ಮಡಿಕೇರಿ, ಮೇ ೩: ನಗರದ ಪೆನ್ಷನ್‌ಲೇನ್‌ನಲ್ಲಿರುವ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ತಾ. ೫ರಿಂದ ೭ರ ತನಕ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ತಾ.೫ರಂದು ಪಯ್ಯನೂರು ಆಚಾರ್ಯ ಈಶ್ವರ ನಂಬೂದರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯ ನಡೆಯಲಿದ್ದು, ಸಂಜೆ ೬ ಗಂಟೆಗೆ ಆಚಾರ್ಯ ವರಣಂ, ಪುಣ್ಯಾಹ ಶುದ್ಧ, ಸುದರ್ಶನ ಹೋಮ, ದೇವಿಪೂಜೆ, ಲಲಿತಾ ಸಹಸ್ರನಾಮಾರ್ಚನೆ, ಪ್ರಸಾದ ವಿತರಣೆ, ತಾ. ೬ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ನವಕ ಪಂಚಗವ್ಯ, ಕಳಸಪೂಜೆ, ಕಳಸಾಭಿಷೇಕ, ಸರ್ವಾಲಂಕಾರ ಪೂಜೆ, ಪಾಷಾಣಮೂರ್ತಿ ದೈವದ ಕಳಸಪೂಜೆ, ಅಲಂಕಾರ ಪೂಜೆ, ಮಂಗಳಾರತಿ ನಡೆಯಲಿದೆ. ನಂತರ ನಾಗಪ್ರತಿಷ್ಠಾಪನಾ ವಾರ್ಷಿಕೋತ್ಸಹಾಗೂ ನಾಗಪಾತ್ರಿ ಉಡುಪಿ ಪೆರ್ಲಂಪಾಡಿಯ ರಮಾನಂದ ಭಟ್ ಅವರಿಂದ ನಾಗದರ್ಶನ ಜೊತೆಗೆ ಆಶ್ಲೇಷಬಲಿ, ನಾಗಪೂಜೆ, ಕ್ಷೀರಾಭಿಷೇಕ, ಅನ್ನಸಂತರ್ಪಣೆ ನಡೆದು, ಸಂಜೆ ೭,೩೦ರಿಂದ ಪಾಷಾಣಮೂರ್ತಿ ದೈವಕೋಲ, ತಾ.೭ರ ಬೆಳಿಗ್ಗೆ ಪಾಷಾಣ ಮೂರ್ತಿ ಅಗೇಲು ಸೇವೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ವ