ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರ ದಲ್ಲಿರುವ ಕುಶಾಲನಗರ ಇಂಡಸ್ಟಿçÃಲ್ ವರ್ಕರ್ಸ್ ಯುನಿಯನ್ (ಐ.ಎನ್.ಟಿ.ಸಿಯು.) ವತಿಯಿಂದ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.

ಕೈಗಾರಿಕಾ ಕೇಂದ್ರದ ವಿವಿಧ ಕಾಫಿ ಘಟಕದ ಪುರುಷ ಮತ್ತು ಮಹಿಳಾ ಕಾರ್ಮಿಕರು ದಿನಾಚರಣೆ ಅಂಗವಾಗಿ ಕೈಗಾರಿಕಾ ಕೇಂದ್ರ ಸಮೀಪದಲ್ಲಿರುವ ಕೂಡು ಮಂಗಳೂರು ದೊಡ್ಡಮ್ಮ ತಾಯಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಾಲಯ ಆವರಣದಿಂದ ಕೈಗಾರಿಕಾ ಕೇಂದ್ರದ ವೃತ್ತವರೆಗೆ ನೂರಾರು ಕಾರ್ಮಿಕರು ಮೆರವಣಿಗೆ ಬಂದವರು ನಂತರ ಸರ್ಕಲ್‌ನಲ್ಲಿ ದಿನದ ಮಹತ್ವದ ಬಗ್ಗೆ ಯುನಿಯನ್‌ನ ಅಧ್ಯಕ್ಷ ಮಂಜುನಾಥ ಮಾತನಾಡಿದರು.

ಈ ಸಂದರ್ಭ ಕಾರ್ಯದರ್ಶಿ ಶಾಂತಾ, ಪ್ರಮುಖರಾದ ಲೀಲಾವತಿ, ಗೌರಮ್ಮ, ಇಂದಿರಮ್ಮ, ಸುಜಾತ, ಗಿರಿಜಾ ಸೇರಿದಂತೆ ನೂರಾರು ಕಾರ್ಮಿಕರು ಹಾಜರಿದ್ದರು.ಶನಿವಾರಸಂತೆ: ಪ್ರಸ್ತುತ ದೇಶದಲ್ಲಿ ರೈತರಂತೆಯೆ ಕಾರ್ಮಿಕರು ಸಹ ದೇಶದ ಬೆನ್ನೆಲುಬುಗಳಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ ಎಂದು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್. ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನೌಕರ ವರ್ಗದವರು ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿ ಕಾರ್ಮಿಕರನ್ನು ನಿರುದ್ಯೋಗ ಸಮಸ್ಯೆ ಕಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ದಿನನಿತ್ಯ ಇಂತಿಷ್ಟು ಕೂಲಿಯನ್ನು ನಿಗದಿ ಮಾಡಿ ಕೊಡುತ್ತಿರುವುದು ಸಂತೋಷದ ವಿಷಯ. ಕಟ್ಟಡ ಕಟ್ಟಲು, ಪಟ್ಟಣ ಸ್ವಚ್ಛ ಮಾಡಲು, ನೀರು ಬಿಡಲು ಕಾರ್ಮಿಕರು ಬೇಕು ಎಂದು ಅರಿತ ಜನ ಕಾರ್ಮಿಕ ದಿನಾರಣೆಯನ್ನು ಆಚರಿಸುತ್ತಿರುವುದು ಸಂತಸದ ವಿಚಾರ ಎಂದರು.

