ಪಾಲಿಬೆಟ್ಟ, ಮೇ ೫: ಸಹರಾ ಯೂತ್ ಕ್ಲಬ್ ಚೆನ್ನಯ್ಯನಕೋಟೆ ಆಶ್ರಯದಲ್ಲಿ ೩ನೇ ವರ್ಷದ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೇರಿರ ಅರುಣ್ ನೆರವೇರಿಸಿ ಮಾತನಾಡಿ, ಚೆನ್ನಯ್ಯನಕೋಟೆಯಲ್ಲಿ ಪ್ರತಿ ವರ್ಷ ಹಲವು ಕ್ರೀಡಾಕೂಟಗಳು ನಡೆಯುತ್ತಿದ್ದು, ಅದಕ್ಕೆ ಪ್ರೋತ್ಸಾಹವನ್ನು ಕೂಡ ಕ್ರೀಡಾಭಿಮಾನಿಗಳು ನೀಡುತ್ತಾ ಬರುತ್ತಿದ್ದಾರೆ. ಈ ಕ್ರೀಡಾ ಮನೋಭಾವ ಎಲ್ಲರಲ್ಲಿಯೂ ಸದಾ ಇರಲಿ ಎಂದು ಆಶಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಸಹರಾ ಯೂತ್ ಕ್ಲಬ್ನ ಅಧ್ಯಕ್ಷ ಸಿರಾಜ್ ಕೆ.ಎಸ್., ಪಂಚಾಯಿತಿ ಸದಸ್ಯರುಗಳಾದ ಎಂ.ಎನ್. ವಿಜು, ಶೀಲ, ನಿಯಾಜ್, ಸಮಾಜಸೇವಕರಾದ ರತೀಶ್ ಕುಮಾರ್, ಸಹರಾ ಯೂತ್ ಕ್ಲಬ್ನ ಕಾರ್ಯದರ್ಶಿ ಸಜರುದ್ದೀನ್, ಗೌರವಾಧ್ಯಕ್ಷ ನಿಶಾದ್, ಸಂಚಾಲಕರಾದ ಆಶೀಫ್ ಉಪಸ್ಥಿತರಿದ್ದರು.