ವರದಿ: ವಾಸು ಆಚಾರ್ಯ
ಸಿದ್ದಾಪುರ, ಏ. ೪: ೨೦೨೨ರಲ್ಲಿ ನಡೆದಿದ್ದ ದರೋಡೆ ಪ್ರಕರಣವೊಂದನ್ನು ಪತ್ತೆಹಚ್ಚಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೂಡ್ಲೂರು ನಿವಾಸಿ ಮುಕ್ಕಾಟಿ ಲವಕುಮಾರ್ (ವಸಂತ್-೫೧), ವೀರಾಜಪೇಟೆ ಅಯ್ಯಪ್ಪಬೆಟ್ಟ ನಿವಾಸಿ ಪಿ.ಎಸ್. ಅನೀಶ್ (೩೩), ಚೆನ್ನಂಗಿ ಗ್ರಾಮದ ಹೆಚ್.ಸಿ. ವಿನೋದ್ (೪೫), ಚೆನ್ನಂಗಿ ಅಬ್ಬೂರು ಗ್ರಾಮದ ಪ್ರವೀಣ್ ಕುಮಾರ್ (೪೦), ಭದ್ರಗೋಳ ನಿವಾಸಿ ಕೆ. ರಫೀಕ್ (೪೦) ಬಂಧಿತ ಆರೋಪಿಗಳು.
ಘಟನೆಯ ಹಿನ್ನೆಲೆ: ೨೦೨೨ ಜೂನ್ ೯ ರಂದು ಮಾಲ್ದಾರೆ ಚೆನ್ನಂಗಿ ಗೂಡ್ಲೂರು ಗ್ರಾಮದ ವೃದ್ಧ ದಂಪತಿ ತಂಗಪ್ಪ(೭೦) ಹಾಗೂ ಅವರ ಪತ್ನಿ ಜಾನಕಿ (೬೫) ಎಂಬವರು ತಮ್ಮ ತೋಟದ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ತಂಗಪ್ಪರವರು ಮನೆಯ ಹಿಂಬದಿಯ ಬಾಗಿಲನ್ನು ತೆಗೆದು ಮನೆಯ ಒಳಗಿನ ಕೋಣೆಯಲ್ಲಿ ಊಟ ಮಾಡುತ್ತಿದ್ದರು. ಅವರ ಪತ್ನಿ ಜಾನಕಿ ಮನೆಯ ಮುಂಭಾಗದ ಕೋಣೆಯಲ್ಲಿ ಟಿ.ವಿ. ನೋಡುತ್ತಿದ್ದರು. ಈ ಸಂದರ್ಭ ಮನೆಯ ಹಿಂಬದಿಯಿAದ ಮೂರು ಮಂದಿ ಮುಸುಕುಧಾರಿಗಳು ಕತ್ತಿಗಳನ್ನು ಹಿಡಿದುಕೊಂಡು ಮನೆಯ ಒಳಕ್ಕೆ ಪ್ರವೇಶಿಸಿ ತಂಗಪ್ಪ ಅವರನ್ನು ಬಲವಾಗಿ ಹಿಡಿದುಕೊಂಡು ಕತ್ತಿ ತೋರಿಸಿ ಹಣ ನೀಡುವಂತೆ ಬೆದರಿಕೆಯೊಡ್ಡಿದ್ದಾರೆ. ತಪ್ಪಿದಲ್ಲಿ ಕೊಲೆ ಮಾಡುವುದಾಗಿ ಬೆದರಿಸಿದ್ದರು. ಅಲ್ಲದೇ ಮನೆಯ ಬಾಗಿಲುಗಳನ್ನು ಭದ್ರಪಡಿಸಿದ ದರೋಡೆಕೋರರನ್ನು ಕಂಡು ಬೆದರಿದ ತಂಗಪ್ಪ
(ಮೊದಲ ಪುಟದಿಂದ) ತನ್ನ ಮನೆಯ ಬೀರುವಿನಲ್ಲಿ ಇಟ್ಟಿದ್ದ ರೂ. ೨ ಲಕ್ಷ ಹಣವನ್ನು ದರೋಡೆಕೋರರು ಬಲವಂತವಾಗಿ ಪಡೆದುಕೊಂಡು ನಂತರ ತಂಗಪ್ಪಅವರ ಸರವನ್ನು ಕಿತ್ತು ಪರಾರಿಯಾಗಿದ್ದರು. ಕತ್ತಿ ಹಿಡಿದು ಬೆದರಿಸುತ್ತಿರುವ ಸಂದರ್ಭದಲ್ಲಿ ಕೋಣೆಯಲ್ಲಿದ್ದ ತಂಗಪ್ಪ ಅವರ ಪತ್ನಿ ಜಾನಕಿ ಪತಿಯ ಬಳಿ ಬಂದಾಗ ಇವರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತೊಯ್ದಿದ್ದರು. ಈ ವೇಳೆ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಓರ್ವ ಆರೋಪಿ ಹಾಗೂ ಗೇಟ್ ಮುಂಭಾಗ ಮತ್ತೋರ್ವ ಆರೋಪಿ ನಿಂತಿದ್ದರು. ಕೃತ್ಯ ನಡೆಸಿ ಇವರು ಕಾರಿನಲ್ಲಿ ಪರಾರಿಯಾಗಿದ್ದರು.
