ಚೆಯ್ಯಂಡಾಣೆ, ಮೇ ೫: ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ಎಸ್ಎಫ್) ನಾಪೋಕ್ಲು ಶಾಖೆಯ ೨೦೨೪ -೨೫ ನೇ ಸಾಲಿನ ನೂತನ ಅಧ್ಯಕ್ಷರಾಗಿ ಪಿ.ಯು. ಯೂನಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಪೋಕ್ಲು ಪಟ್ಟಣದಲ್ಲಿರುವ ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕಛೇರಿಯಲ್ಲಿ ನಡೆದ ಎಸ್ಎಸ್ಎಫ್ ನಾಪೋಕ್ಲು ಶಾಖೆಯ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಟಿ.ಎಂ. ಹಾರಿಸ್, ಕೋಶಾಧಿಕಾರಿಯಾಗಿ ಪಿ.ಐ. ಫಾರೂಕ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಆಸಿಫ್, ಮೀಡಿಯಾ ಕಾರ್ಯದರ್ಶಿಯಾಗಿ ಪಿ.ಯು. ಅನೀಸ್, ರೈನ್ಬೋ ಕಾರ್ಯದರ್ಶಿಯಾಗಿ ಝಾಹಿದ್, ದಹವಾ ಕಾರ್ಯದರ್ಶಿಯಾಗಿ ನಾಸಿರ್ ಉಸ್ತಾದ್, ಕಲ್ಚರಲ್ ಕಾರ್ಯದರ್ಶಿಯಾಗಿ ರಶೀದ್, ಪಬ್ಲಿಕೇಶನ್ ಕಾರ್ಯದರ್ಶಿಯಾಗಿ ಶಾಹಿಲ್, ಕ್ವಾಲಿಟಿ ಡೆವಲಪ್ಮೆಂಟ್ ಕಾರ್ಯದರ್ಶಿಯಾಗಿ ಫಾಝಿಲ್, ಸಮಿತಿ ಸದಸ್ಯರಾಗಿ ರಹೀಮ್, ಅಸ್ಕರ್, ತಷ್ರೀಫ್, ಶಾಹಿದ್, ಇಸ್ಮಾಯಿಲ್, ವಾಜಿದ್, ಆಸ್ಕರ್, ಝುಬೈರ್, ಜೈಸಲ್, ಶಾಮಿಲ್, ಅಫ್ಸಲ್, ಟನೌಫಲ್, ಆಶಿರ್, ಮೆಹರೂಫ್, ನಾಝಿಮ್, ಅಫ್ವಾನ್, ಫರ್ಹಾನ್ ಆಯ್ಕೆ ಯಾಗಿದ್ದಾರೆ.