ಗೋಣಿಕೊಪ್ಪಲು, ಮೇ ೫: ಪಟ್ಟಣದ ಒಣಮೀನು ಮಾರುಕಟ್ಟೆ ಹಿಂಭಾಗದ ಖಾಲಿ ಜಾಗದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು.

ಕುರುಚಲು ಕಾಡಿನಲ್ಲಿ ಬೆಂಕಿ ವ್ಯಾಪಿಸಿದ್ದನ್ನು ಗಮನಿಸಿದ ಸ್ಥಳೀಯ ಪೌರ ಕಾರ್ಮಿಕರು ಬೆಂಕಿ ನಂದಿಸಲು ಮುಂದಾದರು. ನಂತರ ಸುದ್ದಿ ತಿಳಿದ ಗೋಣಿಕೊಪ್ಪಲುವಿನ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವ ಮೂಲಕ ಮುಂದಾಗಬಹುದಾಗಿದ್ದ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.

ಸಂಜೆ ೭ ಗಂಟೆಯ ಸುಮಾರಿಗೆ ಖಾಲಿ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮರದ ಎಲೆಗಳು ಜಾಸ್ತಿ ಉದುರಿದ ಹಿನ್ನೆಲೆಯಲ್ಲಿ ಬೆಂಕಿಯ ಜ್ವಾಲೆ ಎಲೆಗಳಿಗೆ ತಗುಲಿದೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಎಂ. ಮಂಜುಳಾ, ಸದಸ್ಯರಾದ ಕೆ. ರಾಜೇಶ್ ಸೇರಿದಂತೆ ಗೋಣಿಕೊಪ್ಪ ಪೋಲಿಸರು ಭೇಟಿ ನೀಡಿದರು.