಾಶ ಮಾಡುವ ವ್ಯಾಪಾರಿಗಳಿಗೆ ಮುಂದಿನ ದಿನಗಳಲ್ಲಿ ನಿರ್ಬಂಧ ಹೇರಲಾಗುವುದು. ನಮ್ಮ ಸರಕಾರ ರೈತ, ಬೆಳೆಗಾರರ ಪರ ಇದೆ. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ತನ್ನ ಹಾಗೂ ಸರಕಾರದ ಮೇಲಿದೆ ಎಂದು ಅಭಯ ನೀಡಿದ್ದಾರೆ. ಆತಂಕ ಬೇಡ - ಸಮಸ್ಯೆ ಪರಿಹಾರಕ್ಕೆ ಕ್ರಮ : ಪೊನ್ನಣ್ಣ
ಮರಗಳ ಸಮೀಕ್ಷೆ ವಿಚಾರದಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಕ್ರಮವಹಿಸಲಾಗಿದೆ. ಚುನಾವಣೆ ಮುಗಿದ ಬಳಿಕ ಉನ್ನತಮಟ್ಟದ ಸಭೆ ನಡೆಸಿ ವಿವಾದ ಬಗೆಹರಿಸಲಾಗುವುದು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಹೇಳಿದ್ದಾರೆ.
ತೋಟಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮರಗಳ ಸಮೀಕ್ಷೆಗಾಗಿ ಬರುತ್ತಿರುವ ಕುರಿತು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಉನ್ನತಾಧಿಕಾರಿಗಳ ಗಮನಕ್ಕೆ ತಂದು ಸಮೀಕ್ಷೆ ತಡೆಯಿಡಿಯಲು ಸೂಚಿಸಿದ್ದೇನೆ. ಚುನಾವಣೆ ಮುಗಿದ ಬಳಿಕ ಉನ್ನತ ಮಟ್ಟದ ಸಭೆ ನಡೆಸಿ ಇದಕ್ಕೆ ಪರಿಹಾರ ಹುಡುಕಲಾಗುವುದು. ಈ ವಿಚಾರವನ್ನು ರಾಜಕಾರಣ ಬಳಸಿಕೊಂಡು ತಿರುಚುವ ಕೆಲಸ ಮಾಡಬಾರದು. ಮರದ ಹಕ್ಕು ವಿಚಾರದಲ್ಲಿ ತಾನೂ ವೈಯಕ್ತಿಕವಾಗಿ ಹೋರಾಟ ಮಾಡಿದವನು. ಇಲ್ಲ ಸಲ್ಲದ ವಿಚಾರಕ್ಕೆ ಜನತೆ ಕಿವಿಗೊಡಬಾರದು. ಸರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ತನಕ ಅರಣ್ಯ ಇಲಾಖೆ ತೋಟಕ್ಕೆ ಬರುವುದಿಲ್ಲ. ಅರಣ್ಯ ಪ್ರದೇಶ ಒತ್ತುವರಿ ಮಾಡಿ ಮರ ಕಡಿಯುವುದಕ್ಕೆ ಅವಕಾಶ ಇರುವುದಿಲ್ಲ. ಪ್ರಕೃತಿ ನಾಶ ಮಾಡುವ ವ್ಯಾಪಾರಿಗಳಿಗೆ ಮುಂದಿನ ದಿನಗಳಲ್ಲಿ ನಿರ್ಬಂಧ ಹೇರಲಾಗುವುದು. ನಮ್ಮ ಸರಕಾರ ರೈತ, ಬೆಳೆಗಾರರ ಪರ ಇದೆ. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ತನ್ನ ಹಾಗೂ ಸರಕಾರದ ಮೇಲಿದೆ ಎಂದು ಅಭಯ ನೀಡಿದ್ದಾರೆ. ಜನರು ಪರಿಸರವನ್ನು ಉಳಿಸಿಕೊಂಡು ಬಂದಿದ್ದಾರೆ. ತೋಟ ಮಾಡುವಾಗಲೂ ಗಿಡಗಳನ್ನು ನೆಟ್ಟು ಬೆಳೆಸಿ ಉಳಿಸಿಕೊಂಡು ಬರುತ್ತಿದ್ದಾರೆ. ಹೊರಗಿನಿಂದ ಬಂದವರಿAದಾಗಿ, ಅಕ್ರಮವಾಗಿ ಭೂ ಪರಿವರ್ತನೆ ಮಾಡಿಕೊಡುವ ಭೂ ಮಾಫಿಯಾದವರಿಂದಾಗಿ ಇಲ್ಲಿನ ಕಾಡುಗಳು ನಾಶವಾಗುತ್ತಿವೆ. ಒಂದು ರೀತಿಯಲ್ಲಿ ಕಾಡು ನಾಶವಾಗಲು ಅಧಿಕಾರಿಗಳೇ ಕಾರಣಕರ್ತರು. ಅಧಿಕಾರಿಗಳು ಮೊದಲು ಮೀಸಲಿಟ್ಟಿರುವ ಅರಣ್ಯವನ್ನು ರಕ್ಷಣೆ ಮಾಡಲಿ, ಖಾಸಗಿ ತೋಟಗಳಲ್ಲಿರುವ ಮರಗಳನ್ನು ಬೆಳೆಗಾರರೇ ರಕ್ಷಣೆ ಮಾಡುತ್ತಾರೆ. ಇಲಾಖೆಯ ಈ ಸುತ್ತೋಲೆಯಿಂದಾಗಿ ಬೆಳೆಗಾರರೇ ಮರಗಳನ್ನು ಕಡಿಯುವ ಪರಿಸ್ಥಿತಿ ನಿರ್ಮಾಣವಾಗಿ ಸಂಘರ್ಷಕ್ಕೆ ಎಡೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸುತ್ತೋಲೆಯನ್ನು ಹಿಂಡೆಯಬೇಕೆAದು ಒತ್ತಾಯಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ; ನಮ್ಮ ಪೂರ್ವಿಕರು ತಲ ತಲಾಂತರಗಳಿAದ ಉಳಿಸಿಕೊಂಡು ಬಂದಿರುವ ಪಿತ್ರಾರ್ಜಿತ ಆಸ್ತಿಗೆ ಅರಣ್ಯ ಇಲಾಖೆಯವರು ಪ್ರವೇಶ ಮಾಡುವದು ಬೇಡ. ಅವರು ಸರಕಾರಿ ಜಾಗವನ್ನು ಉಳಿಸಿಕೊಳ್ಳಲಿ, ಕೊಡಗಿನವರು ಪರಿಸರ ಪ್ರೇಮಿಗಳು, ಪ್ರಕೃತಿಯನ್ನು ಪೂಜೆ ಮಾಡಿಕೊಂಡು ಬಂದವರು. ಇಲಾಖೆಯವರು ಅನವಶ್ಯಕ ಕಾಟ ಕೊಡುವದು ಬೇಡ; ಇದೊಂದು ಜಿಲ್ಲೆಯವರಿಗೆ ಹೊಸ ಅನುಭವವಾಗಿದ್ದು, ಈ ಮಾರಕವಾದ ಸುತ್ತೋಲೆಯನ್ನು ಹಿಂಪಡೆಯದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ. ಲೋಕೇಶ್, ನೆಲ್ಲೀರ ಚಲನ್, ವಕ್ತಾರ ಬಿ.ಕೆ. ಅರುಣ್ಕುಮಾರ್ ಇದ್ದರು.