ಕಟ್ಟಡ ಕಾರ್ಮಿಕ ಸಂಘದ ಅಧ್ಯಕ ನಾಗೇಶ್ ಮಾತನಾಡಿ, ಕಾರ್ಮಿಕರಿಗೆ ಶುಭ ಕೋರಿದರು. ಸದಸ್ಯರು, ನೌಕರರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಶನಿವಾರಸಂತೆ ಕಾರ್ಮಿಕರ ಸಂಘದ ಕಚೇರಿಮಡಿಕೇರಿ: ಕೊಡಗು ಜಿಲ್ಲಾ ಎಐಟಿಯುಸಿ ಕಾರ್ಮಿಕ ಸಂಘಟನೆ ವತಿಯಿಂದ ಬಿಳಿಗೇರಿ ಗ್ರಾಮದಲ್ಲಿ ವಿಶ್ವ ಕಾರ್ಮಿಕರ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಎಐಟಿಯುಸಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಅವರ ನೇತೃತ್ವದಲ್ಲಿ ಟಾಟಾ ಸಂಸ್ಥೆಯ ಜಂಬೂರು ತೋಟದ ಕಾರ್ಮಿಕರ ಸಮ್ಮುಖದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು.

ಈ ಸಂದರ್ಭ ಮಾತನಾಡಿದ ಹೆಚ್.ಎಂ. ಸೋಮಪ್ಪ ಅವರು ಕಾರ್ಮಿಕರ ಶ್ರಮದಿಂದ ಇಂದು ದೇಶ ಪ್ರಗತಿಯನ್ನು ಸಾಧಿಸುತ್ತಿದೆ. ಕಾರ್ಮಿಕ ವರ್ಗ ಸದಾ ಒಗ್ಗಟ್ಟನ್ನು ಕಾಯ್ದು ಕೊಳ್ಳಬೇಕೆಂದು ಕರೆ ನೀಡಿದರು.

ನೆರೆದಿದ್ದ ಕಾರ್ಮಿಕರು ಶ್ರಮಿಕ ವರ್ಗದ ಪರ ಘೋಷಣೆಗಳನ್ನು ಕೂಗಿದರು. ಹೋಬಳಿ ಅಧ್ಯಕ್ಷ ಗಣೇಶ, ಕಾರ್ಮಿಕ ನಾಯಕ ಲೋಕೇಶ್, ಸೂರ್ಯ, ಪ್ರೇಮ, ಸಂಜೀವ, ಕೆ.ಎಂ. ನಾರಾಯಣ, ರಮೇಶ್ ಮತ್ತಿತರ ಕಾರ್ಮಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವೀರಾಜಪೇಟೆ: ಕಾರ್ಮಿಕರು ತಮ್ಮ ಆರೋಗ್ಯವನ್ನು ಉತ್ತಮವಾಗಿಟು ್ಟಕೊಂಡು ಸಂಘಟನೆ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳು ವಂತಾಗಬೇಕು ಎಂದು ವೀರಾಜಪೇಟೆ ವೈದ್ಯ ಡಾ. ಐ.ಆರ್. ದುರ್ಗಾಪ್ರಸಾದ್ ಹೇಳಿದರು.

ಅಂರ‍್ರಾಷ್ಟಿçÃಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಸಿಐಟಿಯು ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಹಿಂದಿನ ಕಾಲದಿಂದಲೂ ಕಾರ್ಮಿಕರುಗಳು ಹೋರಾಟಗಳನ್ನು ನಡೆಸುತ್ತಾ ಬಂದಿರುವ ಕಾರಣ ಸೌಲಭ್ಯಗಳು ದೊರಕುವಂತಾಗಿದೆ ಎಂದ ದುರ್ಗಾಪ್ರಸಾದ್ ಅವರು, ಸಂಘಟನೆ ಮೂಲಕ ಒಗ್ಗಟ್ಟಿನಿಂದ ಹೋರಾಟಗಳು ನಡೆದಾಗ ಹೋರಾಟಕ್ಕೆ ಶಕ್ತಿ ನೀಡಿದಂತಾಗುತ್ತದೆ. ಇದಕ್ಕೆ ಸರಕಾರ ಮತ್ತು ನಾಯಕರು ಸ್ಪಂದಿಸುವAತಾಗುತ್ತದೆ ಒಗ್ಗಟ್ಟಿನಿಂದ ಎಲ್ಲವನ್ನು ಬಗೆಹರಿಸಿಕೊಳ್ಳಲು ಸಾಧ್ಯ, ಕಾರ್ಮಿಕರು ಸಂಘಟನೆ ಮೂಲಕ ತಮ್ಮ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತದೆ ಹಲವಾರು ವರ್ಷಗಳ ಹಿಂದಿನ ಕಾರ್ಮಿಕ ಚಳುವಳಿ ಮತ್ತು ಹೋರಾಟಗಳಿಂದ ಇಂದು ಸೌಲಭ್ಯಗಳು ಸಾಧ್ಯವಾಗಿದೆ ಎಂದರು.