ಪ್ರಮುಖ ಆರೋಪಿಯಾಗಿರುವ ವಸಂತ್ ಗೂಡ್ಲೂರು ಗ್ರಾಮದ ನಿವಾಸಿ ಆಗಿದ್ದು, ಈತ ಆಗ್ಗಿಂದಾಗೆ ತಂಗಪ್ಪ ಅವರ ಮನೆಗೆ ಬಂದು ಹೋಗುತ್ತಿದ್ದನು. ಅಲ್ಲದೇ ತಂಗಪ್ಪರವರ ಬಳಿ ಹಣವನ್ನು ಸಾಲ ಪಡೆದುಕೊಳ್ಳುತ್ತಿದ್ದನು ಎನ್ನಲಾಗಿದೆ. ಈತನೇ ಬೇರೆ ಆರೋಪಿಗಳಿಗೆ ಮಾಹಿತಿ ನೀಡಿ ತಂಗಪ್ಪನವರ ಮನೆಯಲ್ಲಿ ಹಣ ಇರುವ ವಿಚಾರ ತಿಳಿಸಿದ್ದ ಎಂದು ತನಿಖೆ ವೇಳೆ ಬಯಲಾಗಿದೆ. ತಂಗಪ್ಪರವರು ಅವರ ಮಗಳಿಗೆ ಬಾಡಿಗೆ ಮನೆ ಪಡೆಯಲು ಬ್ಯಾಂಕಿನಿAದ ತಂದಿಟ್ಟಿದ್ದ ಹಣವನ್ನು ದರೋಡೆಕೋರರು ಕದ್ದೊಯ್ದಿದ್ದರು. ದರೋಡೆ ಮಾಡಿದ ನಂತರ ಐದು ಮಂದಿ ಆರೋಪಿಗಳು ತಿತಿಮತಿ ಸಮೀಪದ ಅಬ್ಬೂರುಕಟ್ಟೆಯ ಚೈನ್ಗೇಟ್ ಬಳಿ ತಮ್ಮ ಮುಸುಕುಗಳನ್ನು ಸುಟ್ಟಿರುವುದಾಗಿ ತನಿಖೆಯ ಸಂದರ್ಭದಲ್ಲಿ ತಿಳಿದುಬಂದಿದೆ.
ಚೆನ್ನಂಗಿ ಗೂಡ್ಲೂರುವಿನ ನಿವಾಸಿಯಾಗಿರುವ ತಂಗಪ್ಪರವರ ಮನೆಯಲ್ಲಿ ದರೋಡೆ ನಡೆದು ೨ ವರ್ಷಗಳಾದರು ಕೂಡ ಆರೋಪಿಗಳು ಪತ್ತೆಯಾಗಿರಲಿಲ್ಲ. ಅಲ್ಲದೇ ಮಾಲ್ದಾರೆಯ ಗ್ರಾಮ ಸಭೆಯಲ್ಲಿ ಕೂಡ ಈ ವಿಚಾರ ಪ್ರಸ್ತಾಪ ಆಗಿತ್ತು. ಪೊಲೀಸರು ಕೂಡ ಸೂಕ್ತ ಸಾಕ್ಷಾö್ಯಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಬಿಟ್ಟಿದ್ದರು ಎನ್ನಲಾಗಿದೆ. ಆದರೆ ವೀರಾಜಪೇಟೆ ನಿವಾಸಿ ಆರೋಪಿ ಪಿ.ಎಸ್. ಅನೀಶ್ ಈತ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿದ್ದನು. ಈತನನ್ನು ಪೊಲೀಸರು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಗೂಡ್ಲೂರು ದರೋಡೆ ಪ್ರಕರಣ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಇದರ ಜಾಡು ಹಿಡಿದ ಸಿದ್ದಾಪುರ ಪೊಲೀಸರು ಇದೀಗ ದರೋಡೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಗೂಡ್ಲೂರು ನಿವಾಸಿ ಲವಕುಮಾರ್ ಎಂ.ಕೆ. (ವಸಂತ್) ಈತನ ವಿರುದ್ಧ ಈ ಹಿಂದೆ ಬೇರೆ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತ ವ್ಯವಸಾಯ ಮಾಡಿಕೊಂಡಿದ್ದಾನೆ.
