ಸಿದ್ದಾಪುರ, ಮೇ ೫: ಅರಣ್ಯ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣಾ ಬಳಗದ ಜಿಲ್ಲಾ ಅಧ್ಯಕ್ಷರಾಗಿ ಶರತ್ಕಾಂತ್ ಆಯ್ಕೆಯಾಗಿದ್ದಾರೆ.
ಅಮ್ಮತ್ತಿ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಉಪಾಧ್ಯಕ್ಷರಾಗಿ ರಾಘು, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ರೋಷನ್, ಸಾಮಾಜಿಕ ಜಾಲತಾಣದ ನಿರ್ವಹಣಾ ಜಿಲ್ಲಾಧ್ಯಕ್ಷರಾಗಿ ಸುರೇಶ್ ಪೂಜಾರಿ, ರಾಜ್ಯ ಅಧ್ಯಕ್ಷರಾಗಿ ಶಿವರಾಜ್, ಮಹಿಳಾ ಬಳಗದ ತಾಲೂಕು ಅಧ್ಯಕ್ಷರಾಗಿ ಕುಸುಮ, ಕಾರ್ಯದರ್ಶಿಗಳಾಗಿ ಪವಿತ್ರ ರೋಷನ್, ಶ್ವೇತಾ, ಆರತಿ ಆಯ್ಕೆಯಾಗಿದ್ದಾರೆ
ಜಿಲ್ಲಾಧ್ಯಕ್ಷ ಶರತ್ಕಾಂತ್ ಮಾತನಾಡಿ, ಅರಣ್ಯ, ಪರಿಸರ ಮತ್ತು ವನ್ಯಜೀವಿ, ಜೀವವೈವಿಧ್ಯತೆ ಸೇರಿದಂತೆ ಸಂರಕ್ಷಣಾ ದೃಷ್ಟಿಯಿಂದ ಸ್ಥಾಪಕ ರಾಜ್ಯಾಧ್ಯಕ್ಷ ಪ್ರಸನ್ನ ಕುಮಾರ್ ಅವರ ನಿರ್ದೇಶನದ ಮೇರೆಗೆ ಪರಿಸರ ಪ್ರೇಮಿಗಳು, ಪ್ರಾಣಿ ಹಾಗೂ ಉರಗ ರಕ್ಷಕರುಗಳನ್ನು ಒಗ್ಗೂಡಿಸಿ ಸಂಘಟನೆಯ ಬಳಗವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಪರಿಸರ, ವನ್ಯಜೀವಿ ಸಂರಕ್ಷಣೆ ಮಾಡುವುದರ ಮೂಲಕ ಕಾಳಜಿಯೊಂದಿಗೆ ಸೇವಾ ಕಾರ್ಯ ಮಾಡಲಿದ್ದೇವೆ ಎಂದರು.