ಸಿಐಟಿಯು ಸಂಘಟನೆಯ ಜಿಲ್ಲಾ ಅಧ್ಯಕ್ಷ ಪಿ.ಆರ್. ಭರತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕರು ಮದ್ಯಪಾನದಿಂದ ಜೀವನವನ್ನು ಹಾಳು ಮಾಡಿಕೊಳ್ಳ ಬಾರದು. ದುಷ್ಚಟಗಳನ್ನು ದೂರಮಾಡಿ ಉತ್ತಮ ಜೀವನ ನಡೆಸುವಂತಾಗ ಬೇಕು. ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿ ಉಳಿಯದಂತೆ ಉತ್ತಮ ಶಿಕ್ಷಣ ನೀಡುವಂತಾಗಬೇಕು. ಕೇಂದ್ರ ಸರಕಾರ ದಿನನಿತ್ಯದ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ಕಾರ್ಮಿಕರು ಬಡ ಕುಟುಂಬಗಳು ಸಂಕಷ್ಟವನ್ನು ಎದುರಿಸುವಂತಾಗಿದೆ. ಆದಿವಾಸಿಗಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಬಡತನವನ್ನು ಹೋಗಲಾಡಿಸಲು ದುಡಿಯುವ ವರ್ಗಕ್ಕೆ ಸೌಲಭ್ಯಗಳ ಅಗತ್ಯವಿದೆ. ಮುಂದಿನ ದಿನದಲ್ಲಿ ಮೂಲ ಸೌಲಭ್ಯಗಳಿಗಾಗಿ ಕಾರ್ಮಿಕ ಸಂಘಟನೆಯಿAದ ಜಿಲ್ಲೆಯಲ್ಲಿ ಹೋರಾಟ ನಡೆಸುವುದಾಗಿ ಹೇಳಿದರು.

ಸಿಐಟಿಯು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎ.ಸಿ. ಸಾಬು ಮಾತನಾಡಿ, ಸಂವಿಧಾನದಲ್ಲಿ ಎಲ್ಲರು ಸಮಾನರು ಸ್ವಾತಂತ್ರö್ಯ ಬಂದು ೭೬ ವರ್ಷಗಳು ಕಳೆದರು ಮಹಿಳೆಯರ ಮೇಲಿನ ಶೋಷಣೆ ನಿಂತಿಲ್ಲ, ನಮ್ಮ ಸಂಘಟನೆಯಲ್ಲಿ ೪೦೦೦ ಸಾವಿರಕ್ಕೂ ಹೆಚ್ಚು ಸದಸ್ಯರಿದ್ದು, ಬಿಸಿಯೂಟ ಯೋಜನೆ ನೌಕರರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು ಸೇರಿದಂತೆ ಉಳಿದಿರುವ ಕಾರ್ಮಿಕರು ಸದಸ್ಯತ್ವ ಪಡೆದುಕೊಂಡು ಸೌಲಭ್ಯಗಳಿಗೆ ಮುಂದಾಗಬೇಕು. ಜಿಲ್ಲೆಯಲ್ಲಿ ಬಹಳಷ್ಟು ಕಾರ್ಮಿಕರಿಗೆ ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆ ಮತ್ತು ಲೈನ್‌ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಸರಕಾರ ಮನೆ ನಿರ್ಮಿಸಿ ಕೊಡುವಂತಾಗಬೇಕು. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಕಾರ್ಮಿಕ ಸಂಘಟನೆಗಳಿAದ ಹೋರಾಟದ ಅನಿವಾರ್ಯತೆ ಇರುವುದಾಗಿ ಸಾಬು ಹೇಳಿದರು.