ವೀರಾಜಪೇಟೆಯ ಅಯ್ಯಪ್ಪಬೆಟ್ಟ ನಿವಾಸಿಯಾಗಿರುವ ಹಾಗೂ ಆಟೋ ಚಾಲಕನಾಗಿರುವ ಪಿ.ಎಸ್. ಅನೀಶ್ ಎಂಬಾತನ ವಿರುದ್ಧ ಹನಿಟ್ರಾö್ಯಪ್ ಸೇರಿದಂತೆ ವೀರಾಜಪೇಟೆ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ.
ಚೆನ್ನಂಗಿ ಗ್ರಾಮದಲ್ಲಿ ಚಾಲಕ ವೃತ್ತಿ ಮಾಡಿಕೊಂಡಿರುವ ವಿನೋದ್ ಹೆಚ್.ಸಿ ದರೋಡೆಯಲ್ಲಿ ಭಾಗಿಯಾಗಿದ್ದಾನೆ. ಚೆನ್ನಂಗಿ ಅಬ್ಬೂರು ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿರುವ ಪ್ರವೀಣ್ಕುಮಾರ್ ಬೇರೊಂದು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಅಬ್ಬೂರು ತಾರಿಕಟ್ಟೆ ಭದ್ರಗೋಳ ಗ್ರಾಮದ ನಿವಾಸಿ ಹಾಗೂ ಚಾಲಕನಾಗಿರುವ ರಫೀಕ್ ಕೆ. ಈ ಹಿಂದೆ ಖಾಸಗಿ ಬಸ್ಸಿನಲ್ಲಿ ಚಾಲಕನಾಗಿದ್ದನು. ಈತ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಈತನ ಕಾರಿನಲ್ಲಿ ಆರೋಪಿಗಳು ಸುತ್ತಾಡುತ್ತಿದ್ದರು. ಆರೋಪಿ ರಫೀಕ್ಗೆ ಸೇರಿರುವ ಮಾರುತಿ ೮೦೦ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದರೋಡೆ ಪ್ರಕರಣದಲ್ಲಿ ಭಾಗಿಯಾದ ಐವರನ್ನು ಘಟನಾ ಸ್ಥಳಕ್ಕೆ ಪೊಲೀಸರು ಕರೆದುಕೊಂಡು ಹೋಗಿ ಮಹಜರು ನಡೆಸಿದರು ಹಾಗೂ ಮಾಹಿತಿ ಕಲೆ ಹಾಕಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ರವರ ಮಾರ್ಗ ದರ್ಶನದಲ್ಲಿ ಮಡಿಕೇರಿ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್ ರವರ ನೇತೃತ್ವದಲ್ಲಿ ಮಡಿಕೇರಿ ವೃತ್ತ ನಿರೀಕ್ಷಕ ರಾಜು, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ, ಕ್ರೆöÊಂ ಎಸ್.ಐ. ಹಾಲಪ್ಪ, ಸಹಾಯಕ ಠಾಣಾಧಿಕಾರಿ ರಾಜೇಶ್, ಮುಖ್ಯ ಪೇದೆಗಳಾದ ಬಸವರಾಜ್, ಕಿರಣ್, ಭರತ್ ಇನ್ನಿತರರು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಗ್ರಾಮಸ್ಥರ ಆಕ್ರೋಶ
ವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ಬೆದರಿಸಿ ಹಣ ಹಾಗೂ ಮಾಂಗಲ್ಯ ಸರವನ್ನು ದರೋಡೆ ಮಾಡಿದ ಆರೋಪಿಗಳನ್ನು ಗೂಡ್ಲೂರು ಗ್ರಾಮಕ್ಕೆ ತರುವ ವಿಚಾರ ತಿಳಿದು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.