ಮಡಿಕೇರಿ, ಮೇ ೪: ಕೊಡವ ಕೌಟುಂಬಿಕ ಹಾಕಿ ಉತ್ಸವ ೨೪ನೇಯ ವರ್ಷದಲ್ಲಿ ಕುಂಡ್ಯೋಳAಡ ಕಪ್ ಹಾಕಿ ಕಾರ್ನಿವಾಲ್‌ನ ಮೂಲಕ ೨೦೨೪ರಲ್ಲಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವುದರೊಂದಿಗೆ ಹೊಸ ಇತಿಹಾಸ ಸೃಷ್ಟಿಯಾಗಿದೆ. ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿರುವುದು ಸಾಧಾರಣ ವಿಚಾರವಲ್ಲ, ಇದರ ಹಿಂದೆ ಅಪಾರ ಶ್ರಮ ಅಡಗಿದೆ. ಕುಟುಂಬಸ್ಥರ ವ್ಯವಸ್ಥಿತ ರೀತಿಯ ಪ್ರಯತ್ನ, ಅಗತ್ಯ ದಾಖಲಾತಿಗಳ ಕ್ರೋಢೀಕರಣ, ನಿಯಮಾನುಸಾರ ನಡೆಸಬೇಕಾಗಿದ್ದ ವ್ಯಾವಹಾರಿಕ ಚಟುವಟಿಕೆಗಳು, ಪಂದ್ಯಾವಳಿಯ ಸಮಗ್ರ ಮಾಹಿತಿ ಸಲ್ಲಿಕೆ, ಇತ್ಯಾದಿ ರೀತಿಯ ಸವಾಲಿನ ಕೆಲಸಕಾರ್ಯದೊಂದಿಗೆ ಕುಂಡ್ಯೋಳAಡ ಕುಟುಂಬಸ್ಥರು, ಇತರರ ಸಹಕಾರದೊಂದಿಗೆ ಇದರಲ್ಲಿ ಯಶಸ್ಸು ಸಾಧಿಸಿ ಕೌಟುಂಬಿಕ ಹಾಕಿ ಉತ್ಸವದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಈ ಹಿಂದೆ ಕೌಟುಂಬಿಕ ಹಾಕಿ ಉತ್ಸವ ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿತ್ತಾದರೂ ಗಿನ್ನಿಸ್ ದಾಖಲೆ ವಿಚಾರದಲ್ಲಿ ಇದು ಪರಿಗಣನೆಗೆ ಬಾರದು, ಗಿನ್ನಿಸ್ ದಾಖಲೆಗಾಗಿಯೇ ಪ್ರತ್ಯೇಕವಾದ ನಿಯಮ- ವಿಧಿ- ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಇದರ ಬಗ್ಗೆ ಕಳೆದ ಆರು ತಿಂಗಳ ಹಿಂದಿನಿAದ ಸಂಚಾಲಕ ದಿನೇಶ್ ಕಾರ್ಯಪ್ಪ, ಅಧ್ಯಕ್ಷ ರಮೇಶ್ ಮುದ್ದಯ್ಯರಾದಿಯಾಗಿ ಕುಟುಂಬಸ್ಥರು ಎಲ್ಲಾ ಅಂಶಗಳನ್ನು ಮೊದಲು ಅರಿತುಕೊಂಡು ಪ್ರಯತ್ನಕ್ಕೆ ಇಳಿದಿದ್ದರು. ಗಿನ್ನಿಸ್ ದಾಖಲೆಗೆ ಸಂಬAಧಿಸಿದ ಮುಖ್ಯ ಕಚೇರಿ ಲಂಡನ್‌ನಲ್ಲಿದ್ದು, ಅಲ್ಲಿರುವ ಕುಂಡ್ಯೋಳAಡ ಕುಟುಂಬದವರೇ ಆದ ಲಿಖಿತ ತಮ್ಮಯ್ಯ ಅವರ ಮೂಲಕ ಆರಂಭಿಕ ಪ್ರಯತ್ನ ನಡೆಸಲಾಗಿತ್ತು. ಇದಾದ ಬಳಿಕ ಜಮ್ಮಡ ಗಣೇಶ್ ಅಯ್ಯಣ್ಣ ಇದಕ್ಕೆ ಸಂಬAಧಿಸಿದAತೆ ಕಾನೂನು ಸಲಹೆಗಾರರಾಗಿ ನಿಯೋಜನೆ ಮಾಡಿಕೊಂಡ ಕೇಟೋಳಿರ ಅರುಣ್ ಪೂವಯ್ಯ ಸೇರಿದಂತೆ ಕೆಲವರು ಅಗತ್ಯ ಸಹಕಾರ ನೀಡಿದ್ದರು. ಗಿನ್ನಿಸ್ ವಿಚಾರದಲ್ಲೇ ಪ್ರತ್ಯೇಕವಾದ ನಿಯಮಗಳು - ವಿವಿಧ ವಿಭಾಗಗಳಿದ್ದು, ಇವೆಲ್ಲವನ್ನೂ ಅನುಸರಿಸಬೇಕಾಗಿತ್ತು.