ಸಂಘಟನೆಯ ಜಿಲ್ಲಾ ಖಜಾಂಚಿ ಎನ್.ಡಿ. ಕುಟ್ಟಪ್ಪ ಕಾರ್ಮಿಕರ ಸೌಲಭ್ಯಗಳ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸಿಐಟಿಯು ಜಿಲ್ಲಾ ಸಮಿತಿಯ ಸಂಚಾಲಕಿ ಪದ್ಮಿನಿ, ಹರಿದಾಸ್, ರಾಚಪ್ಪಜಿ, ಶಾಜಿ ರಮೇಶ್ ಉಪಸ್ಥಿತರಿದ್ದರು. ಜಿಲ್ಲೆಯ ಇತರೆಡೆಗಳಿಂದ ಕಾರ್ಮಿಕರುಗಳು ಭಾಗವಹಿಸಿದ್ದರು.ಶನಿವಾರಸಂತೆ: ಸ್ವಂತ ಸುಖ-ಸಂತೋಷಗಳನ್ನು ಬದಿಗೊತ್ತಿ ಕಟ್ಟಡ ನಿರ್ಮಾಣ ಮತ್ತಿತರ ಕೂಲಿ ಕೆಲಸಗಳಲ್ಲಿ ನಿಸ್ವಾರ್ಥ ಮನೋಭಾವದಿಂದ ತೊಡಗಿಸಿಕೊಳ್ಳುವ ಕಾರ್ಮಿಕರಿಗೆ ದುಡಿಮೆಯೇ ದೇವರು ಎಂದು ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕ ಹಾಗೂ ಇತರ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಜೆ. ವಿಠಲ ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಮಿಕರ ಸಂಘದ ಕಚೇರಿ ಆವರಣದಲ್ಲಿ ನಡೆದ ವಿಶ್ವ ಕಾರ್ಮಿಕ ದಿನಾಚರಣೆಯ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾರ್ಮಿಕರಿಗೆ ಶುಭ ಕೋರಿದರು. ಕಾರ್ಮಿಕರು ಉತ್ತಮ ಕೆಲಸಗಳನ್ನು ಮಾಡಬೇಕು. ಫೇಕ್ ಕಾರ್ಡ್ಗಳಿಗೆ ಮಾರುಹೋಗದೆ ಕಾನೂನಿನ ಅರಿವಿನ ಮೂಲಕ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ಬಿ.ಎಂ. ಲೋಕೇಶ್, ನಿರ್ದೇಶಕ ಎಂ. ಕೃಷ್ಣ, ಸದಸ್ಯರು, ಕಚೇರಿ ಸಿಬ್ಬಂದಿ ಗೀತಾ, ತುಂಗೇಶ್ ಇತರರು ಹಾಜರಿದ್ದರು.

ನೆಲ್ಲಿಹುದಿಕೇರಿ ಸಿ.ಐ.ಟಿ.ಯು. ಸಂಘಟನೆವೀರಾಜಪೇಟೆ: ಕಾರ್ಮಿಕರು ಶಿಕ್ಷಣ ಮತ್ತು ಉತ್ತಮ ಆರೋಗ್ಯದಿಂದ ವಂಚಿತರಾಗಿದ್ದಾರೆ. ಕಾರ್ಮಿಕರ ಬದುಕಿನಲ್ಲಿ ಪರಿಸ್ಥಿತಿಯನ್ನು ಗಮನಿಸಿದಾಗ ಭಾರತದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಎಐಸಿಸಿಟಿಯು ಸಂಘಟನೆಯ ರಾಜ್ಯ ಸಮಿತಿಯ ಅಧ್ಯಕ್ಷ ಕ್ಲಿಫ್ಟನ್ ರೊಜಾರಿಯೋ ಹೇಳಿದರು.

