ಪೊನ್ನಂಪೇಟೆ, ಮೇ ೩: ಪೊನ್ನಂಪೇಟೆ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎ.ಎಸ್. ಶಾಂತೇಶ್ ಅವರು ಏ.೩೦ ರಂದು ವಯೋನಿವೃತ್ತಿ ಹೊಂದಿದ್ದು, ಅವರಿಗೆ ಪೊನ್ನಂಪೇಟೆ ಪಶು ಆಸ್ಪತ್ರೆ ಸಿಬ್ಬಂದಿಗಳು ಬೀಳ್ಕೊಡುಗೆ ನೀಡಿದರು.

ಡಾ. ಶಾಂತೇಶ್ ಅವರು ಕೊಡಗು ಜಿಲ್ಲೆಯಲ್ಲಿ ೨೯ ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಇವರು ಜಿಲ್ಲೆಯ ಮೂರ್ನಾಡು, ಪಾಲಿಬೆಟ್ಟ , ಚೇರಂಬಾಣೆ, ಅಮ್ಮತ್ತಿ, ವೀರಾಜಪೇಟೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಕಳೆದ ೪ ವರ್ಷಗಳಿಂದ ಪೊನ್ನಂಪೇಟೆ ಪಶು ಆಸ್ಪತೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.

ಈ ಸಂದರ್ಭ ಜಾನುವಾರು ಅಧಿಕಾರಿ ಪಿ. ಟಿ. ಸುರೇಶ್, ಪಶುವೈದ್ಯ ಪರೀಕ್ಷಕರಾದ ವಿ.ಎನ್. ಸ್ವಾತಿ, ಎನ್. ಎಂ. ಹೂವಯ್ಯ, ಎಸ್. ಶಿವಶಂಕರ್, ಪಾಷಾ, ಡಾ. ಶಾಂತೇಶ್ ಅವರ ಪತ್ನಿ ಶೈಲಜ ಮತ್ತು ಆಸ್ಪತ್ರೆ ಸಿಬ್ಬಂದಿಗಳು ಹಾಜರಿದ್ದರು. ಇದೇ ಸಂದರ್ಭ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಮೂಕಳೇರ ಮಧುಕುಮಾರ್, ಮಾಜಿ ಸದಸ್ಯೆ ಕಾವ್ಯ ಮಧುಕುಮಾರ್ ಅವರು ಡಾ. ಶಾಂತೇಶ್ ಅವರಿಗೆ ಕಿರುಕಾಣಿಕೆ ನೀಡಿ ಗೌರವಿಸಿದರು.