ಮೊದಲ ಹೆಜ್ಜೆಯಾಗಿ ಕುಟುಂಬ ತಂಡಗಳು ಎಂದರೇನು ಎಂಬುದನ್ನು ಗಿನ್ನಿಸ್ ತಂಡಕ್ಕೆ ಅರ್ಥೈಸುವುದೇ ಸವಾಲಿನ ಕೆಲಸವಾಗಿತ್ತು. ಈ ಪ್ರಯತ್ನದ ನಂತರ ಪಂದ್ಯಾವಳಿಗೆ ಚಾಲನೆ ಬಳಿಕ ಎಷ್ಟು ತಂಡಗಳು, ಎಷ್ಟು ತೀರ್ಪುಗಾರರು, ಪಂದ್ಯಾಟ ನಡೆಯುವ ರೀತಿ- ನೀತಿ, ಎಷ್ಟು ಆಟಗಾರರು, ಪಂದ್ಯಾವಳಿ ನಿರ್ದೇಶಕರು, ಜ್ಯೂರಿಯ ವಿವರ ಅಗತ್ಯವಿತ್ತು. ಇದಲ್ಲದೆ, ದಿನಂಪ್ರತಿ ತಂಡಗಳ ಭಾವಚಿತ್ರ, ಆಟದ ಚಿತ್ರ, ಮ್ಯಾನ್ ಆಫ್ ದಿ ಮ್ಯಾಚ್‌ನಂತಹ ವಿವರಗಳನ್ನು, ಪಂದ್ಯಾವಳಿ ನಿರ್ದೇಶಕ ಆಯಾ ದಿನದ ಪಂದ್ಯದ ವಿವರವನ್ನು ಜ್ಯೂರಿ, ಸಾಕ್ಷಿಗಳ ಸಹಿ ಸಹಿತವಾಗಿ ಆನ್‌ಲೈನ್ ಮೂಲಕ ವ್ಯವಸ್ಥಿತವಾಗಿ ಅಪ್‌ಲೋಡ್ ಮಾಡಬೇಕಾಗಿತ್ತು. ಮೂರು ಮೈದಾನದಲ್ಲಿ ಈ ಕೆಲಸ ನಿರ್ವಹಣೆಗೆ ಪ್ರತ್ಯೇಕ ತಂಡಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಇವರುಗಳು ಹಗಲಿರುಳೆನ್ನದೆ ಇದರಲ್ಲಿ ಶ್ರಮವಹಿಸಿದ್ದಾರೆ. ಎಲ್ಲಾ ವಿವರ - ದಾಖಲಾತಿಗಳನ್ನು ಗಿನ್ನಿಸ್ ತಂಡದವರು ಕೂಲಂಕಶವಾಗಿ ಪರಿಶೀಲನೆ ನಡೆಸುತ್ತಿದ್ದರು. ಗಿನ್ನಿಸ್‌ನವರ ಪ್ಯಾರಾಮೀಟರ್‌ನಲ್ಲಿ ‘ವಿನ್ರ‍್ಸ್ ಸ್ಪೇಸ್ ಆನ್’ ಎಂಬ ಅಂಶವೊAದನ್ನು ತಿಳಿಸಲಾಗಿತ್ತು. ಇದು ನಾಕೌಟ್ ಮಾದರಿ ಎಂಬುದು ಅರಿತುಕೊಳ್ಳಲು ಒಂದಷ್ಟು ಸಮಯ ಬೇಕಾಯಿತು. ಒಂದು ಕುಟುಂಬ ಎಂದರೆ ಕೇವಲ ಒಂದು ಸಂಸಾರ ಎಂಬ ಅಭಿಪ್ರಾಯದ ಹಿನ್ನೆಲೆ ಕೊಡವ ಒಕ್ಕಕ್ಲಾö್ಯನ್ ಎಂದರೇನು ಎಂಬ ಮಾಹಿತಿಯನ್ನೂ ಅರ್ಥೈಸಬೇಕಾಗಿತ್ತು. ಲಾರ್ಜೆಸ್ಟ್ ಫೀಲ್ಡ್ ಹಾಕಿ ಎಂಬ ಬಗ್ಗೆಯೂ ವಿವರದ ಅಗತ್ಯವಿತ್ತು. ಇಂತಹ ಹತ್ತು ಹಲವಾರು ಸವಾಲಿನ ಪ್ರಯತ್ನಗಳ ಬಳಿಕ ಈ ಪ್ರಕ್ರಿಯೆ ಒಂದು ಹಾದಿಗೆ ಬಂದಿತ್ತು. ಪಂದ್ಯಾವಳಿ ಮುಕ್ತಾಯಕ್ಕೆ ಕೇವಲ ಒಂದು ವಾರ ಮುಂಚಿತವಾಗಿ ‘‘ಅಫಿಷಿಯಲ್ ಎಟೆಂಪ್ಟ್ ಟು ಗಿನ್ನಿಸ್’’ ಎಂಬ ಸಂದೇಶ ಲಂಡನ್‌ನ ಮುಖ್ಯ ಕಚೇರಿಯಿಂದ ಆಯೋಜಕರಿಗೆ ಲಭ್ಯವಾಗಿತ್ತು. ಗಿನ್ನಿಸ್ ದಾಖಲೆಯಾಗದಿದ್ದರೂ ಈ ಅಫಿಷಿಯಲ್ ಎಟೆಂಪ್ಟ್ ಎನ್ನುವುದೇ ಒಂದು ದೊಡ್ಡ ರೀತಿಯ ದಾಖಲೆಯ ಸಾಧನೆ ಎನ್ನಬಹುದಾಗಿದೆ.

ಸಮಗ್ರ ಅಧ್ಯಯನದ ಬಳಿಕ ಫೈನಲ್‌ಗೆ ಎರಡು ದಿನ ಮುಂಚಿತವಾಗಿ ಗಿನ್ನಿಸ್ ದಾಖಲೆ ತಂಡದ ಪರವಾಗಿ ಮುಂಬೈಯವರಾದ ಸ್ವಪ್ನಿಲ್ ಅವರು ಫೈನಲ್ ದಿನದಂದು ನಾಪೋಕ್ಲುವಿಗೆ ಆಗಮಿಸಲಿದ್ದಾರೆ ಎಂಬ ಇ-ಮೇಲ್ ಸಂದೇಶ ಬಂದಾಗ ಕುಂಡ್ಯೋಳAಡ ಕಪ್ ಹಾಕಿ ಗಿನ್ನಿಸ್ ದಾಖಲೆ ಸೃಷ್ಟಿಸಲಿದೆ ಎಂಬುದು ಬಹುತೇಕ ಖಚಿತವಾಗಿದ್ದಾಗಿ ದಿನೇಶ್ ಕಾರ್ಯಪ್ಪ ಅವರು ಈ ಪರಿಶ್ರಮದ ಹಿಂದಿನ ಕಸರತ್ತಿನ ಬಗ್ಗೆ ‘ಶಕ್ತಿ’ಯೊಂದಿಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ಹಂಚಿಕೊAಡರು. ಇದೀಗ ಅಂತಿಮವಾಗಿ ೪೮೩೪ ಆಟಗಾರರ ಪಾಲ್ಗೊಳ್ಳುವಿಕೆೆ ಮೂಲಕ ಕುಂಡ್ಯೋಳAಡ ಕಪ್ ‘ವಲ್ಡ್÷್ರ್ಸ ಲಾರ್ಜೆಸ್ಟ್ ಫೀಲ್ಡ್ ಹಾಕಿ ಎಂಬ ದಾಖಲೆ ಸೃಷ್ಟಿಸಿದೆ. ಈ ಯಶಸ್ಸಿಗೆ ಕುಂಡ್ಯೋಳAಡ ಕುಟುಂಬದ ಎಲ್ಲರ ಪರಿಶ್ರಮ ಕೊಡವ ಹಾಕಿ ಅಕಾಡೆಮಿ, ಅಂಪರ‍್ಸ್, ತಾಂತ್ರಿಕ ತಂಡ ಸೇರಿದಂತೆ ತೆರೆಮರೆಯಲ್ಲಿ ಶ್ರಮಿಸಿರುವ ಎಲ್ಲರೂ ಕಾರಣೀಭೂತರು ಎಂಬುದು ಇವರ ಅಭಿಪ್ರಾಯವಾಗಿದೆ. -ಕಾಯಪಂಡ ಶಶಿ ಸೋಮಯ್ಯ.