ಅಂರ‍್ರಾಷ್ಟಿçÃಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಅಖಿಲ ಭಾರತ ಕಾರ್ಮಿಕ ಸಂಘಟನೆ (ಎಐಸಿಸಿಟಿಯು) ವತಿಯಿಂದ ವೀರಾಜಪೇಟೆ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸರಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು, ಎಲ್ಲಾ ಜನತೆಗು ಆಹಾರ ಮತ್ತು ಉದ್ಯೋಗ ಒದಗಿಸುವಂತಾಗಬೇಕು. ಕಳೆದ ೧೦ ವರ್ಷಗಳಿಂದ ಕೇಂದ್ರ ಸರಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ನಿರುದ್ಯೋಗಿಗಳಿಗೆ ಕೂಡಲೇ ಉದ್ಯೋಗ ನೀಡಬೇಕು. ಕನಿಷ್ಟ ವೇತನ ರೂ. ೩೫ ಸಾವಿರ ನಿಗದಿ ಮಾಡಬೇಕು, ಗುತ್ತಿಗೆ ಪದ್ಧತಿ ರದ್ದಾಗಬೇಕು, ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸಬೇಕೆಂದು ಆಗ್ರಹಿಸಿದರು.

ಎಐಸಿಸಿಟಿಯು ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ.ಕೆ. ಮೋಹನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಕಾರ್ಮಿಕರು ಲೈನ್ ಮನೆಯಲ್ಲಿ ಹಾಗೂ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಅವರ ಸಾಲವನ್ನು ಮನ್ನಾ ಮಾಡಬೇಕು, ಸರಕಾರ ಸ್ವಂತ (ಸೂರು) ಮನೆ ಕಟ್ಟಿ ಕೊಡುವಂತೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.

ಇದಕ್ಕೂ ಮೊದಲು ಕಾರ್ಮಿಕರು ತಾಲೂಕು ಮೈದಾನದಿಂದ ಮೆರವಣಿಗೆ ಹೊರಟು ಗಡಿಯಾರ ಕಂಬದ ಬಳಿಯಿಂದ ಮುಖ್ಯರಸ್ತೆಯಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾಣ, ಸುಣ್ಣದಬೀದಿ, ಗೋಣಿಕೊಪ್ಪ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ದೊಡ್ಡಟಿ ಚೌಕಿ ಮಾರ್ಗವಾಗಿ ತಾಲೂಕು ಮೈದಾನದವರೆಗೂ ಮೆರವಣಿಗೆ ನಡೆಸಿದರು.

ಬಳಿಕ ಸಭಾ ಕಾರ್ಯಕ್ರಮ ನಡೆಯಿತು, ವೇದಿಕೆಯಲ್ಲಿ ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯ ಸುಬ್ಬ, ಸಂಘಟನೆಯ ಉಪಾಧ್ಯಕ್ಷ ತೋಲ, ಆದಿವಾಸಿ ಸಂಘದ ಕಾರ್ಯದರ್ಶಿ ಗೌರಿ, ಉಪ ಕಾರ್ಯದರ್ಶಿ ಬೊಳ್ಕ, ಆದಿವಾಸಿ ಸಂಘಟನೆಯ ಕುಮಾರ, ಕಾವಲ ಹಾಗೂ ಸಂಘದ ಸದಸ್ಯರುಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು.ಕುಶಾಲನಗರ: ಕಾರ್ಮಿಕ ದಿನಾಚರಣೆ ಅಂಗವಾಗಿ ಕುಶಾಲ ನಗರದ ವಿವಿಧೆಡೆ ಕಾರ್ಯಕ್ರಮಗಳು ನಡೆದವು. ಕುಶಾಲನಗರ ಕೈಗಾರಿಕಾ ಬಡಾವಣೆಯಲ್ಲಿ ಎಸ್‌ಎಲ್‌ಎನ್ ಕಾಫಿ ಸಂಸ್ಥೆಯ ಇನ್ಸ÷್ಟಂಟ್ ಕಾಫಿ ಘಟಕದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲೀಕ ಎಸ್‌ಎಲ್‌ಎನ್ ವಿಶ್ವನಾಥನ್ ಮತ್ತು ಎಸ್‌ಎಲ್‌ಎನ್ ಸಾತಪ್ಪನ್ ಅವರುಗಳು ಕಾರ್ಮಿಕರಿಗೆ ಶುಭಾಶಯ ಕೋರಿದರು. ಸಂಸ್ಥೆಯ ಏಳಿಗೆಗಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದರು.

ಸಂಸ್ಥೆಯ ಕಾರ್ಮಿಕರು ಸಿಬ್ಬಂದಿ ಗಳಿಗೆ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು ಮಹಿಳೆಯರಿಗೆ ರಂಗೋಲಿ, ಹಗ್ಗಜಗ್ಗಾಟ, ಪುರುಷರಿಗೆ ಭಾರ ಗುಂಡು ಎಸೆತ, ಹಗ್ಗಜಗ್ಗಾಟ, ಕ್ರಿಕೆಟ್ ಮತ್ತಿತರ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಿಗೆ ಟ್ರೋಫಿ ಬಹುಮಾನ ವಿತರಣೆ ನಡೆಯಿತು. ಸಂಸ್ಥೆಯಲ್ಲಿ ಹತ್ತು ವರ್ಷಕ್ಕೂ ಅಧಿಕ ಅವಧಿ ಸೇವೆ ಸಲ್ಲಿಸಿದ ಕಾರ್ಮಿಕರು, ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ವಿತರಿಸ ಲಾಯಿತು. ಈ ಸಂದರ್ಭ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ವೇಲಾಯಧನ್, ಶಿವರಾಮಕೃಷ್ಣ, ಎಂ.ಕೆ. ಸೋಮಯ್ಯ ಸೇರಿದಂತೆ ನೂರಾರು ಕಾರ್ಮಿಕರು, ಸಿಬ್ಬಂದಿಗಳು ನೌಕರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆ ಪ್ರೇಮ, ನಿರೂಪಣೆ ಗಜೇಂದ್ರ, ರವಿರಾಜು ಅವರಿಂದ ಸ್ವಾಗತ ಚೈತ್ರ ಅವರು ವಂದಿಸಿದರು. ಕಾರ್ಮಿಕ ದಿನಾಚರಣೆ ಅಂಗವಾಗಿ ಕೈಗಾರಿಕಾ ಬಡಾವಣೆಯ ಇಂಟಕ್ ಘಟಕದ ಕಾರ್ಮಿಕರು ಕೂಡ್ಲೂರು ದೊಡ್ಡಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ತೆರಳಿ ಇಂಟಕ್ ಅಧ್ಯಕ್ಷ ಮಂಜುನಾಥ್ ಅವರ ನೇತೃತ್ವದಲ್ಲಿ ಸರಳ ಕಾರ್ಯಕ್ರಮ ನಡೆಯಿತು.ಸಿದ್ದಾಪುರ: ಸಿ.ಐ.ಟಿ.ಯು. ಸಂಘಟನೆಯ ವತಿಯಿಂದ ಕಾರ್ಮಿಕರ ದಿನಾಚರಣೆಯನ್ನು ನೆಲ್ಲಿಹುದಿಕೇರಿ ಗ್ರಾಮದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಮುಖಂಡ ಪಿ.ಆರ್. ಭರತ್ ಕೇಂದ್ರ ಸರಕಾರವು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ದೇಶದಲ್ಲಿ ದಿನಬಳಕೆಯ ವಸ್ತುಗಳು ಗಗನಕ್ಕೇರಿದ್ದು ಬಡ ಜನತೆಯ ಜೀವನ ದುಸ್ತರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಎ.ಕೆ. ಹಕೀಂ, ಅಪ್ಸಲ್, ಅಂಗನವಾಡಿ ಕಾರ್ಯಕರ್ತೆ ಸತ್ಯ, ಕಾರ್ಮಿಕ ಸಂಘಟನೆಯ ಪದಾಧಿಕಾರಿ ಟಿ.ಟಿ. ಉದಯಕುಮಾರ್ ಇನ್ನಿತರರು ಹಾಜರಿದ್ದರು.